More

    ಕುಟುಂಬಸ್ಥರಿಗೆ ಹಣದಾಮಿಷವೊಡ್ಡಿ 14ರ ಬಾಲಕಿ ಜತೆಗೆ ವಿವಾಹವಾದ 42ರ ವ್ಯಕ್ತಿ: ಮುಂದೆ ನಡೆದಿದ್ದಿಷ್ಟು..

    ಥಾಣೆ: ಇತ್ತೀಚೆಗೆ 14 ವರ್ಷದ ಅಪ್ರಾಪ್ತ ಬಾಲಕಿಯನ್ನು ಮದುವೆಯಾದ 42 ವರ್ಷದ ವ್ಯಕ್ತಿ ಸೇರಿದಂತೆ 8 ಮಂದಿಯ ವಿರುದ್ಧ ಕಪುರಬಾವಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.

    ಮುಂಬೈನಲ್ಲಿ ವಾಸವಾಗಿರುವ ಕುಟುಂಬವೊಂದು ಮನೆಯ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲದ ಕಾರಣ 14ರ ಬಾಲಕಿಯ ಮದುವೆಗೆ ಮುಂದಾಗಿತ್ತು. ಈ ಮದುವೆಗೆ 42ರ ವ್ಯಕ್ತಿಯೇ ಪೋಷಕರಿಗೆ ಚಿನ್ನ, ಹಣದ ಆಮಿಷ ಒಡ್ಡಿ ಮದುವೆ ಸಮಾರಂಭಕ್ಕೆ ಎರಡು ತೊಲ ಚಿನ್ನಾಭರಣ, ಒಂದು ಲಕ್ಷ ರೂಪಾಯಿ ಸೇರಿದಂತೆ ಎಲ್ಲ ಖರ್ಚು ವೆಚ್ಚಗಳನ್ನು ಭರಿಸಬೇಕಿತ್ತು. ಹುಡುಗಿಯ ಪೋಷಕರು ಮದುವೆಗೆ ಒಪ್ಪಿಗೆ ನೀಡಿದ್ದರೂ, ಹುಡುಗಿ ಇದಕ್ಕೆ ವಿರುದ್ಧ ವ್ಯಕ್ತಪಡಿಸಿದ್ದಳು.

    ಇದನ್ನೂ ಓದಿ: ಗಂಡನಿಗಾಗಿ ಇಬ್ಬರು ಹೆಂಡತಿಯರು ಜಗಳ: ಕೊನೆಗೆ ‘ಈ’ ಸೂತ್ರದ ಮೂಲಕ ಸಂಧಾನ ಯಶಸ್ವಿ..!

    ಏತನ್ಮಧ್ಯೆ, ಬಾಲಕಿಯ ತಾಯಿ ನಿಧನಳಾಗಿದ್ದು, ಒಂದು ತಿಂಗಳ ಹಿಂದೆ ಬಾಲಕಿ ತನ್ನ ಕುಟುಂಬದೊಂದಿಗೆ ಥಾಣೆಯ ದಾದ್ಲಾನಿ ಪ್ರದೇಶದ ಬಾಲ್ಕೂಮ್‌ನಲ್ಲಿ ವಾಸಿಸಲು ಬಂದಿದ್ದಳು. ಈ ವೇಳೆ ವರನು ಹುಡುಗಿಯ ತಂದೆಗೆ ಸ್ವಲ್ಪ ಹಣವನ್ನು ನೀಡಿ ಮದುವೆಯ ನಿಶ್ಚಿತಾರ್ಥದ ನಂತರ ಆಗಸ್ಟ್ 22 ರಂದು ಮದುವೆಯ ದಿನಾಂಕವನ್ನು ನಿಗದಿಪಡಿಸಿದ್ದಾನೆ. ಆದರೆ ಹುಡುಗಿ ಮದುವೆಯಾಗುವುದಿಲ್ಲ ಎಂದು ಹಠ ಹಿಡಿದಿದ್ದು, ಆಕೆಯ ತಂದೆ ಅವಳ ಮಾತನ್ನು ಧಿಕ್ಕರಿಸಿದ್ದ.

    ಈ ನಡುವೆ ಹುಡುಗಿಯು ತನಗೆ ಮದುವೆ ಇಷ್ಟವಿಲ್ಲ ತನ್ನನ್ನು ರಕ್ಷಿಸಿ ಎಂದು ಹೇಳಿದ್ದಾಳೆ. ಆದರೆ ಮರುದಿನ ಬೆಳಿಗ್ಗೆ ಹುಡುಗಿಗೆ ದದ್ಲಾನಿಯ ಬಾಲ್ಕಮ್‌ನಲ್ಲಿ ಮದುವೆ ಮಾಡಲಾಗಿದೆ. ಈ ಸಂದರ್ಭದಲ್ಲಿ, ಹುಡುಗಿಯ ತಂದೆ ಮತ್ತು ಇತರ ಸಂಬಂಧಿಕರು ಹಾಗೂ ವರನ ಸಹೋದರ ಉಪಸ್ಥಿತರಿದ್ದು, ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಹಠಾತ್ತನೆ ಸ್ಥಳಕ್ಕೆ ಪ್ರವೇಶಿಸಿ ಕೆಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಇದನ್ನೂ ಓದಿ: ಶಾಲಾ ಬಾಲಕರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ ಮಾನಸಿಕ ಅಸ್ವಸ್ಥ..!

    ಮದುವೆಗೆ ಸಂಬಂಧಿಸಿದಂತೆ ಬಾಲಕಿ ನೀಡಿದ ದೂರಿನ ಮೇರೆಗೆ ಆಕೆಯ ತಂದೆ, ಚಿಕ್ಕಮ್ಮ ಮತ್ತು ಇತರ ಸಂಬಂಧಿಕರು ಮತ್ತು ಮಧುಮಗ, ಆತನ ಸಹೋದರ ಸೇರಿದಂತೆ ಒಟ್ಟು ಎಂಟು ಜನರ ವಿರುದ್ಧ ಕಪುರಬಾವಾಡಿ ಪೊಲೀಸ್ ಠಾಣೆಯಲ್ಲಿ ಬಾಲ್ಯ ವಿವಾಹ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.(ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts