ಖಾಲಿ ಹೊಟ್ಟೆಯಲ್ಲಿ ಎಂದಿಗೂ ಈ ಮೂರು ಆಹಾರಗಳನ್ನು ಸೇವಿಸಬೇಡಿ! ಇರಲಿ ಎಚ್ಚರ

WhatsApp Image 2024-04-04 at 9.09.39 AM
Published on

ಬೆಂಗಳೂರು: ಸಾಮಾನ್ಯವಾಗಿ ಬೆಳಗ್ಗೆ ಸಮಯ ಎಲ್ಲರೂ ಖಾಲಿ ಹೊಟ್ಟೆಯಲ್ಲಿರುತ್ತಾರೆ. ಎದ್ದ ತಕ್ಷಣ ಏನಾದರೂ ತಿನ್ನುವುದು, ಕುಡಿಯುವುದು ಹಲವರಿಗೆ ಒಂದು ರೀತಿ ಅಭ್ಯಾಸ! ಅದು ಕಾಫಿಯೇ ಆಗಿರಲಿ, ತಿಂಡಿಯೇ ಇರಲಿ ಅಥವಾ ಇನ್ಯಾವುದೇ ತಿನಿಸು ಪದಾರ್ಥಗಳೇ ಇರಲಿ, ಒಟ್ಟಿನಲ್ಲಿ ಸೇವನೆ ಮಾಡುವ ಅಭ್ಯಾಸವನ್ನು ರೂಢಿಸಿಕೊಂಡಿರುತ್ತಾರೆ. ಅತೀ ಹೆಚ್ಚಾಗಿ ನಾವು ಗಮನಿಸಿ ಹೇಳುವುದಾದರೆ, ಖಾಲಿ ಹೊಟ್ಟೆಯಲ್ಲಿ ಬಹುತೇಕರು ಕಾಫಿ, ಟೀ, ಬಿಸ್ಕತ್ತನ್ನು ಸೇವಿಸುತ್ತಾರೆ.

ನೀವು ಬೆಳಗ್ಗೆ ಸಮಯ ಅದರಲ್ಲೂ ಖಾಲಿ ಹೊಟ್ಟೆಯಲ್ಲಿದ್ದಾಗ ಎಂದಿಗೂ ಈ ಮೂರು ಆಹಾರಗಳನ್ನು ಸೇವಿಸಲೇಬೇಡಿ. ಇಲ್ಲಿಯವರೆಗೆ ಸೇವಿಸುವ ಅಭ್ಯಾಸವಿದ್ದರೆ ಅದನ್ನು ಇಂದೇ ಬಿಟ್ಟುಬಿಡಿ. ಅಸಲಿಗೆ ಯಾವ ಮೂರು ಆಹಾರ ಸೇವಿಸಬಾರದು ಎಂಬುದರ ಮಾಹಿತಿ ಈ ಕೆಳಕಂಡಂತಿದೆ ಗಮನಿಸಿ.

  • ಟೀ ಮತ್ತು ಕಾಫಿ: ಈ ಮೊದಲೇ ತಿಳಿಸಿದಂತೆ ಬೆಳಗ್ಗೆ ಎದ್ದ ಕೂಡಲೇ ಅನೇಕರು ಖಾಲಿ ಹೊಟ್ಟೆಯಲ್ಲಿ ಚಹಾ ಮತ್ತು ಕಾಫಿಯನ್ನು ಸೇವಿಸುತ್ತಾರೆ. ಇದರಿಂದ ಹೊಟ್ಟೆಯಲ್ಲಿ ಆಮ್ಲ ಉತ್ಪಾದನೆಯು ಹೆಚ್ಚಾಗುತ್ತದೆ. ಇದು ಆಮ್ಲೀಯತೆ, ಎದೆಯುರಿ ಮತ್ತು ಅಜೀರ್ಣ ಸಮಸ್ಯೆಗಳಿಗೆ ಕಾರಣವಾಗಬಹುದು. ಚಹಾ ಮತ್ತು ಕಾಫಿ ಎರಡೂ ಮೂತ್ರವರ್ಧಕ ಪರಿಣಾಮಗಳನ್ನು ಹೊಂದಿರುತ್ತವೆ. ಇದು ಆಹಾರ ಅಥವಾ ನೀರನ್ನು ಸೇವಿಸುವ ಮೊದಲು ಸೇವಿಸಿದರೆ ನಿರ್ಜಲೀಕರಣಕ್ಕೆ ಕಾರಣವಾಗಬಹುದು.
  • ಕರಿದ ಆಹಾರಗಳು: ಫ್ರೈಡ್​ ಆಹಾರಗಳು ಅನಾರೋಗ್ಯಕರ ಕೊಬ್ಬಿನಂಶವನ್ನು ಹೊಂದಿರುತ್ತವೆ. ಸಾಮಾನ್ಯವಾಗಿ ಡೀಪ್-ಫ್ರೈಡ್ ಆಗಿರುವ ತಿನಿಸುಗಳಂತೂ ದೇಹದಲ್ಲಿ ಕ್ಯಾಲೋರಿ ಅಂಶವನ್ನು ಹೆಚ್ಚಿಸುತ್ತದೆ. ಖಾಲಿ ಹೊಟ್ಟೆಯಲ್ಲಿ ಎಣ್ಣೆಯಲ್ಲಿ ಕರಿದ ಆಹಾರಗಳನ್ನು ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆಯ ಮೇಲೆ ಹೆಚ್ಚುವರಿ ಒತ್ತಡವನ್ನು ಉಂಟಾಗಬಹುದು. ಏಕೆಂದರೆ ಈ ಅನಾರೋಗ್ಯಕರ ಕೊಬ್ಬನ್ನು ಬ್ರೇಕ್ ಮಾಡಲು ಮತ್ತು ಜೀರ್ಣ ಪ್ರಕ್ರಿಯೆಗೆ ಸರಿಹೊಂದಿಸಲು ದೇಹವು ಹೆಚ್ಚು ಕೆಲಸ ಮಾಡುತ್ತದೆ. ಇದು ಜೀರ್ಣಕಾರಿ ಸಮಸ್ಯೆಗಳಿಗೆ ಹಾಗೂ ದೇಹದ ತೂಕ ಹೆಚ್ಚಲು ಪ್ರಮುಖ ಕಾರಣವಾಗಬಹುದು.
  • ಬ್ರೆಡ್‌-ಬಿಸ್ಕತ್​: ಈ ಆಹಾರಗಳು ಪ್ರತ್ಯೇಕವಾಗಿ ಸಂಸ್ಕರಿಸಿದ ಹಿಟ್ಟಿನಿಂದ ಮಾಡಲ್ಪಟ್ಟ ಕಾರಣ ಇದರಲ್ಲಿ ಸರಳ ಕಾರ್ಬೋಹೈಡ್ರೇಟ್‌ಗಳು ಮತ್ತು ಕಡಿಮೆ ಫೈಬರ್‌ ಇರುತ್ತವೆ. ಖಾಲಿ ಹೊಟ್ಟೆಯಲ್ಲಿ ಈ ಆಹಾರಗಳನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿ ತ್ವರಿತ ಏರಿಕೆಯಾಗಬಹುದು. ಇದರಿಂದ ಹಸಿವು ಹೆಚ್ಚುವುದು, ಹೆಚ್ಚು ಸಕ್ಕರೆ ಅಥವಾ ಅನಾರೋಗ್ಯಕರ ಆಹಾರಕ್ಕಾಗಿ ಕಡುಬಯಕೆ ಉಂಟಾಗುತ್ತದೆ. ಇದು ರಕ್ತದಲ್ಲಿನ ಸಕ್ಕರೆಯ ನಿಯಂತ್ರಣವನ್ನು ಅಡ್ಡಿಪಡಿಸುವುದರ ಜತೆಗೆ ನಿಶಕ್ತಿಗೆ ಕಾರಣವಾಗಬಹುದು.

ವಿಶೇಷ ಸೂಚನೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net