More

    ಈ ಹೋಟೆಲ್​ಗೆ ಮಾತ್ರ ಹೋಗಲೇಬೇಡಿ! ಇಲ್ಲಿಗೆ ಹೋದ್ರೆ ಖಂಡಿತ ಅವಮಾನ, ಕಣ್ಣೀರು ತಪ್ಪಿದ್ದಲ್ಲ

    ಬ್ರಿಟನ್: ಸಾಮಾನ್ಯವಾಗಿ ನಾವೆಲ್ಲಾ ಯಾವುದಾದರೂ ಸ್ಥಳೀಯ ಪ್ರೇಕ್ಷಣೀಯ ಸ್ಥಳ ಅಥವಾ ವಿದೇಶ ಪ್ರಯಾಣ ಬೆಳಸಿದರೆ ಮೊದಲು ನಾವು ಮಾಡುವ ಕೆಲಸ ಅಲ್ಲಿ ಉಳಿದುಕೊಳ್ಳಲು ಉತ್ತಮ, ಆರಾಮದಾಯಕ ವ್ಯವಸ್ಥೆ ಇರುವ ರೆಸ್ಟೋರೆಂಟ್ ಬುಕಿಂಗ್. ಯಾಕಂದ್ರೆ, ಎಷ್ಟೇ ಆಯಾಸ ಆಗಿದ್ದರೂ ಬಂದು ವಿಶ್ರಾಂತಿಸುವ ಜಾಗ ಚೆನ್ನಾಗಿರಬೇಕು ಹಾಗೂ ಒಳ್ಳೆ ಊಟದಿಂದ ನೆಮ್ಮದಿ ಅನಿಸಬೇಕು ಎಂದು. ಆದ್ರೆ, ಇಲ್ಲೊಂದು ಹೋಟೆಲ್​ನಲ್ಲಿ ಕೆಲಸ ಮಾಡುವ ಸಿಬ್ಬಂದಿಗಳು ನಿಮಗೆ ಖುಷಿಯಿರಲಿ, ಕಣ್ಣೀರಾಕಿಸದೆ ಕಳಿಸುವ ಮಾತೇ ಇಲ್ಲ!

    ಇದನ್ನೂ ಓದಿ: 25 ಲಕ್ಷ ರೂ. ಹಣಕ್ಕಾಗಿ ನಡೆಯಿತು ಬರ್ಬರ ಹತ್ಯೆ! ಗೋಣಿಚೀಲದಲ್ಲಿ ಬಾಲಕನ ಶವ ಪತ್ತೆ

    ಹಲವು ವಿಶೇಷ ಸೌಕರ್ಯಕ್ಕೆ ಹೆಸರುವಾಸಿಯಾಗಿರುವ ಹೋಟೆಲ್‌ಗಳ ಪೈಕಿ ಬ್ರಿಟನ್‌ನಲ್ಲಿ ಒಂದು ವಿಚಿತ್ರ ಹಾಗೂ ವಿಲಕ್ಷಣ ಎನ್ನುವಂತ ಹೋಟೆಲ್​ ಇದ್ದು, ಇಲ್ಲಿಗೆ ಆಗಮಿಸುವ ಜನರು ಸ್ವಇಚ್ಛೆಯಿಂದ ಮುಜುಗರಕ್ಕೆ ಒಳಗಾಗುವ ಪರಿಸ್ಥಿತಿ ಅಂತು ತೀರ ಆಶ್ಚರ್ಯ ಉಂಟುಮಾಡುತ್ತದೆ. ಇದನ್ನು ವಿಶ್ವದ ವಿಚಿತ್ರ ಹೋಟೆಲ್ ಎಂದು ಕರೆಯುತ್ತಾರೆ. ಅಚ್ಚರಿ ಅನಿಸಿದರೂ ಇದು ನಿಜವೇ!

    ಇದು ಅದ್ದೂರಿ ಹೋಟೆಲ್ ಏನೇಲ್ಲ! ಲಕ್ಸುರಿ ಸೌಕರ್ಯವನ್ನೂ ನೀಡುವುದಿಲ್ಲ. ಆದರೂ ಇಲ್ಲಿಗೆ ಬರುವ ಜನರು ಒಂದು ರಾತ್ರಿ ಉಳಿದುಕೊಳ್ಳಲು ಬರೋಬ್ಬರಿ 20,000 ರೂ.ಗೂ ಮೀರಿ ಪಾವತಿಸಲು ಸಿದ್ಧರಿದ್ದಾರೆ. ಹಾಗಾದ್ರೆ, ಅಂತದ್ದೇನಿದೆ ಈ ಹೋಟೆಲ್‌ನಲ್ಲಿ ಎಂದು ಯೋಚಿಸುವ ನಿಮಗೆ ಹೀಗಿದೆ ಉತ್ತರ. ಉಳಿದುಕೊಳ್ಳಲು ನನಗೆ ಅದು ಸರಿಯಿಲ್ಲ, ಇದು ಬೇಕಿದೆ ಎಂದು ನೀವೇನಾದರು ಹೋಟೆಲ್​ ಸಿಬ್ಬಂದಿಗಳನ್ನು ಕೇಳಿದ್ರೆ, ನಿಮ್ಮ ಮನಸ್ಸಿಗೆ ಘಾಸಿಯಾಗುವುದು ಖಚಿತ.

    ಇದನ್ನೂ ಓದಿ: ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣ: ಬೆಂಗಳೂರು ಮೂಲದ ಇಬ್ಬರು ಎನ್​​​ಐಎ ವಶಕ್ಕೆ

    ಈ ಹೋಟೆಲ್​ಗೆ ಬರುವ ಅತಿಥಿಗಳಲ್ಲಿ ಯಾರಾದರೂ ನೀರು ಕೊಡಿ ಎಂದು ಇಲ್ಲಿನ ಸಿಬ್ಬಂದಿಯನ್ನು ಕೇಳಿದರೆ, “ಹೋಗಿ ಸಿಂಕ್‌ನಿಂದ ಕುಡಿಯಿರಿ” ಎನ್ನುತ್ತಾರೆ. ನಲ್ಲಿ ನೀರಿನಿಂದ ಟೀ ಮಾಡುವ ಬಗ್ಗೆ ಪ್ರಶ್ನಿಸಿದ್ರೆ, ಹೀಗೇ ಮಾಡೋದು ಎಂದು ನಿಮ್ಮನ್ನೇ ಗದರಿಸುತ್ತಾರೆ. ಕೇಳುವ ಪ್ರತಿ ಪ್ರಶ್ನೆಗೂ ಕಠೋರವಾಗಿ ಉತ್ತರಿಸುತ್ತಾರೆ. ಈ ರೀತಿ ನಡೆದುಕೊಳ್ಳುವ ಮೂಲಕ ನಿಮ್ಮನ್ನು ನೋಯಿಸುವುದು ಇವರ ಉದ್ದೇಶ! ನಂಬಲು ಅಸಾಧ್ಯ ಅನಿಸಿದರು ನಂಬಲೇಬೇಕು.

    ಅತಿಥಿಗಳನ್ನು ಅವಮಾನಿಸಲೆಂದೇ ಈ ಹೋಟೆಲ್​ನ ಮಾಲೀಕರು ಉದ್ಯೋಗಿಗಳನ್ನು ಉದ್ದೇಶಪೂರ್ವಕವಾಗಿ ನೇಮಿಸಿಕೊಳ್ಳುತ್ತಾರೆ. ನೇಮಕ ಪ್ರಕ್ರಿಯೆಯಲ್ಲಿ ಅತಿಥಿಗಳನ್ನು ಅವಮಾನಿಸುವ ಕಾರ್ಯದ ಬಗ್ಗೆ ಉದ್ಯೋಗಿಗಳಿಗೆ ಮೊದಲೇ ತರಬೇತಿ ಕೊಡಲಾಗುತ್ತದೆ ಮತ್ತು ಹೆಚ್ಚುವರಿ ಮಾಹಿತಿಯನ್ನು ವಿವರಿಸಿರುತ್ತಾರೆ ಎಂದು ವರದಿ ತಿಳಿಸಿದೆ.

    ಇದನ್ನೂ ಓದಿ: ಬೀಜಿಂಗ್‌ ಹಿಂದಿಕ್ಕಿ ಮೊದಲ ಬಾರಿಗೆ ಏಷ್ಯಾದ ಬಿಲಿಯನೇರ್ಸ್ ರಾಜಧಾನಿಯಾದ ಕನಸಿನ ನಗರ ಮುಂಬೈ!

    ಕರೆನ್ ಎಂಬ ಹೆಸರಿನ ಹೋಟೆಲ್ ಲಂಡನ್‌ನಲ್ಲಿದೆ. ಇದು ಉತ್ತಮ ಊಟ, ವಿನ್ಯಾಸಗಳಿಗೆ ಅಲ್ಲದೇ ಈ ರೀತಿಯ ಅವಮಾನಕರ ವಿಷಯಗಳಿಗೆ ಹೆಸರುವಾಸಿಯಾದ ಕುಖ್ಯಾತ ರೆಸ್ಟೋರೆಂಟ್. ಬಹಳ ಕಡಿಮೆ ಅವಧಿಯಲ್ಲಿ ಈ ಹೋಟೆಲ್ ಜಾಗತಿಕ ಮಟ್ಟದಲ್ಲಿ​ ಸಿಕ್ಕಾಪಟ್ಟೆ ಜನಪ್ರಿಯತೆ ಗಳಿಸಿದೆ. ವರದಿಯ ಪ್ರಕಾರ, ಅತಿಥಿಯೊಬ್ಬರು ಹೋಟೆಲ್ ಅನುಭವದ ಬಗ್ಗೆ ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.

    “ನಾನು ತುಂಬಾ ಮೃದು ಸ್ವಭಾವಿ. ನಾನು ಸಮಾಜದಲ್ಲಿ ಮಾತನಾಡಲು ತುಂಬ ಯೋಚಿಸುತ್ತೇನೆ. ಯಾರೊಂದಿಗೂ ತಮಾಷೆ ಮಾಡುವುದಿಲ್ಲ. ಜೋಕ್​ಗಳನ್ನು ಸಹ ಕಡಿಮೆ ಅರ್ಥಮಾಡಿಕೊಳ್ಳುತ್ತೇನೆ. ಆದರೆ, ಈ ಹೋಟೆಲ್​ ಬಗ್ಗೆ ಮಾಹಿತಿ ಪಡೆದ ಮೇಲೆ ನನ್ನ ಭಯವನ್ನು ಎದುರಿಸಲು ಇಲ್ಲಿಗೆ ಬರಬೇಕು ಎಂದು ನಿರ್ಧರಿಸಿ ಬಂದಿದ್ದೇನೆ. ಅವರು ನನ್ನನ್ನು ಗದರಿಸುವುದು ನೋಡಿ ಒಂದು ಕೆಟ್ಟ ಕನಸಿನಂತೆ ಭಾಸವಾಯಿತು. ಆದರೆ ನನ್ನ ಭಯವನ್ನು ಎದುರಿಸಲು ಇದಕ್ಕಿಂತ ಉತ್ತಮವಾದ ಮಾರ್ಗವಿಲ್ಲ ಎಂದು ಅನಿಸಿದ್ದಂತು ನಿಜ. ಬಹುಶಃ ನಾನು ನಗುವನ್ನು ಕಂಡುಕೊಳ್ಳುತ್ತೇನೆ ಮತ್ತು ಇಲ್ಲಿನ ಅನುಭವಗಳಿಂದ ಮುಂದೆ ಏನನ್ನಾದರೂ ಕಲಿಯುತ್ತೇನೆ” ಎಂದು ತಿಳಿಸಿದ್ದಾರೆ.

    ಇದನ್ನೂ ಓದಿ: ಸಿನಿಮಾ ಸೆಟ್​ನಲ್ಲೇ ನಟಿಗೆ ಗರ್ಭಪಾತ!; ಪತ್ನಿ ಕಪಾಳಕ್ಕೆ ಹೊಡೆದಿದ್ರಾ ಈ ಸ್ಟಾರ್​ ನಟ…

    ಇಲ್ಲಿ ಟವೆಲ್‌ಗಳ ಬಳಕೆ ಇಲ್ಲದಿರುವುದರಿಂದ ಹಿಡಿದು ಟಾಯ್ಲೆಟ್ ಪೇಪರ್‌ವರೆಗೆ ನಿಮ್ಮನ್ನು ತೀವ್ರ ಮುಜುಗರಕ್ಕೆ ಒಳಪಡಿಸುತ್ತಾರೆ ಹಾಗೂ ಮನನೊಂದು ಕಣ್ಣೀರಿಡುವಂತೆ ಮಾಡುತ್ತಾರೆ. ಇದೇ ಈ ಹೋಟೆಲ್​ನ ವಿಶೇಷತೆ. 2021ರಲ್ಲಿ ಆಸ್ಟ್ರೇಲಿಯಾದಲ್ಲಿ ಈ ಹೋಟೆಲ್​ನ ತೆರೆಯಲಾಯಿತು. ಇದರ ಬ್ರಾಂಚ್​ ಈಗ ಬ್ರಿಟನ್‌ನಲ್ಲಿಯೂ ಇದೆ,(ಏಜೆನ್ಸೀಸ್).

    ದಯವಿಟ್ಟು ಇದನ್ನೆಲ್ಲಾ ತರಬೇಡಿ! ಇದರ ಬದಲಿಗೆ… ಕಳಕಳಿ ಮನವಿ ಮಾಡಿಕೊಂಡ ಅನು ಅಕ್ಕ

    ಅದೊಂದು ಪಾತ್ರ ನಾನು ಒಪ್ಪಬಾರದಿತ್ತು! ಆ ತಪ್ಪಿಂದ ನನ್ನ ಆಸೆಯೇ ನುಚ್ಚುನೂರಾಯ್ತು: ನಟಿ ಅರ್ಚನಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts