More

    ಹೋಪ್ ಗಾಲಾ ಈವೆಂಟ್​​​​​ನಲ್ಲಿ ಎಲ್ಲರ ಗಮನ ಸೆಳೆದ ಆಲಿಯಾ ಧರಿಸಿದ ಸೀರೆ, ನೆಕ್ಲೇಸ್…ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!

    ಮುಂಬೈ: ಆಲಿಯಾ ಭಟ್ ಇತ್ತೀಚೆಗೆ ತಮ್ಮ ಮೊದಲ ಚಾರಿಟಿ ಕಾರ್ಯಕ್ರಮವನ್ನು ಆಯೋಜಿಸಲು ಲಂಡನ್ ತಲುಪಿದ್ದಾರೆ. ಈ ಸಮಯದಲ್ಲಿ ಅನೇಕ ಗಣ್ಯರು ಭಾಗವಹಿಸಿದ್ದರು. ಅಂದಹಾಗೆ ಕಾರ್ಯಕ್ರಮದಲ್ಲಿ ಆಲಿಯಾ ಲುಕ್ ಜನರ ಗಮನಸೆಳೆಯಿತು.

    ಹೌದು, ಸಲಾಮ್ ಬಾಂಬೆ ಫೌಂಡೇಶನ್‌ನ ‘ಹೋಪ್ ಗಾಲಾ’ ಕಾರ್ಯಕ್ರಮಕ್ಕೆ ಕೋಟ್ಯಂತರ ಮೌಲ್ಯದ ಆಭರಣಗಳನ್ನು ಧರಿಸಿ ಆಲಿಯಾ ಭಟ್ ಭಾಗವಹಿಸಿದ್ದು ಎಲ್ಲರ ಗಮನ ಸೆಳೆದಿದೆ. ಇದಲ್ಲದೇ ಆಕೆಯ ಉಡುಗೆ ತೊಡುಗೆಗಳು ಕೂಡ ಹೆಚ್ಚು ಚರ್ಚೆಗೆ ಗ್ರಾಸವಾಗಿದ್ದವು.

    ಹೋಪ್ ಗಾಲಾ ಈವೆಂಟ್‌ನಿಂದ ಆಲಿಯಾ ಭಟ್ ಅವರ ಎರಡು ಲುಕ್‌ ರಿವೀಲ್ ಆಗಿದೆ. ಮೊದಲು ವೈನ್ ಬಣ್ಣದ ಗೌನ್‌ನಲ್ಲಿ ಕಾಣಿಸಿಕೊಂಡ ಆಲಿಯಾ, ನಂತರ ದಂತದ ಬಣ್ಣದ ಸೀರೆಯಲ್ಲಿ ಕಾಣಿಸಿಕೊಂಡರು.

    ಮೊದಲ ಲುಕ್ ಬಗ್ಗೆ ಹೇಳುವುದಾದರೆ ವಜ್ರದ-ನೀಲಮಣಿಯ ನೆಕ್ಲೇಸ್ ಮತ್ತು ಅದಕ್ಕೆ ಹೊಂದುವ ಉಂಗುರದೊಂದಿಗೆ ವೈನ್ ಬಣ್ಣದ ಸ್ಟ್ರಾಪಿ ಗೌನ್ ಧರಿಸಿ ಆಲಿಯಾ ತುಂಬಾ ಸುಂದರವಾಗಿ ಕಾಣುತ್ತಿದ್ದರು. ಮೇಕಪ್ ಮಾತ್ರ ಸಿಂಪಲ್ ಆಗಿ ಮಾಡಿದ್ದರು. ಬಲ್ಗೇರಿಯ ವೆಬ್‌ಸೈಟ್ ಪ್ರಕಾರ, ಆಲಿಯಾ ನೆಕ್ಲೇಸ್-ರಿಂಗ್ ಬೆಲೆ ಸುಮಾರು 20 ಕೋಟಿ ರೂ. ಈ ಆಭರಣವು ಇಟಾಲಿಯನ್ ಬ್ರಾಂಡ್‌ನ 2020 ಬೊರೊಕೊ ಸಂಗ್ರಹದ ಭಾಗವಾಗಿದೆ.

    ಮತ್ತೊಂದು ಫೋಟೋ ಗಮನಿಸದಾಗ ಅವರು ವಿನ್ಯಾಸಕರಾದ ಅಬು ಜಾನಿ ಮತ್ತು ಸಂದೀಪ್ ಖೋಸ್ಲಾ ಅವರ ದಂತದ ಬಣ್ಣದ ಸೀರೆಯನ್ನು ಧರಿಸಿದ್ದರು. ಇನ್‌ಸ್ಟಾಗ್ರಾಮ್‌ನಲ್ಲಿ ಆಲಿಯಾ ಅವರ ಫೋಟೋಗಳನ್ನು ಹಂಚಿಕೊಳ್ಳುವಾಗ ಸೀರೆಯ ವಿವರಗಳನ್ನು ನೀಡಿದ್ದಾರೆ. ಅದರ ಪ್ರಕಾರ, 1994 ರಲ್ಲಿ ಕೈಯಿಂದ ಮಾಡಿದ ಸೀರೆಯಿದು. ತಯಾರಿಕೆ 3500 ಗಂಟೆಗಳು ಬೇಕಾದವು. ಈ ದಂತದ ಬಣ್ಣದ ಹೂವಿನ ರೇಷ್ಮೆ ಸೀರೆಯನ್ನು ರೇಷ್ಮೆ ದಾರಗಳಿಂದ ಕಸೂತಿ ಮಾಡಲಾಗಿದೆ.

    ಆಲಿಯಾ ಅವರ ಹಾಲ್ಟರ್ ನೆಕ್ ಟ್ಯೂಲ್ ಬ್ಲೌಸ್‌ನ ವಿವರಗಳನ್ನು ನೀಡಿದ್ದಾರೆ. ಕುಪ್ಪಸವು ಹಿಂಭಾಗದಲ್ಲಿ ಮುತ್ತುಗಳ ಜೊತೆಗೆ ರೇಷ್ಮೆ, ಬೆಳ್ಳಿಯ ಝರಿ ಮತ್ತು ಹರಳುಗಳನ್ನು ಒಳಗೊಂಡಿದೆ. ಅನೇಕ ಫೋಟೋಗಳಲ್ಲಿ, ಆಲಿಯಾ ಈವೆಂಟ್‌ಗೆ ಹಾಜರಾಗುವ ಇತರ ಅತಿಥಿಗಳೊಂದಿಗೆ ಪೋಸ್ ನೀಡುವುದನ್ನು ಸಹ ಕಾಣಬಹುದು.

    ಆಲಿಯಾ ಭಟ್ ಅವರು ‘ಹೋಪ್ ಗಾಲಾ’ ಕಾರ್ಯಕ್ರಮದಿಂದ ತಮ್ಮ ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಒಂದರಲ್ಲಿ ನೃತ್ಯ ಮಾಡುತ್ತಿರುವುದನ್ನು ಗಮನಿಸಬಹುದು. ಆಲಿಯಾ ಅನೇಕ ಫೋಟೋಗಳನ್ನು ಹೊಂದಿರುವ ಕೊಲಾಜ್ ಅನ್ನು ಸಹ ಹಂಚಿಕೊಂಡಿದ್ದಾರೆ. ಈ ಫೋಟೋಗಳಲ್ಲಿ, ಆಲಿಯಾ ಕಾರ್ಯಕ್ರಮವನ್ನು ಹೋಸ್ಟ್ ಮಾಡುತ್ತಿರುವುದು ಕಂಡುಬರುತ್ತದೆ. 

    ಟೀ ಮಾಡುವ ವೇಳೆ ಸಿಲಿಂಡರ್ ಸ್ಫೋಟಗೊಂಡು 11 ತಿಂಗಳ ಮಗು ಸೇರಿದಂತೆ 4 ಮಂದಿ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts