More

    ಸಿನಿಮಾ ಸೆಟ್​ನಲ್ಲೇ ನಟಿಗೆ ಗರ್ಭಪಾತ!; ಪತ್ನಿ ಕಪಾಳಕ್ಕೆ ಹೊಡೆದಿದ್ರಾ ಈ ಸ್ಟಾರ್​ ನಟ…

    ಮುಂಬೈ: ನ್ಯಾಚುಲರ್ ಬ್ಯೂಟಿ, ಬಾಲಿವುಡ್​​ ನಟಿ ಕಾಜೋಲ್. ಅಜಯ್ ಮತ್ತು ಕಾಜೋಲ್ ಸಿನಿಮಾದಲ್ಲಿ ಮಾತ್ರವಲ್ಲದೆ ರಿಯಲ್​ ಲೈಪ್​ನಲ್ಲಿಯೂ ಒಳ್ಳೆಯ ಜೋಡಿಯಾಗಿದ್ದಾರೆ. ಈ ಸ್ಟಾರ್​ ಕಪಲ್ ಕುರಿತಾದ ಸುದ್ದಿಯೊಂದು ವೈರಲ್​​ ಆಗಿದೆ. ಸಿನಿಮಾ ಮೇಲಿನ ಪ್ರೀತಿ ದಂಪತಿ ಜೀವನದಲ್ಲಿ ಕೆಲವು ಸಮಸ್ಯೆ ಉಂಟು ಮಾಡಿತ್ತು.ಸಿನಿಮಾ ಸೆಟ್​ನಲ್ಲೇ ನಟಿಗೆ ಗರ್ಭಪಾತ!; ಪತ್ನಿ ಕಪಾಳಕ್ಕೆ ಹೊಡೆದಿದ್ರಾ ಈ ಸ್ಟಾರ್​ ನಟ...

    ಸಿನಿಮಾರಂಗದಲ್ಲಿ ಟಾಪ್ ಹೀರೋಯಿನ್ ಪಟ್ಟಕ್ಕೇರಿದ ಕಾಜೋಲ್ ಡಿಮ್ಯಾಂಡ್ ಇರುವಾಗ್ಲೆ ಅಜಯ್ ದೇವಗಾನ್ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ರು. ಶಾರುಖ್-ಕಾಜಲ್ ಕೆಮಿಸ್ಟ್ರಿ ಅದ್ಬುತವಾಗಿತ್ತು. 2001 ರಲ್ಲಿ ಶಾರುಖ್-ಕಾಜಲ್ ಅಭಿನಯದ ‘ಕಬಿ ಖುಷಿ ಕಬಿ ಗಮ್’ ಚಿತ್ರದ ಚಿತ್ರೀಕರಣದಲ್ಲಿ ಕಾಜೋಲ್ ಜೀವನದಲ್ಲಿ ಒಂದು ದುರಂತ ಘಟನೆ ಸಂಭವಿಸಿದೆ. ಕಾಜೋಲ್‌ ಈ ಸಿನಿಮಾ ಮಾಡುವಾಗ ಗರ್ಭಿಣಿಯಾಗಿದ್ದರು ಎನ್ನಲಾಗಿತ್ತು.

    ಸಿನಿಮಾ ಸೆಟ್​ನಲ್ಲೇ ನಟಿಗೆ ಗರ್ಭಪಾತ!; ಪತ್ನಿ ಕಪಾಳಕ್ಕೆ ಹೊಡೆದಿದ್ರಾ ಈ ಸ್ಟಾರ್​ ನಟ...

    ಕಾಜೋಲ್ ಅನಾರೋಗ್ಯಕ್ಕೆ ಒಳಗಾಗಿದ್ದರು. ಕಬಿ ಖುಷಿ ಕಬಿ ಗಮ್ ಚಿತ್ರದ ಸೆಟ್ ನಲ್ಲಿ ಹಾಡಿನ ಚಿತ್ರೀಕರಣದ ವೇಳೆ ಕಾಜೋಲ್ ಕೆಳಗೆ ಬಿದ್ದಿದ್ದಾರೆ. ಸುದ್ದಿ ತಿಳಿದು ಪತಿ ಅಜಯ್ ಶೂಟಿಂಗ್ ನಡೆಯುತ್ತಿದ್ದ ಜಾಗಕ್ಕೆ ಓಡೋಡಿ ಬಂದಿದ್ರು. ಆ ಸಮಯದಲ್ಲಿ ಕಾಜಲ್ ಪ್ರಜ್ಞೆ ತಪ್ಪಿದ್ದರು. ಪತ್ನಿಯ ಸ್ಥಿತಿ ಕಂಡು ಅಜಯ್ ಕೂಡ ಗಾಬರಿಯಾಗಿದ್ರು. ಕೊಂಚ ಸುಧಾರಿಸಿಕೊಂಡ ಕಾಜೋಲ್ ಮೇಲೆ ಅಜಯ್ ಕೋಪಗೊಂಡಿದ್ದರು. ಸೆಟ್ ನಲ್ಲಿ ಎಲ್ಲರ ಮುಂದೆ ಪತಿ-ಪತ್ನಿ ಜಗಳವಾಡಿದ್ರು. ಕಾಜೋಲ್  ಈ ಹಿಂದೆ ಎರಡು ಬಾರಿ ಗರ್ಭಪಾತವಾಗಿತ್ತು. ಇದರಿಂದ ಟೆನ್ಷನ್‌ ಆಗಿದ್ದ ಅಜಯ್‌  ಎಲ್ಲರ ಮುಂದೆ ಕಾಜೋಲ್ ಗೆ ಕಪಾಳಕ್ಕೆ ಹೊಡೆದಿದ್ದರು ಎನ್ನುವ ಸುದ್ದಿ ನ್ಯಾಷನಲ್ ಮಾಧ್ಯಮದಲ್ಲಿ ವರಿಯಾಗಿದ. ಆದ್ರೆ. ಈ ಬಗ್ಗೆ ಸ್ವತಃ ಕಾಜಲ್ ಏನನ್ನೂ ಹೇಳಿಲ್ಲ.

    ಸಿನಿಮಾ ಸೆಟ್​ನಲ್ಲೇ ನಟಿಗೆ ಗರ್ಭಪಾತ!; ಪತ್ನಿ ಕಪಾಳಕ್ಕೆ ಹೊಡೆದಿದ್ರಾ ಈ ಸ್ಟಾರ್​ ನಟ...

    ಸೆಟ್ ಗೆ ಬಂದ ಅಜಯ್, ಕಾಜೋಲ್ ಮೇಲೆ ಮಾತ್ರವಲ್ಲ ನಿರ್ದೇಶಕ ಕರಣ್ ಜೋಹರ್, ಅಜಯ್ ಮೇಲೂ ಕೂಡ ಕೋಪಗೊಂಡಿದ್ದರು. ಅಜಯ್ ಅನಾರೋಗ್ಯದಿಂದ ಬಳಲುತ್ತಿದ್ದ ನಟಿ ಕಾಜೋಲ್ ಡ್ಯಾನ್ಸ್ ಮಾಡಿದ್ದಕ್ಕಾಗಿ ಅಜಯ್ ತುಂಬಾ ಕೋಪಗೊಂಡಿದ್ರು. ಈ ಘಟನೆ ಬಳಿಕ ನಿರ್ದೇಶಕ ಕರಣ್ ಜೋಹರ್ ಜೊತೆ ನಟ ಅಜಯ್ ಮಾತು ಬಿಟ್ಟಿದ್ರು. ಕಾಲ ಕಳೆದಂತೆ ಎಲ್ಲವೂ ಮರೆತು ಮತ್ತೆ ಒಂದಾದ್ರು.

    ಶಾರುಖ್ ಖಾನ್ ಮತ್ತು ಕಾಜೋಲ್ ತೆರೆ ಮೇಲೆ ಹಿಟ್ ಜೋಡಿಯಾಗಿದ್ರೆ, ಇತ್ತ ಆಫ್-ಸ್ಕ್ರೀನ್ ಜೋಡಿ ಅಜಯ್, ಕಾಜೋಲ್ ಅನೇಕರಿಗೆ ಮಾದರಿಯಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts