ಮತ್ತೊಮ್ಮೆ ಆರ್​ಸಿಬಿ ದಾಖಲೆ ಪುಡಿ ಪುಡಿ! ಮೂರನೇ ಸ್ಥಾನಕ್ಕೆ ತಳ್ಳಿದ ಕೆಕೆಆರ್​

WhatsApp Image 2024-04-04 at 8.31.02 AM
Published on

ವಿಶಾಖಪಟ್ಟಣ: ಐಪಿಎಲ್ 2024ರ 16ನೇ ಪಂದ್ಯದಲ್ಲಿ ವೈಜಾಗ್​ನಲ್ಲಿ ಮುಖಾಮುಖಿಯಾದ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೊಲ್ಕತ್ತಾ ನೈಟ್​ ರೈಡರ್ಸ್ ತಂಡಗಳ ನಡುವೆ ಭರ್ಜರಿ ಪೈಪೋಟಿ ನಡೆಯಿತು. ಕಡೆಗೂ 106 ರನ್​ಗಳಿಂದ ಡೆಲ್ಲಿಯನ್ನು ಮಣಿಸಿದ ಕೆಕೆಆರ್​ ಲೀಗ್​ನಲ್ಲಿ ಸತತ ಮೂರನೇ ಗೆಲುವು ದಾಖಲಿಸುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಗಿಟ್ಟಿಸಿಕೊಂಡಿದೆ.

ಟಾಸ್​ ಗೆದ್ದ ಕೆಕೆಆರ್​ ಮೊದಲು ಬ್ಯಾಟಿಂಗ್ ಆಯ್ದುಕೊಳ್ಳುವ ಮೂಲಕ ಅಬ್ಬರದ ಬ್ಯಾಟಿಂಗ್ ಮಾಡಿ 20 ಓವರ್​ಗಳಲ್ಲಿ ಬರೋಬ್ಬರಿ 272 ರನ್​ ರನ್​ಗಳ ಗುರಿಯನ್ನು ಡೆಲ್ಲಿಗೆ ನೀಡಿತು. ಆದರೆ ಈ ಗುರಿಯನ್ನು ತಲುಪುವಲ್ಲಿ ಡೆಲ್ಲಿ ಬಾಯ್ಸ್​ ಎಡವಿದರು. ಭಾರೀ ಅಂತರದಿಂದ ಗೆಲುವನ್ನು ಕೆಕೆಆರ್​ ಮಡಿಲಿಗೆ ಡಿಸಿ ಅರ್ಪಿಸಿತು. ಕೇವಲ ಈ ಪಂದ್ಯವನ್ನು ಮಾತ್ರ ಗೆದ್ದು ಬೀಗಿದ್ದಲ್ಲದೇ, ಆರ್​ಸಿಬಿ ದಾಖಲಿಸಿದ್ದ 263 ರನ್​ಗಳ ದಾಖಲೆಯನ್ನು ಹಿಂದಿಕ್ಕಿದೆ.

ಕಳೆದ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್​​ ತಂಡ 277 ರನ್​ಗಳನ್ನು ಸಿಡಿಸುವ ಮೂಲಕ ಆರ್​ಸಿಬಿ ದಾಖಲಿಸಿದ್ದ ಐತಿಹಾಸಿಕ ಬೃಹತ್​ ರನ್​ಗಳ ಮೊತ್ತವನ್ನು ಮುರಿದು ತನ್ನದೇ ಹೊಸ ರೆಕಾರ್ಡ್​ ಅನ್ನು ನಿರ್ಮಿಸಿತು. ಈ ಮೂಲಕ ಕೆಕೆಆರ್​ ಮೊದಲ ಸ್ಥಾನ ಗಳಿಸಿ, ಆರ್​ಸಿಬಿಗೆ ಎರಡನೇ ಸ್ಥಾನ ನೀಡಿತ್ತು. ಆದರೆ, ಇದೀಗ ಕೆಕೆಆರ್​ ಕೂಡ ಬೆಂಗಳೂರು ತಂಡ ಗಳಿಸಿದ್ದ ರನ್​ಗಳನ್ನು ಹಿಂದಿಕ್ಕಿದ್ದು, ನಿನ್ನೆಯ ಪಂದ್ಯದಲ್ಲಿ 272 ರನ್ ಕಲೆಹಾಕುವ ಮೂಲಕ ಆರ್​ಸಿಬಿಯನ್ನು ಮೂರನೇ ಸ್ಥಾನಕ್ಕೆ ತಳ್ಳಿದೆ.

11 ವರ್ಷಗಳ ಕಾಲ ಐಪಿಎಲ್‌ನಲ್ಲಿ ಅತ್ಯಧಿಕ ತಂಡದ ಸ್ಕೋರ್‌ ದಾಖಲೆಯನ್ನು ಹೊಂದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ದಾಖಲೆಯನ್ನು ಮುರಿದ ತಂಡಗಳಲ್ಲಿ ಕೆಕೆಆರ್ ಎರಡನೇ ತಂಡವಾಗಿದೆ. ಅದು ಕೇವಲ ಒಂದೇ ವಾರದಲ್ಲಿ ಎರಡು ತಂಡಗಳು ಈ ಸಾಧನೆ ಮಾಡುವಲ್ಲಿ ಮುಂಚೂಣಿಯಲ್ಲಿದೆ.

ಐಪಿಎಲ್ ಇತಿಹಾಸದಲ್ಲೇ ಗರಿಷ್ಠ ಮೊತ್ತ:

277/3 - SRH vs MI (ಹೈದರಾಬಾದ್, 2024)

272/7 - ಕೆಕೆಆರ್ ವಿರುದ್ಧ ಡಿಸಿ (ವಿಶಾಖಪಟ್ಟಣಂ, 2024)

263/5 - RCB vs PWI (ಬೆಂಗಳೂರು, 2013)

257/5 - LSG vs PBKS (ಮೊಹಾಲಿ, 2023)

248/3 - RCB ವಿರುದ್ಧ GL (ಬೆಂಗಳೂರು, 2016)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net