ಕಳೆದ ವರ್ಷ ತೆಲುಗು ನಟ ನಾನಿ, ಕನ್ನಡದ ದೀತ್ ಶೆಟ್ಟಿ ಮತ್ತು ಕೀರ್ತಿ ಸುರೇಶ್ ಅಭಿನಯಿಸಿದ್ದ “ದಸರಾ’ ಸಿನಿಮಾ ಪ್ಯಾನ್ ಇಂಡಿಯಾ ಸದ್ದು ಮಾಡಿತ್ತು. ಚಿತ್ರಕ್ಕೆ ಶ್ರೀಕಾಂತ್ ಒಡೆಲಾ ಆ್ಯಕ್ಷನ್&ಕಟ್ ಹೇಳಿದ್ದರು. ಇದೀಗ ನಾನಿ ಮತ್ತು ಶ್ರೀಕಾಂತ್ ಮತ್ತೊಂದು ಹೊಸ ಚಿತ್ರಕ್ಕೆ ಮತ್ತೆ ಕೈಜೋಡಿಸಿದ್ದಾರೆ. ಇದು ನಾನಿ ನಾಯಕನಾಗಿ ನಟಿಸಲಿರುವ 33ನೇ ಚಿತ್ರವಾಗಿದ್ದು, ಇತ್ತೀಚೆಗಷ್ಟೆ ಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ.
ಪೋಸ್ಟರ್ನಲ್ಲಿ “ಉತ್ತಮ ನಾಯಕನಾಗಲು ಐಡೆಂಟಿಟಿಯ ಅಗತ್ಯವಿಲ್ಲ’ ಎಂಬ ಬರಹವಿದ್ದು, ಮಾಸ್ ಲುಕ್ನಲ್ಲಿ ನಾನಿ ಮಿಂಚಿದ್ದಾರೆ. ಹಿಂದೆಂದೂ ಕಾಣದ ಅವತಾರದಲ್ಲಿ ಈ ಚಿತ್ರದಲ್ಲಿ ನಾನಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಮುಂದಿನ ವರ್ಷ ಈ ಸಿನಿಮಾ ತೆರೆಗೆ ಬರಲಿದೆ.
ಸದ್ಯ ನಾನಿ ವಿವೇಕ್ ಆತ್ರೇಯಾ ನಿರ್ದೇಶಿಸುತ್ತಿರುವ “ಸರಿಪೋದ ಶನಿವಾರಂ’ ಎಂಬ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರದಲ್ಲಿ ಬಿಜಿಯಾಗಿದ್ದು, ಅದು ಇದೇ ಆಗಸ್ಟ್ 29ರಂದು ಬಿಡುಗಡೆಯಾಗಲಿದೆ.