ಹಾಟ್​ ಫೋಟೋಗಳನ್ನು ಹರಿಬಿಟ್ಟು ಗೇಲಿ ಮಾಡಿದವರಿಗೆ ತಿರುಗೇಟು ಕೊಟ್ಟ ಖುಷ್ಬೂ ಪುತ್ರಿ!

Avanthika
Published on

ಚೆನ್ನೈ: ಬಹುಭಾಷಾ ನಟಿ ಹಾಗೂ ರಾಜಕಾರಣಿ ಖುಷ್ಬೂ ಸುಂದರ್ ಅವರ ಪುತ್ರಿ ಆವಂತಿಕಾ ಅವರು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಶೇರ್​ ಮಾಡಿಕೊಂಡಿರುವ ಹಾಟ್​ ಫೋಟೋಗಳು ಎಲ್ಲರ ಗಮನ ಸೆಳೆದಿದೆ. ಈ ಹಿಂದೆ ದಡೂತಿ ದೇಹದಿಂದ ಅಪಹಾಸ್ಯಕ್ಕೆ ಗುರಿಯಾಗಿದ್ದ ಆವಂತಿಕಾ ಇದೀಗ ಬೋಲ್ಡ್​ ಫೋಟೋಗಳ ಮೂಲಕ ಪ್ರತೀಕಾರ ತೀರಿಸಿಕೊಂಡಿದ್ದಾರೆ.

ವ್ಯಂಗ್ಯವಾಡಿದವರ ಬಾಯಿಗೆ ಬೀಗ

ಆವಂತಿಕಾ ಈ ಮೊದಲು ತುಂಬಾ ದಪ್ಪಗಿದ್ದರು. ಅವರ ಹಳೆಯ ಇನ್​ಸ್ಟಾಗ್ರಾಂ ಫೋಟೋಗಳನ್ನು ನೋಡಿದರೆ ಗೊತ್ತಾಗುತ್ತದೆ. ದಡೂತಿ ದೇಹ ಹೊಂದಿದ್ದ ಅವರನ್ನು ಹಲವರು ಅಪಹಾಸ್ಯ ಮಾಡಿದ್ದರು. ಇದೀಗ ತಮ್ಮ ದೇಹವನ್ನು ಕರಗಿಸಿದ್ದು, ಫಿಟ್​ ಆಗಿದ್ದಾರೆ. ಇದೀಗ ಇನ್​ಸ್ಟಾಗ್ರಾಂನಲ್ಲಿ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ವ್ಯಂಗ್ಯವಾಡಿದವರ ಬಾಯಿ ಮುಚ್ಚಿಸಿದ್ದಾರೆ.

ಹುಬ್ಬೇರಿಸಿದ ಟ್ರೋಲಿಗರು

ಖುಷ್ಬೂ ಅವರು ಸಹ ಈ ಹಿಂದೆ ದಪ್ಪಗಿದ್ದರು. ಅವರು ಕೂಡ ಸುಮಾರು 20 ಕೆಜಿ ತೂಕ ಇಳಿಸಿಕೊಳ್ಳುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ. ಇದೀಗ ಅಮ್ಮನಂತೆ ಮಗಳು ಕೂಡ ಸ್ಲಿಮ್​ ಆಗಿದ್ದಾರೆ. ಆವಂತಿಕಾ ಅವರು ಖುಸ್ಬೂ ಸುಂದರ್ ಮತ್ತು ನಿರ್ದೇಶಕ ಸುಂದರ್ ಸಿ ಅವರ ಪುತ್ರಿ. ಖುಷ್ಬೂ ಜತೆಗೆ ಆವಂತಿಕಾ ಕೂಡ ದಡೂತಿ ದೇಹದಿಂದ ಒಂದು ಕಾಲದಲ್ಲಿ ಟ್ರೋಲಿಗರಿಗೆ ದಾಳವಾಗಿದ್ದರು. ಇಗ ಅದೇ ಟೀಕಾಕಾರರು ಅಮ್ಮ-ಮಗಳ ದೇಹ ಪರಿವರ್ತನೆ ಕಂಡು ಹುಬ್ಬೇರಿಸಿದ್ದಾರೆ.

ಇದೇ ಸಂದರ್ಭದಲ್ಲಿ ಖುಷ್ಬೂ ಮಗಳು ಸಿನಿಮಾ ಲೋಕಕ್ಕೆ ಎಂಟ್ರಿ ಕೊಡುವ ಸಾಧ್ಯತೆ ಇದೆ ಎಂಬ ಮಾತುಗಳು ಕಾಲಿವುಡ್​ ಗಲ್ಲಿಯಿಂದ ಕೇಳಿಬರುತ್ತಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net