More

    ಬೆಂಗಳೂರಲ್ಲಿ ಅಂಬರೀಷ್ ರಸ್ತೆ ಇದೆ, ಮೈಸೂರಲ್ಲೂ ಇದೆ, ಮಂಡ್ಯದಲ್ಲೇಕೆ ಇಲ್ಲ? ನೀವೇ ಪ್ರಶ್ನಿಸಿ: ಸುಮಲತಾ

    ಮಂಡ್ಯ: ಚುನಾವಣಾ ಪ್ರಚಾರಕ್ಕೆ ತಾರಾ ಕಳೆ ಬಂದಿರುವುದಷ್ಟೇ ಅಲ್ಲ, ರಾಜಕೀಯ ಅಸ್ತ್ರವಾಗಿಯೂ ಸ್ಟಾರ್​ಗಳ ವಿಚಾರ ಬಳಕೆ ಆಗುತ್ತಿರುವುದು ಕೂಡ ನಡೆಯುತ್ತಿದೆ. ಈ ಮಧ್ಯೆ ಸಂಸದೆ ಸುಮಲತಾ ಅಂಬರೀಷ್ ವಿಷಯವೊಂದನ್ನು ಪ್ರಸ್ತಾಪಿಸಿ, ನೀವೇ ಪ್ರಶ್ನಿಸಿ ಎಂದು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಮಂಡ್ಯದ ಮದ್ದೂರಿನಲ್ಲಿ ಇಂದು ರೋಡ್ ಶೋ ಬಳಿಕ ಮಾತನಾಡಿದ ಅವರು, ಮಂಡ್ಯ ಜಿಲ್ಲೆಗೆ ನಾನೊಬ್ಬಳು ಸಂಸದೆ. ಆದರೆ ಮದ್ದೂರಿಗೆ ನಾನು ಬಂದಾಗ ಈ ಮಣ್ಣಿನ ಸೊಸೆ. ಅಂಬರೀಷ್ ಅವರರನ್ನು ತಾವು ಪ್ರೀತಿಯಿಂದ ಸಾಕಿ, ಬೆಳೆಸಿದ್ದೀರಿ, ಮಂಡ್ಯದ ಗಂಡು‌ ಎಂದು ಬಿರುದು ಕೊಟ್ಟಿದ್ದೀರಿ. ಅವರು ಅಗಲಿದ ಮೇಲೆ ಪ್ರೀತಿ ಉಳಿಸಿಕೊಳ್ಳಲು ನಾನು ಅವರ ಹಾದಿಯಲ್ಲೇ ಹೆಜ್ಜೆ ಹಾಕಿಕೊಂಡು ಬರುತ್ತಿದ್ದೇನೆ ಎಂದರು.

    ಇದನ್ನೂ ಓದಿ: ನಾಳೆ ಬಸವನಗುಡಿಯಲ್ಲಿ ಶಾಂತಿಯುತ ಪ್ರತಿಭಟನೆ: ಹೋಟೆಲ್-ಅಂಗಡಿ ಬಂದ್

    ಕಳೆದ ಎಂಪಿ ಚುನಾವಣೆಯಲ್ಲಿ‌ ನನ್ನನ್ನು ಗೆಲ್ಲಿಸಿ ಇತಿಹಾಸ ನಿರ್ಮಿಸಿದ್ದೀರಿ. ಮಂಡ್ಯ ಅಂದರೆ ಇಂಡಿಯಾ, ಇಂಡಿಯಾ ಅಂದರೆ ಮಂಡ್ಯ ಅಂತ ತೋರಿಸಿಕೊಟ್ಟಿದ್ದೀರಿ. ಅಂದಿನಿಂದ ಇಂದಿನವರೆಗೂ ಜಿಲ್ಲೆಯಲ್ಲಿ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ. ಆದರೆ ನನಗೆ ತೊಂದರೆ, ಕಿರುಕುಳ ಕೊಟ್ರು, ಅದು ನಿಮಗೂ ತಿಳಿದಿದೆ ಎನ್ನುತ್ತ ಜೆಡಿಎಸ್ ಶಾಸಕರ ಹೆಸರನ್ನು ಹೇಳದೆ ಸುಮಲತಾ ಕಿಡಿಕಾರಿದರು.

    ಇದನ್ನೂ ಓದಿ: ಸ್ಮಶಾನದಲ್ಲಿ ಹುಡುಗಿಯರ ಫೋಟೋಗಳಿಗೆ ಮಾಟ-ಮಂತ್ರ; ಮಧ್ಯರಾತ್ರಿ ಬೆತ್ತಲೆಯಾಗಿ ವಾಮಾಚಾರ; ಮಹಿಳೆಯೂ ಭಾಗಿ!

    ಮದ್ದೂರಿನ ಜನರೆಲ್ಲ ನಮ್ಮ ಸಂಬಂಧಿಕರೇ. ಅಂಬರೀಷ್ ಅವರ ಅಕ್ಕತಂಗಿಯರು ಅಣ್ಣ-ತಮ್ಮಂದಿರು. ನಿಮ್ಮ ಮುಂದೆ ಜೆಡಿಎಸ್ ಶಾಸಕರು ಕೊಟ್ಟ ಕಿರುಕುಳ ಹೇಳಿಕೊಳ್ಳಲು ಬೇಜಾರಿಲ್ಲ. ಸಿಎಂ ಅವರು ಅಂಬಿ ವ್ಯಕ್ತಿತ್ವಕ್ಕೆ ಬೆಲೆ ಕೊಟ್ಟು ರೇಸ್​ಕೋರ್ಸ್​ ರಸ್ತೆಗೆ ಅಂಬರೀಷ್ ಹೆಸರಿಟ್ಟರು. ಅಲ್ಲದೆ 12 ಕೋಟಿ ರೂ. ವೆಚ್ಚದಲ್ಲಿ ಸ್ಮಾರಕ ಸಿದ್ಧವಾಗುತ್ತಿದೆ. ಅದು ಸಿಎಂ‌ ಬೊಮ್ಮಾಯಿ ಅಂಬರೀಷ್ ನೆನಪಿಗೆ ಕೊಟ್ಟ ಗೌರವ. ಮೈಸೂರಿನಲ್ಲಿಯೂ ಅಂಬರೀಷ್ ರಸ್ತೆ ಇದೆ. ಆದರೆ ಮಂಡ್ಯದಲ್ಲಿ ಅಂಬರೀಷ್ ರಸ್ತೆ ಆಗಲಿಲ್ಲ. ಯಾಕೆ ಇಷ್ಟು‌ದಿನ ಅಂಬಿ ರಸ್ತೆ ಆಗಲಿಲ್ಲ, ಯಾರು ಅದನ್ನ ತಡೆಯುತ್ತಿದ್ದಾರೆಂದು ನೀವೇ ಪ್ರಶ್ನಿಸಿ ಎಂದು ಸುಮಲತಾ ಹೇಳಿದರು.

    ಇದನ್ನೂ ಓದಿ: 86 ವರ್ಷದ ಮಹಿಳೆಗೆ ಕೊನೆಗೂ ಪತಿ ಸತ್ತ 49 ವರ್ಷಗಳ ಬಳಿಕ ಪಿಂಚಣಿ! 

    ನಾನು‌ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ ಎಂದು ಗೊತ್ತಾಗುತ್ತಿದ್ದಂತೆ ನನ್ನ ವಿರುದ್ಧ ಮೊದಲು ಹೇಳಿಕೆ ಕೊಟ್ಟಿದ್ದು ಮದ್ದೂರಿನ ಶಾಸಕ. ಅಂಬರೀಷ್ ಹೆಸರಿನ ರಸ್ತೆ ನಾಮಫಲಕವನ್ನು ಕಿತ್ತು ಹಾಕಿಸಿದ್ದು ಅವರೇ. ಅಂದರೆ ಆ ಗೌರವಕ್ಕೆ ಅಂಬರೀಷ್ ಅರ್ಹರಿಲ್ವಾ? ನಾನು ಕೆಆರ್​ಎಸ್​ ಡ್ಯಾಂ ಉಳಿವಿಗೆ ಹೋರಾಡಿದೆ. ಅಕ್ರಮಗಳ ವಿರುದ್ಧದ ಹೋರಾಟಕ್ಕೆ ನನ್ನ ಜೊತೆ ನಿಂತಿದ್ದು ಬಿಜೆಪಿ ಸರ್ಕಾರ. ಮೈಶುಗರ್ ಕಾರ್ಖಾನೆಯನ್ನು ಜೆಡಿಎಸ್​ನವರು ಏಕೆ ಓಪನ್ ಮಾಡಲಿಲ್ಲ? ನನಗೆ ಆಶೀರ್ವಾದ ಮಾಡಿದ ರೀತಿ ಸ್ವಾಮಿಯವರಿಗೆ ಆಶೀರ್ವಾದ ಮಾಡಿ, ನಿಮ್ಮ ಮಣ್ಣಿನ ಸೊಸೆಯ ಪ್ರತಿಷ್ಠೆ ಕಾಪಾಡಿ ಎಂದು ಸುಮಲತಾ ಚುನಾವಣಾ ಪ್ರಚಾರ ಮಾಡಿದರು.

    ಇದು ಡೈವೋರ್ಸ್ ಫೋಟೋಶೂಟ್​: ನನಗೆ 99 ಸಮಸ್ಯೆಗಳಿವೆ, ಆದರೆ ಪತಿ ಇಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts