ಸಿನಿಮಾ

ನಾಳೆ ಬಸವನಗುಡಿಯಲ್ಲಿ ಶಾಂತಿಯುತ ಪ್ರತಿಭಟನೆ: ಹೋಟೆಲ್-ಅಂಗಡಿ ಬಂದ್

ಬೆಂಗಳೂರು: ರಾಮಕೃಷ್ಣ ಆಶ್ರಮ ವೃತ್ತದಿಂದ ಗಾಂಧಿ ಬಜಾರ್ ಮುಖ್ಯ ರಸ್ತೆಯ ಟ್ಯಾಗೂರು ವೃತ್ತವರೆಗೆ ನಡೆಯುತ್ತಿರುವ ಅವೈಜ್ಞಾನಿಕವಾಗಿ ಕೈಗೊಂಡಿರುವ ಡಲ್ಟ್ ಕಾಮಗಾರಿಯನ್ನು ಮರು ವಿನ್ಯಾಸಗೊಳಿಸಬೇಕೆಂದು ಒತ್ತಾಯಿಸಿ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಬಸವನಗುಡಿ ವರ್ತಕರ ಮಂಡಳಿ, ಮಂಗಳವಾರ (ಮೇ 2) ಸ್ವಯಂಪ್ರೇರಿತವಾಗಿ ಶಾಂತಿಯುತ ಪ್ರತಿಭಟನೆ ನಡೆಸಲಿದೆ.

ಡಿವಿಜಿ ರಸ್ತೆ, ಪುಟ್ಟಣ್ಣ ರಸ್ತೆ, ಬ್ಯೂಗಲ್ ರಾಕ್ ರೋಡ್, ಎಚ್.ಬಿ.ಸಮಾಜ ರಸ್ತೆ ಸೇರಿ ವಿವಿಧ ರಸ್ತೆಗಳಲ್ಲಿರುವ ಹೋಟೆಲ್ ಮತ್ತು ಅಂಗಡಿ ಮುಂಗಟ್ಟುಗಳು ಬಂದ್ ಆಗಲಿವೆ.

ಇದನ್ನೂ ಓದಿ: ಜಿಎಸ್​ಟಿ ಸಂಗ್ರಹದಲ್ಲಿ ದಾಖಲೆ; 1.87 ಲಕ್ಷ ಕೋಟಿ ರೂ. ಸಂಗ್ರಹ!

ಗಾಂಧಿ ಬಜಾರ್ ಮುಖ್ಯರಸ್ತೆಯ ಅಸುಪಾಸಿನಲ್ಲಿರುವ ಮನೆಗಳಿಗೆ ನಾಲ್ಕು ಚಕ್ರ ಹಾಗೂ ದಿಚಕ್ರ ವಾಹನಗಳ ಪ್ರವೇಶಿಸಲು ಸೌಲಭ್ಯ ಕಲ್ಪಿಸಬೇಕು. ಸ್ಮಾರ್ಟ್ ಸಿಟಿ ಯೋಜನೆಯಡಿ ಅಂದಾಜು 30 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ವೈಟ್‌ಟಾಪಿಂಗ್ ಕಾಮಗಾರಿಯಿಂದ ಬಸವನಗುಡಿಯ ಸಾಂಸ್ಕೃತಿಕ ಪರಂಪರೆಗೆ ಧಕ್ಕೆಯಾಗಿದೆ. ಕಾಮಗಾರಿಯಿಂದ 80 ಅಡಿ ಅಗಲದ ರಸ್ತೆ ಕುಗ್ಗಿದೆ. ಆಹ್ಲಾದಕಾರ ಮತ್ತು ಶಾಂತಿಯ ವಾತಾವರಣಕ್ಕೆ ಧಕ್ಕೆಯಾಗಿದೆ. ವಾಹನ ಸಂಚಾರ ನಿಷೇಧದಿಂದ ವ್ಯಾಪಾರ ಕುಸಿತವಾಗಿದೆ. ಬಸವನಗುಡಿಯ ಸಾಂಸ್ಕೃತಿಕ ಪರಂಪರೆ ಕಳೆದು ಹೋಗಲಿದೆ. ಆಧುನೀಕರಣ ಬದಲು ಈಗಿರುವ ಮೂಲಸೌಕರ್ಯವನ್ನು ಉತ್ತಮಪಡಿಸಿ ವೈಟ್‌ಟಾಪಿಂಗ್ ಬದಲು ಗುಣಮಟ್ಟದ ಡಾಂಬರೀಕರಣ ಮಾಡಬೇಕು ಎಂದು ಮಂಡಳಿ ಅಧ್ಯಕ್ಷ ವೆಂಕಟೇಶ್ ಹೇಳಿದ್ದಾರೆ.

ಇದನ್ನೂ ಓದಿ: ಷೇರು ಮಾರುಕಟ್ಟೆಯಲ್ಲಿ 30 ಲಕ್ಷ ರೂ. ಕಳೆದುಕೊಂಡು ನಿಮ್ಹಾನ್ಸ್​ಗೆ ಹೋದ ಉದ್ಯಮಿ!

ಈಗಾಗಲೇ ಗ್ರಾಹಕರ ಕೊರತೆಯಿಂದ ವಾಣಿಜ್ಯ ಮಳಿಗೆಗಳು, ಹೋಟೆಲ್‌ಗಳು ಹಾಗೂ ಬೀದಿ ವ್ಯಾಪಾರಿಗಳಿಗೆ ತೊಂದರೆಯಾಗಿದೆ. ಅವೈಜ್ಞಾನಿಕ ಯೋಜನೆಗೆ ವಿರೋಧಿಸಿ ಬಿಬಿಎಂಪಿ ಸೇರಿ ಸರ್ಕಾರಕ್ಕೆ ಪತ್ರ ಬರೆದರೂ, ಪ್ರತಿಭಟನೆ ನಡೆಸಿದ್ದರೂ ಪ್ರಯೋಜನವಾಗಿಲ್ಲ. ರಾಮಕೃಷ್ಣ ಆಶ್ರಮ ವೃತ್ತದಲ್ಲಿ ಹಾಗೂ ಟ್ಯಾಗೂರು ವೃತ್ತದಲ್ಲಿ ವಾಹನಗಳನ್ನು ನಿಲ್ಲಿಸಿ ಗಾಂಧಿ ಬಜಾರ್‌ಗೆ ನಡೆದುಕೊಂಡು ಬರಬೇಕಿದೆ. ಇದು ಸರಿಯಲ್ಲ. ವಾಹನಗಳ ಓಡಾಟಕ್ಕೆ ಅವಕಾಶ ಮಾಡಿಕೊಳ್ಳಬೇಕು. ರಾಮಕೃಷ್ಣ ಆಶ್ರಮ ವೃತ್ತದಿಂದ ಗಾಂಧಿ ಬಜಾರ್ ಮುಖ್ಯ ರಸ್ತೆಯ ಟ್ಯಾಗೂರು ವೃತ್ತದವರೆಗೆ ಎಡ-ಬಲಕ್ಕೆ ತೆರಳಲು ಜಾಗ ಬಿಟ್ಟಿಲ್ಲ. ಸ್ಥಳೀಯರನ್ನು ಕಡೆಗಣಿಸಿ ಇಷ್ಟಬಂದಂತೆ ಕಾಮಗಾರಿ ನಡೆಸಲಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ‘ಈ ಸಲ ಯಾರಿಗೆ ಮತ ಹಾಕಲಿ?’ ಎಂದು ಕೇಳಿದರೆ ಇದು ಏನನ್ನುತ್ತೆ?: ಕೃತಕ ಬುದ್ಧಿಮತ್ತೆಯ ಬುದ್ಧಿಮಾತು!

ಹೋಟೆಲ್, ವಾಣಿಜ್ಯ ಚಟುವಟಿಕೆಗಳಿಗೆ ಹಾಗೂ ವ್ಯಾಪಾರಕ್ಕೆ ಗಾಂಧಿ ಬಜಾರ್ ರಸ್ತೆ ಹೆಸರುವಾಸಿ. ಸದಾ ಜನಜಂಗುಳಿಯಿಂದ ತುಂಬುತ್ತಿದ್ದ ರಸ್ತೆ ಈಗ ಖಾಲಿ ಹೊಡೆಯುತ್ತಿದೆ. ಕಾಮಗಾರಿಯಿಂದ ರಸ್ತೆ ಬಂದ್ ಮಾಡಲಾಗಿದೆ. ಸಾಕಷ್ಟು ಮಳಿಗೆಗಳು ಈಗಾಲೇ ಖಾಲಿಯಾಗಿವೆ. ಗ್ರಾಹಕರು ವಾಹನ ನಿಲುಗಡೆಗೆ ಹಾಗೂ ಸ್ಥಳೀಯ ನಿವಾಸಿಗಳ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಜಯನಗರ, ನೆಟ್ಟಕಲ್ಲಪ್ಪ ವೃತ್ತ, ಸೌತ್ ಎಂಡ್ ವೃತ್ತ ಸೇರಿ ಇತರ ಕಡೆಗಳಿಗೆ ತೆರಳಲು ಗಾಂಧಿ ಬಜಾರ್ ಮುಖ್ಯ ರಸ್ತೆ ಪ್ರಮುಖ ಕೊಂಡಿಯಾಗಿದೆ. ವಾಹನ ಪ್ರವೇಶ ನಿಷೇಧಿಸಿರುವುದು ನಮಗೆಲ್ಲ ತೊಂದರೆಯಾಗಿದೆ ಎಂದು ವೆಂಕಟೇಶ್ ಬೇಸರ ವ್ಯಕ್ತಪಡಿಸಿದರು.

ಇದು ಡೈವೋರ್ಸ್ ಫೋಟೋಶೂಟ್​: ನನಗೆ 99 ಸಮಸ್ಯೆಗಳಿವೆ, ಆದರೆ ಪತಿ ಇಲ್ಲ!

Latest Posts

ಲೈಫ್‌ಸ್ಟೈಲ್