More

    LIVE| ನೂತನ ಸಚಿವರ ಪ್ರಮಾಣವಚನ ಸಮಾರಂಭದ ನೇರಪ್ರಸಾರ

    ಬೆಂಗಳೂರು: ಕಳೆದ ಶನಿವಾರ (ಮೇ 20) ಕಂಠೀರವ ಸ್ಟೇಡಿಯಂನಲ್ಲಿ 8 ಮಂದಿ ಸಚಿವರೊಂದಿಗೆ ಸಿದ್ದರಾಮಯ್ಯ ಸಿಎಂ ಆಗಿ ಹಾಗೂ ಡಿಸಿಎಂ ಆಗಿ ಡಿ.ಕೆ.ಶಿವಕುಮಾರ್​ ಅವರು ಪ್ರಮಾಣವಚನ ಸ್ವೀಕಾರ ಮಾಡಿದರು. ಇದಾದ ಒಂದು ವಾರದ ಬಳಿಕ ಇಂದು (ಮೇ 27) 24 ನೂತನ ಸಚಿವರು ರಾಜಭವನದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಪ್ರಮಾಣವಚನ ಸ್ವೀಕರಿಸುತ್ತಿದ್ದು, ಕಾರ್ಯಕ್ರಮವನ್ನು ದಿಗ್ವಿಜಯ ನ್ಯೂಸ್​ ನೇರಪ್ರಸಾರದಲ್ಲಿ ವೀಕ್ಷಣೆ ಮಾಡಬಹುದಾಗಿದೆ.

    ಪ್ರಮಾಣವಚನ ಸ್ವೀಕರಿಸುತ್ತಿರುವ ಸಚಿವರುಗಳು ಹೆಸರು ಈ ಕೆಳಕಂಡಂತಿದೆ
    ಎಚ್‌.ಕೆ ಪಾಟೀಲ್‌, ಕೃಷ್ಣ ಭೈರೇಗೌಡ, ಎನ್‌ ಚಲುವನಾರಾಯಣ ಸ್ವಾಮಿ, ಕೆ ವೆಂಕಟೇಶ್‌, ಡಾ.ಎಚ್‌ ಸಿ ಮಹಾದೇವಪ್ಪ, ಈಶ್ವರ್‌ ಖಂಡ್ರೆ, ಕೆ.ಎನ್‌ ರಾಜಣ್ಣ, ದಿನೇಶ್‌ ಗುಂಡೂರಾವ್‌, ಶರಣಬಸಪ್ಪ ದರ್ಶನಾಪುರ, ಶಿವಾನಂದ ಪಾಟೀಲ್‌, ತಿಮ್ಮಾಪೂರ್‌ ರಾಮಪ್ಪ ಬಾಲಪ್ಪ, ಎಸ್‌.ಎಸ್‌. ಮಲ್ಲಿಕಾರ್ಜುನ್‌, ಶಿವರಾಜ ತಂಗಡಗಿ, ಎಸ್‌.ಆರ್‌. ಪಾಟೀಲ್‌, ಮಂಕಾಳ ವೈದ್ಯ, ಲಕ್ಷ್ಮೀ ಹೆಬ್ಬಾಳ್ಕರ್​, ರಹೀಂ ಖಾನ್‌, ಡಿ. ಸುಧಾಕರ್‌, ಸಂತೋಷ್‌ ಲಾಡ್, ಎನ್‌.ಎಸ್‌. ಬೋಸೆರಾಜು, ಸುರೇಶ ಬಿ.ಎಸ್‌, ಮಧು ಬಂಗಾರಪ್ಪ, ಡಾ.ಎಂ.ಸಿ ಸುಧಾಕರ್‌ ಮತ್ತು ಬಿ. ನಾಗೇಂದ್ರ.

    ಕಳೆದವಾರ ಎಂ. ಬಿ. ಪಾಟೀಲ್, ಡಾ. ಜಿ. ಪರಮೇಶ್ವರ್, ಪ್ರಿಯಾಂಕ ಖರ್ಗೆ, ಕೆ.ಎಚ್. ಮುನಿಯಪ್ಪ, ಕೆ. ಜೆ. ಜಾರ್ಜ್, ಸತೀಶ್ ಜಾರಕಿಹೊಳಿ, ಜಮೀರ್ ಅಹ್ಮದ್ ಖಾನ್ ಹಾಗೂ ರಾಮಲಿಂಗಾ ರೆಡ್ಡಿ ಅವರು ಸಿದ್ದರಾಮಯ್ಯ ಮತ್ತು ಡಿಕೆಶಿ ಜತೆ ಪ್ರಮಾಣ ವಚನ ಸ್ವೀಕಾರ ಮಾಡಿದರು. ಕಳೆದ ವಾರ ಎಂಟು ಮಂದಿ ಇದೀಗ 24 ಮಂದಿ ಸೇರಿ ಒಟ್ಟು 32 ಸಚಿವರು ಸಿದ್ದರಾಮಯ್ಯ ಮತ್ತು ಡಿಕೆಶಿ ಸಂಪುಟವನ್ನು ಸೇರಿದಂತಾಗಿದೆ.

    ವಿನಯ್ ಕುಲಕರ್ಣಿ, ವಿಜಯಾನಂದ ಕಾಶಪ್ಪನವರಿಗೆ ಸಚಿವ ಸ್ಥಾನ ತಪ್ಪಿದ್ದಕ್ಕೆ ಪಂಚಮಸಾಲಿ ಸಮಾಜ ಆಕ್ರೋಶ

    ಹಿಂದು ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಪತ್ನಿಗೆ ನೀಡಿದ್ದ ಉದ್ಯೋಗಕ್ಕೆ ಕಾಂಗ್ರೆಸ್​ ಸರ್ಕಾರ ಕೊಕ್​!

    ಖ್ಯಾತ ನಿರ್ದೇಶಕ ಕೆ.ವಾಸು ವಿಧಿವಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts