ವಿನಯ್ ಕುಲಕರ್ಣಿ, ವಿಜಯಾನಂದ ಕಾಶಪ್ಪನವರಿಗೆ ಸಚಿವ ಸ್ಥಾನ ತಪ್ಪಿದ್ದಕ್ಕೆ ಪಂಚಮಸಾಲಿ ಸಮಾಜ ಆಕ್ರೋಶ

Vinay Vijayananda
Published on

ಬಾಗಲಕೋಟೆ: ಪಂಚಮಸಾಲಿ ಮುಖಂಡರಾದ ವಿನಯ್ ಕುಲಕರ್ಣಿ ಹಾಗೂ ವಿಜಯಾನಂದ ಕಾಶಪ್ಪನವರಿಗೆ ಸಚಿವ ಸ್ಥಾನ ತಪ್ಪಿದ್ದಕ್ಕೆ ಪಂಚಮಸಾಲಿ ಫೇಸ್​ಬುಕ್​ ಪೇಜ್​ನಲ್ಲಿ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.

ಪಂಚಮಸಾಲಿ ಮುಂಚೂಣಿ ನಾಯಕರಾದ ಈ ಇಬ್ಬರನ್ನು ಸೇರಿಸಿಕೊಳ್ಳದಿದ್ರೆ ಸಮೂಹವನ್ನು ಕಡೆಗಣಿಸಿದಂತೆ. ಪಂಚಮಸಾಲಿ ಮೀಸಲಾತಿಗಾಗಿ ದುಡಿದವರಿಗೆ ಅವಕಾಶ ಸಿಗಬೇಕು. ಸಮಾಜದಲ್ಲಿ ಈ ಇಬ್ಬರು ಯುವ ನಾಯಕರು ಬೆಳೆಯುತ್ತಾರೆ ಅಂತ ಕುಂಟು ನೆಪಹೇಳಿ, ಕಾಂಗ್ರೆಸ್ ಪಕ್ಷದ ಪಟ್ಟಭದ್ರ ಹಿತಾಸಕ್ತಿಗಳು ಕುತಂತ್ರದಿಂದ ಇಬ್ಬರಿಗೂ ಸಚಿವ ಸ್ಥಾನ ತಪ್ಪಿಸಿದ್ದಾರೆಂದು ಅನುಮಾನ ಹೊರಹಾಕಿದ್ದಾರೆ.

ಈ ಬಗ್ಗೆ ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿಗಳು ಸಹ ಬೇಸರ ಹೊರಹಾಕಿದ್ದಾರೆ ಎಂದು ಫೇಸ್​ಬುಕ್​ ಪೋಸ್ಟ್​ನಲ್ಲಿ ಉಲ್ಲೇಖಿಸಲಾಗಿದೆ. ಇವರಿಬ್ಬರಿಗೂ ಸಚಿವ ಸ್ಥಾನ ಕೊಡದೇ ಇದ್ದರೆ, ಈಗ ಕಾಂಗ್ರೆಸ್ ಬೆಂಬಲಿಸಿದ ಪಂಚಮಸಾಲಿ ಸಮಾಜ, ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವ ಎಚ್ಚರಿಕೆಯನ್ನು ನೀಡಿದೆ.

ಸಮಾಜದ ಬಾಂಧವರು ಸಚಿವ ಸ್ಥಾನ ತಪ್ಪಿದ್ದನ್ನು ಖಂಡಿಸಿ ಪ್ರತಿಭಟನೆ ನಡೆಸಲು ಫೇಸ್​ಬುಕ್ ಮೂಲಕ ಕರೆ ಕೊಡಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net