ಪುಟ್ಟರಂಗಶೆಟ್ಟಿಗೆ ಸಚಿವ ಸ್ಥಾನ ಕೊಡದಿದ್ರೆ ಕಾಂಗ್ರೆಸ್​ ಕಚೇರಿ ಮುಂದೆ ಸಾಯ್ತೀನಿ! ಅಭಿಮಾನಿಯ ಪತ್ರ ವೈರಲ್​

Puttaranga shetty (1)
Published on

ಚಾಮರಾಜನಗರ: ಶಾಸಕ ಸಿ.ಪುಟ್ಟರಂಗಶೆಟ್ಟಿಗೆ ಸಚಿವ ಸ್ಥಾನ ನೀಡಿದ್ದರೆ ಕಾಂಗ್ರೆಸ್ ಕಚೇರಿ ಮುಂದೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಅಭಿಮಾನಿಯೊನ್ನ ಪತ್ರ ಬರೆದಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಪತ್ರ ವೈರಲ್ ಆಗಿದೆ.

ನಲ್ಲೂರುಮೋಳೆಯ ಚಂದ್ರಶೇಖರ್ ಪತ್ರ ಬರೆದಿರುವ ಅಭಿಮಾನಿ. "ನಮ್ಮ ಉಪ್ಪಾರ ಸಮಾಜದ ಏಕೈಕ ಶಾಸಕ, ನಾಲ್ಕು ಬಾರಿ ಗೆದ್ದಿರುವ ಸಿ.ಪುಟ್ಟರಂಗಶೆಟ್ಟಿಗೆ ಕಾಂಗ್ರೆಸ್ ಸಚಿವ ಸ್ಥಾನ ಕೊಡದಿದ್ದರೆ ನಾನು ಚಂದ್ರಶೇಖರ್ s/o ನಂಜುಂಡಶೆಟ್ಟಿ ನಲ್ಲೂರುಮೋಳೆ ಕಾಂಗ್ರೆಸ್ ಬಗ್ಗೆ ಅಪಾರ ನಂಬಿಕೆ ಇಟ್ಟುಕೊಂಡಿದ್ದು. ನಂಬಿಕೆ ದ್ರೋಹದ ಕೆಲಸವನ್ನು ಕಾಂಗ್ರೆಸ್ ಮತ್ತು ಹೈಕಮಾಂಡ್ ಮಾಡಿದೆ.‌ ಸಿ.ಪುಟ್ಟರಂಗಶೆಟ್ಟಿಗೆ ಸಚಿವ ಸ್ಥಾನ‌ ಕೊಡದಿದ್ದರೆ ಜಿಲ್ಲಾ ಅಥವಾ ಕೆಪಿಸಿಸಿ ಕಚೇರಿ ಮುಂದೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ.

ನನ್ನ ಆತ್ಮಹತ್ಯೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್‌ಗಾಂಧಿ, ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಅವರೇ ಕಾರಣಕರ್ತರು. ನನ್ನ‌ ಸಾವಿನಲ್ಲೂ ಸಹ ನಮ್ಮ ಉಪ್ಪಾರ ಸಮಾಜ ನಿಮ್ಮ ಪಕ್ಷವನ್ನು ಬಿಟ್ಟು ಉಗ್ರ ಹೋರಾಟ ಮಾಡುತ್ತದೆ ಎಂದು ಪತ್ರದಲ್ಲಿ ಬರೆದಿದೆ.

ಈ ಬಗ್ಗೆ ಮಾತನಾಡಿರುವ 21 ವರ್ಷದ ಚಂದ್ರಶೇಖರ್, ನಾನು ಪುಟ್ಟರಂಗಶೆಟ್ಟಿ ಅವರ ಪಕ್ಕಾ ಅಭಿಮಾನಿ. ಇಂದು ಬೆಳಗ್ಗೆ ಕಾಂಗ್ರೆಸ್ ಕಚೇರಿಗೆ ನನ್ನ ಪತ್ರವನ್ನು ತಲುಪಿಸುತ್ತೇನೆ. ಉಪಸಭಾಪತಿ ಸ್ಥಾನಬೇಡ. ಉಪ್ಪಾರ ಸಮಾಜದಲ್ಲಿ ನಾಲ್ಕು, ಐದು ಶಾಸಕರಿದ್ದಿದ್ದರೆ‌ ಈ ಸ್ಥಾನ ಸ್ವೀಕಾರ ಮಾಡಬಹುದಿತ್ತು. ಆದರೆ‌ ಒಬ್ಬರೇ ಇರುವುದರಿಂದ ಸಚಿನ ಸ್ಥಾನ ನೀಡಬೇಕೆಂದು ಒತ್ತಾಯಿಸಿದ್ದಾರೆ.

Puttaranga Shetty
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net