More

    ಡೆಪ್ಯುಟಿ ಸ್ಪೀಕರ್​ ಆಗಲು ಒಲ್ಲದ ಮನಸ್ಸು, ಸಿದ್ದು ಒತ್ತಾಯಕ್ಕೆ ಒಪ್ಪಬೇಕಷ್ಟೇ ಎಂದ ಸಿ.ಪುಟ್ಟರಂಗಶೆಟ್ಟಿ…

    ಚಾಮರಾಜನಗರ: ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ, ಮಾಜಿ ಸಚಿವ ವಿ.ಸೋಮಣ್ಣ ವಿರುದ್ದ ಗೆಲ್ಲುವ ಮೂಲಕ ನಾಲ್ಕನೇ ಜಯ ಸಾಧಿಸಿದ ಶಾಸಕ ಸಿ.ಪುಟ್ಟರಂಗಶೆಟ್ಟಿಗೆ ಡೆಪ್ಯುಟಿ ಸ್ಪೀಕರ್​ ಆಗುವ ಅವಕಾಶವಿದ್ದು, ಮಂತ್ರಿ ಭಾಗ್ಯದ ನಿರೀಕ್ಷೆಯಲ್ಲಿದ್ದವರು ಡೆಪ್ಯುಟಿ ಸ್ಪೀಕರ್​ ಆಗಲು ಒಲ್ಲದ ಮನಸ್ಸಿನಲ್ಲಿದ್ದಾರೆ.

    ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ನೂತನ ಸಚಿವರು ಇಂದು ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಸಿದ್ದು ಆಪ್ತ, ಉಪ್ಪಾರ ಸಮಾಜದ ಏಕೈಕ ಶಾಸಕ ಸಿ.ಪುಟ್ಟರಂಗಶೆಟ್ಟಿಗೂ ಅವಕಾಶ ಸಿಗಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ನೂತನ ಸಚಿವರ ಪಟ್ಟಿಯಲ್ಲಿ ಸಿ.ಪುಟ್ಟರಂಗಶೆಟ್ಟಿ ಅವರ ಹೆಸರು ಇಲ್ಲ.

    ಈ ಕುರಿತು “ವಿಜಯವಾಣಿ”ಯೊಂದಿಗೆ ಮಾತನಾಡಿರುವ ಅವರು, “ಡೆಪ್ಯುಟಿ ಸ್ಪೀಕರ್​ ಸ್ಥಾನ ನೀಡುವುದಾಗಿ ಹೇಳಿದ್ದಾರೆ. ನಾನು ಬೇಡ ಎಂದಿದ್ದೇನೆ. ನನ್ನ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಲು ದಾವಣಗೆರೆ, ಶಿವಮೊಗ್ಗ, ಬಳ್ಳಾರಿ ಸೇರಿದಂತೆ ಇತರ ಜಿಲ್ಲೆಗಳಿಂದ ಬಂದಿದ್ದ ಜನರು ನಿನ್ನೆಯೇ ವಾಪಸ್ ಹೊರಟು ಹೋದರು. ಸಿದ್ದರಾಮಯ್ಯ ಅವರ ಒತ್ತಾಯಕ್ಕೆ ಡೆಪ್ಯುಟಿ ಸ್ಪೀಕರ್​ ಸ್ಥಾನ ಪಡೆಯಬೇಕಷ್ಟೇ” ಎಂದರು.

    ಇದನ್ನೂ ಓದಿ: ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ಹಿನ್ನೆಲೆ ಸಂಚಾರದಲ್ಲಿ ಬದಲಾವಣೆ

    ಸಿ.ಪುಟ್ಟರಂಗಶೆಟ್ಟಿಗೆ ಸಚಿವ ಸ್ಥಾನ ಸಿಕ್ಕೇ ಸಿಗುತ್ತದೆ ಎನ್ನುವ ಭರವಸೆ ಇತ್ತು.‌ ಸೂಕ್ಷ್ಮಾತಿಸೂಕ್ಷ್ಮ ಸಮಾಜಕ್ಕೆ ಸೇರಿರುವ ಇವರಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಖಾತೆಯೇ ಸಿಗುತ್ತದೆ ಎಂದು ಹೇಳಲಾಗುತ್ತಿತ್ತು‌. ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿದ್ದರು. ಈ ಸಲವೂ ಮಂತ್ರಿಗಿರಿ ದೊರೆಯುತ್ತದೆ ಎಂದು ಅಭಿಮಾನಿಗಳು ಪ್ರಮಾಣವಚನಕ್ಕೂ ಮುನ್ನವೇ ಅಭಿನಂದನೆ, ಸಂಭ್ರಮಾಚರಣೆಯ ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದರು.

    ಆದರೆ ಈಗ ಚಾಮರಾಜನಗರ ಜಿಲ್ಲೆಗೆ ಸಚಿವ ಸ್ಥಾನ‌ ಸಿಗುತ್ತಿಲ್ಲ. ಪ್ರಭಾವಿಯಾಗಿದ್ದ ವಿ.ಸೋಮಣ್ಣ ಅವರನ್ನು ಸೋಲಿಸಿದವರಿಗೆ ಉತ್ತಮ ಅವಕಾಶ ಸಿಗಬೇಕಿತ್ತು. ಸಾಮಾಜಿಕ ನ್ಯಾಯದ ಪ್ರಕಾರ ಸಿ.ಪುಟ್ಟರಂಗಶೆಟ್ಟಿಗೆ ಮಂತ್ರಿ ಮಂಡಲದಲ್ಲಿ ಸ್ಥಾನ ಸಿಗಬೇಕಿತ್ತು ಎಂದು ಅವರ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

    ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ಹಿನ್ನೆಲೆ ಸಂಚಾರದಲ್ಲಿ ಬದಲಾವಣೆ

    ನಮ್ಮ ಮಾವಂದ ಮೇ 31ಕ್ಕ ಮುಗಿತ…

    ದುಬೈ ರಾಜಕುಮಾರಿಯ ಪಲಾಯನದ ಕಥೆ-ವ್ಯಥೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts