More

    ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ಹಿನ್ನೆಲೆ ಸಂಚಾರದಲ್ಲಿ ಬದಲಾವಣೆ

    ಬೆಂಗಳೂರು: ಇಂದು ಬೆಳಗ್ಗೆ 11.45ಕ್ಕೆ ರಾಜಭವನದಲ್ಲಿ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹಿನ್ನಲೆಯಲ್ಲಿ ನಗರದಲ್ಲಿ ವಾಹನಗಳ ಸಂಚಾರದಲ್ಲಿ ಮಾರ್ಗ ಬದಲಾವಣೆ ಮಾಡಲಾಗಿದೆ.

    ಕೆ.ಆರ್. ಸರ್ಕಲ್‌ನಿಂದ ಗೋಪಾಲಗೌಡ ವೃತ್ತದವರೆಗೆ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ಹೀಗಾಗಿ ವಾಹನ ಸವಾರರಿಗೆ ನೃಪತುಂಗ ರಸ್ತೆ ಹಾಗೂ ಕಬ್ಬನ್‌ ಪಾರ್ಕ್ ಒಳಭಾಗದ ರಸ್ತೆಯಲ್ಲಿ ಸಂಚರಿಸಲು ಅವಕಾಶ ಮಾಡಿಕೊಡಲಾಗಿದೆ.

    ಇದನ್ನೂ ಓದಿ: ಶನಿವಾರವೂ ಪಾಸ್‌ಪೋರ್ಟ್ ಸೇವೆ ಲಭ್ಯ; ನಾಳೆ ರಾಜ್ಯದ 8 ಪಿಒಪಿಎಸ್‌ಕೆಗಳಲ್ಲಿ ಚಾಲನೆ

    ಕ್ವೀನ್ಸ್ ರಸ್ತೆಯಿಂದ ಬರುವ ವಾಹನಗಳನ್ನು ಪೊಲೀಸ್ ತಿಮ್ಮಯ್ಯ ವೃತ್ತದ ಕಡೆಗೆ ನಿರ್ಬಂಧಿಸಲಾಗಿದೆ. ಪೊಲೀಸ್ ತಿಮ್ಮಯ್ಯ ಸರ್ಕಲ್​​ನಿಂದ ರಾಜಭವನದ ರಸ್ತೆ ಹಾಗೂ ಬಸವೇಶ್ವರ ವೃತ್ತದವರೆಗೆ ವಾಹನ ಸಂಚಾರಕ್ಕೆ ನಿರ್ಬಂಧಿಸಲಾಗಿದೆ. ಶಿವಾಜಿನಗರದಿಂದ ಪೊಲೀಸ್ ತಿಮ್ಮಯ್ಯ ಕಡೆಗೆ ಹೋಗುವ ಬಸ್‌ಗಳನ್ನು ಕ್ವಿನ್ಸ್ ಸರ್ಕಲ್ ಮತ್ತು ಸಿದ್ದಲಿಂಗಯ್ಯ ವೃತ್ತದ ಕಡೆಗೆ ತಿರುಗಿಸಲಾಗಿದೆ. ಬಸ್‌ಗಳು ಮತ್ತು ಗೂಡ್ಸ್ ವಾಹನಗಳು ಹಳೆಯ ಹೈಗ್ರೌಂಡ್ ಜಂಕ್ಷನ್​​ನಿಂದ ಕಾಫೀಬೋರ್ಡ್ ಕಡೆಗೆ ಹೋಗುವುದನ್ನು ನಿರ್ಬಂಧಿಸಲಾಗಿದೆ.

    ಈ ಕೆಳಕಂಡ ರಸ್ತೆಗಳಲ್ಲಿ ಯಾವುದೇ ವಾಹನ ನಿಲುಗಡೆ ಇರುವುದಿಲ್ಲ

    * ರಾಜಭವನ ರಸ್ತೆ
    * ಡಾ. ಬಿ.ಆರ್. ಅಂಬೇಡ್ಕರ್ ರಸ್ತೆ
    * ಕ್ವೀನ್ಸ್ ರಸ್ತೆ
    * ಇನ್‌ಪೆಂಟ್ರಿ ರಸ್ತೆ
    * ಸ್ಯಾಂಕಿ ರಸ್ತೆ
    * ಪ್ಯಾಲೇಸ್ ರಸ್ತೆ
    * ಕಬ್ಬನ್ ರಸ್ತೆ.

    ಪಾಸ್ ಇರುವ ವಾಹನಗಳು ರಾಜಭವನದ ಗೇಟ್ ಬಳಿ ಬಂದು ಗಣ್ಯರನ್ನು ಇಳಿಸಿ ಎಲ್.ಹೆಚ್. ಗೇಟ್‌ನ ಮೂಲಕ ತೆರಳಿ ಪಾರ್ಕಿಂಗ್‌ ಲಾಟ್‌ನಲ್ಲಿ ವಾಹನವನ್ನು ನಿಲ್ಲಿಸಿಕೊಳ್ಳಬೇಕು. ಕಾರ್ಯಕ್ರಮಕ್ಕೆ ಬರುವ ಆಹ್ವಾನಿತರಿಗೆ ವಿಧಾನಸೌಧದ ಸಿಮೆಂಟ್ ಪಾರ್ಕಿಂಗ್, ನೆಹರು ತಾರಾಲಯ, ಎಂ.ಎಸ್. ಬಿಲ್ಡಿಂಗ್ ಒಳಭಾಗದಲ್ಲಿ ವಾಹನ ನಿಲುಗಡೆಗೆ ಅವಕಾಶ ಮಾಡಿಕೊಡಲಾಗಿದೆ.

    ಇದನ್ನೂ ಓದಿ: ತಂಬಾಕು ನಿಯಂತ್ರಣ ನಿಯಮ ಪಾಲಿಸದ ಆರೋಪ- ಒಂದೇ ದಿನ 147 ಅಂಗಡಿಗಳ ಮೇಲೆ ಪ್ರಕರಣ ದಾಖಲು

    ಗಣ್ಯ ವ್ಯಕ್ತಿಗಳ ವಾಹನಗಳನ್ನು ವಿಧಾನಸೌಧದ ಪಶ್ಚಿಮ ದ್ವಾರ, ಉತ್ತರ ದ್ವಾರದ ಮುಂದಿನ ರಸ್ತೆಯಲ್ಲಿ, ವಿಕಾಸ ಸೌಧದ ಸೆಲ್ಲಾರ್‌ನ ಪಾರ್ಕಿಂಗ್ ಮತ್ತು ಶಾಸಕರ ಭವನದ ಪಾರ್ಕಿಂಗ್ ಸ್ಥಳಗಳಲ್ಲಿ ವಾಹನ ನಿಲುಗಡೆಗೆ ಅವಕಾಶವಿದೆ. (ದಿಗ್ವಿಜಯ ನ್ಯೂಸ್​)

    ಹಾವು ನಾಲಿಗೆ ಹೊರಚಾಚುವುದೇಕೆ?: ಮಾಹಿತಿ ಮನೆ

    ಏಕತೆಯ ಸಂಕೇತ: ಸಂಸತ್ ಭವನ ಉದ್ಘಾಟನೆ ಬಹಿಷ್ಕಾರ ಬೇಕಿರಲಿಲ್ಲ

    ಸಂಖ್ಯಾ ಪ್ರಪಂಚ: ಪರಿಪೂರ್ಣ ಸಂಖ್ಯೆಯ ಸುತ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts