More

    ತಂಬಾಕು ನಿಯಂತ್ರಣ ನಿಯಮ ಪಾಲಿಸದ ಆರೋಪ- ಒಂದೇ ದಿನ 147 ಅಂಗಡಿಗಳ ಮೇಲೆ ಪ್ರಕರಣ ದಾಖಲು

    ಕಾರವಾರ: ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾಯ್ದೆ-2003 ನಿಯಮಗಳನ್ನು ಮೀರಿ ಸಿಗರೇಟ್, ಗುಟ್ಗಾ ಮುಂತಾದ ತಂಬಾಕು ಉತ್ಪನ್ನಗಳ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಬುಧವಾರ ಏಕ ಕಾಲದಲ್ಲಿ ದಾಳಿ ನಡೆದಿದ್ದು, 147 ಪ್ರಕರಣ ದಾಖಲಿಸಿಕೊಂಡು 46 ಸಾವಿರ ರೂ. ದಂಡ ಆಕರಿಸಲಾಗಿದೆ.
    ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ವಾರದ ಹಿಂದೆ ಸಭೆ ನಡೆಸಿ ಸೂಚನೆ ನೀಡಿದ್ದರು. ಅದರಂತೆ ಆರೋಗ್ಯ, ಆಹಾರ ಸುರಕ್ಷತೆ, ಪೊಲೀಸ್, ಕಂದಾಯ,ನಗರ ಆಡಳಿತ, ಶಿಕ್ಷಣ ಹೀಗೆ ವಿವಿಧ ಇಲಾಖೆಯ ಅಧಿಕಾರಿಗಳು ಒಟ್ಟಾಗಿ ದಾಳಿ ನಡೆಸಿದ್ದರು.

    ಒಟ್ಟಾರೆ 60 ಕ್ಕೂ ಅಧಿಕ ಅಧಿಕಾರಿಗಳು ದಾಳಿಯಲ್ಲಿ ಪಾಲ್ಗೊಂಡಿದ್ದು, ಕಾಯ್ದೆಯ ನಿಯಮಗಳನ್ನು ಮೀರಿದ ಅಂಗಡಿಗಳಿಗೆ ದಂಡ ವಿಧಿಸಿದ್ದಾರೆ. ಜೊಯಿಡಾದಲ್ಲಿ ಸ್ವತಃ ತಹಸೀಲ್ದಾರ್ ಐಎಎಸ್ ಪ್ರೊಬೇಷನರಿ ಅಧಿಕಾರಿ ಜುಬಿನ್ ಮಹಾಪಾತ್ರ ದಾಳಿಯಲ್ಲಿ ಪಾಲ್ಗೊಂಡಿದ್ದರು.

    ಶಾಲೆಗಳ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನ ಮಾರಾಟ ಮಾಡಬಾರದು. ಅಂಗಡಿಗಳಲ್ಲಿ ನೋ ಸ್ಮೋಕಿಂಗ್, ತಂಬಾಕು ಉತ್ಪನ್ನ ಬಳಕೆಯಿಂದ ಅಪಾಯ ಸಂಭವಿಸುತ್ತದೆ ಎಂಬ ಬೋರ್ಡ್ ಅಳವಡಿಸಬೇಕು. ಮುಂತಾದ ನಿಯಮಗಳನ್ನು ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾಯ್ದೆ (ಕೊಟ್ಪಾ )ದಲ್ಲಿ ತಿಳಿಸಲಾಗಿದೆ. ನಿಯಮ ಮೀರಿದವರ ಮೇಲೆ ದಂಡ ವಿಽಸುವ ಜತೆಗೆ ತಂಡವು ಪ್ರಕರಣ ದಾಖಲಿಸಿಕೊಂಡಿದೆ.


    ಕಾರವಾರ, ಹೊನ್ನಾವರ ತಲಾ-9, ಅಂಕೋಲಾ-6, ಕುಮಟಾ-22, ಭಟ್ಕಳ-10, ಶಿರಸಿ-18 ಸಿದ್ದಾಪುರ-4, ಯಲ್ಲಾಪುರ-11, ಮುಂಡಗೋಡ-5, ಹಳಿಯಾಳ-13, ಜೊಯಿಡಾ-40 ಪ್ರಕರಣಗಳನ್ನು ದಾಖಲಿಸಲಾಯಿತು. ಕಾರವಾರದಲ್ಲಿ-2000 ರೂ., ಅಂಕೋಲಾ-2300 ರೂ., ಕುಮಟಾ-5800 ರೂ., ಹೊನ್ನಾವರ-3000 ರೂ.,ಭಟ್ಕಳ-1900 ರೂ., ಶಿರಸಿ-4600 ರೂ., ಸಿದ್ದಾಪುರ-1600., ಯಲ್ಲಾಪುರ-3550 ರೂ., ಮುಂಡಗೋಡ-1550 ರೂ., ಹಳಿಯಾಳ-1300 ರೂ., ಜೊಯಿಡಾದಲ್ಲಿ -18,800 ರೂ., ದಂಡ ವಿಧಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts