More

    ಪಪಂ ಮಳಿಗೆ ಬಾಡಿಗೆಗೆ ಟೆಂಡರ್ ಕರೆಯಿರಿ

    ಸಿರಗುಪ್ಪ: ತೆಕ್ಕಲಕೋಟೆ ಪಪಂ ಸಭಾಂಗಣದಲ್ಲಿ ಜ.30ರಂದು ನಡೆಯಲಿರುವ ಬಜೆಟ್ ಪೂರ್ವಭಾವಿ ಸಭೆ ಹಿನ್ನೆಲೆಯಲ್ಲಿ ಪಪಂ ಆಡಳಿತಾಧಿಕಾರಿ ಹಾಗೂ ತಹಸೀಲ್ದಾರ್ ಎಚ್.ವಿಶ್ವನಾಥ ಬುಧವಾರ ಸಾರ್ವಜನಿಕರಿಂದ ಸಲಹೆಗಳನ್ನು ಪಡೆದರು.

    ಸದಸ್ಯ ಎಸ್.ಸಿದ್ದೇಶ್ವರ ಮಾತನಾಡಿ, ಪಪಂನ ಮಳಿಗೆಗಳ ಟೆಂಡರ್ ಅವಧಿ ಮುಗಿದಿದ್ದು, ಹೊಸದಾಗಿ ಟೆಂಡರ್ ಕರೆಯಬೇಕು. ಇದರಿಂದ ಪಪಂಗೆ ಆದಾಯ ಬರಲು ಅನುಕೂಲವಾಗುತ್ತದೆ. ಈ ಹಿಂದೆ ಪಪಂನಿಂದ ಸಾರ್ವಜನಿಕ ಶೌಚಗೃಹ ನಿರ್ವಹಣೆ ಮಾಡಲಾಗುತ್ತಿತ್ತು.

    ಈಗ ಸ್ವಚ್ಛತೆ ನಿರ್ವಹಣೆಗಾಗಿ ಟೆಂಡರ್ ಕರೆಯಬೇಕು ಎಂದರು. ಮುಖ್ಯಾಧಿಕಾರಿ ಪರಶುರಾಮ್ ಮಾತನಾಡಿ, ಯುಜಿಡಿ ಕೆಲಸ ಕಾರ್ಯಗಳು ಮುಗಿದಿಲ್ಲ. ಇಂಟರ್‌ಲಾಕ್ ರಸ್ತೆ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದರು.

    ಇದನ್ನು ಓದಿ: ಟೋಲ್ ಶುಲ್ಕ ವಸೂಲಿ ತಕ್ಷಣ ನಿಲ್ಲಿಸಿ


    ಪಟ್ಟಣದಲ್ಲಿ ಫ್ಲೆಕ್ಸ್ ಅಳವಡಿಸುವುದರಿಂದ ಪ್ರತಿವರ್ಷ ಬಜೆಟ್‌ನಲ್ಲಿ ಒಂದೂವರೆ ಲಕ್ಷ ರೂ. ವಸೂಲಿ ಮಾಡುವುದಾಗಿ ತಿಳಿಸಲಾಗಿತ್ತು, ಆದರೆ ಇಲ್ಲಿಯವರೆಗೆ ಫ್ಲೆಕ್ಸ್, ಬ್ಯಾನರ್ ಅಳವಡಿಸುವವರಿಂದ ಯಾವುದೇ ರೀತಿಯ ಶುಲ್ಕ ಕಟ್ಟಿಸಿಕೊಂಡಿಲ್ಲ. ಇದರಿಂದ ಪಪಂಗೆ ಬರುವ ಆದಾಯಕ್ಕೆ ಖೋತಾ ಬಿದ್ದಂತಾಗಿದೆ. ಆದ್ದರಿಂದ ಪ್ಲೆಕ್ಸ್ ಅಳವಡಿಸುವ ಪ್ರತಿಯೊಬ್ಬರಿಂದ ಶುಲ್ಕ ವಸೂಲಿ ಮಾಡಬೇಕು ಎಂದು ಎಸ್.ನರೇಂದ್ರಸಿಂಹ ತಿಳಿಸಿದರು.


    ಸ್ಮಶಾನದ ಪಕ್ಕದಲ್ಲಿ ಭತ್ತದ ಗದ್ದೆಗಳು ಇರುವುದರಿಂದ ಸ್ಮಶಾನಕ್ಕೆ ನೀರು ಬರುತ್ತವೆ. ಸ್ಮಶಾನದ ಅಭಿವೃದ್ಧಿಗೆ ಅನೇಕ ಬಾರಿ ಮನವಿ ಸಲ್ಲಿಸಿದ್ದೇವೆ. ಬಜೆಟ್‌ನಲ್ಲಿ ಅನುದಾನ ಒದಗಿಸಬೇಕು ಎಂದು ಕೋರಿದ ಸದಸ್ಯ ನಸರುದ್ದೀನ್, ಪಟ್ಟಣದ ಐತಿಹಾಸಿಕ ಕೋಟೆ ಸಂರಕ್ಷಣೆ ಮಾಡಲು ಅನುದಾನ ನೀಡಬೇಕು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts