More

    ಹಾವು ನಾಲಿಗೆ ಹೊರಚಾಚುವುದೇಕೆ?: ಮಾಹಿತಿ ಮನೆ

    ಮನುಷ್ಯ ಬೆಳೆಯುವ ಬೆಳೆಯಲ್ಲಿ ಅಂದಾಜು ಶೇ.30ರಷ್ಟು ಬೆಳೆಯನ್ನು ಇಲಿಗಳು ತಿನ್ನುತ್ತವೆ. ಅಂತಹ ಇಲಿಗಳು ಹಾವಿಗೆ ಒಂದು ಬಹು ಮುಖ್ಯ ಆಹಾರ. ಮಾನವ ಸಂಬಂಧಿತ ಜೀವಿಗಳನ್ನು ಹೊರತು ಪಡಿಸಿ ಮಂಗ, ಚಿಂಪಾಂಜಿ ಇನ್ನೂ ಮುಂತಾದವು, ಇನ್ನುಳಿದ ಬಹುತೇಕ ಜೀವಿಗಳಿಗೆ, ಕಣ್ಣಿನ ದೃಷ್ಟಿಗಿಂತ ಮೂಗಿನ ವಾಸನೆಯೇ ಘ್ರಾಣೇಂದ್ರಿಯ ಮಾರ್ಗದರ್ಶಿ.

    ಯಾವುದೇ ಒಂದು ಪ್ರಾಣಿ ಚಲಿಸಿದರೆ, ಆ ಹಾದಿಯಲ್ಲಿ ಪ್ರಾಣಿಯ ದೇಹದಿಂದ ಹೊರಹೊಮ್ಮುವ ವಾಸನೆ ಹರಡಿ, ಕೆಲವು ಗಂಟೆಗಳವರೆಗೂ ಹಾಗೆಯೇ ಹಾಸಿರುತ್ತದೆ. ಇದು ಪ್ರಾಣಿಗಳಿಗೆ ಮಾತ್ರವಲ್ಲ! ಮನುಷ್ಯನ ವಾಸನೆ ಕೂಡ ವಾತಾವರಣದಲ್ಲಿರುತ್ತದೆ. ಅಂತಹ ವಾಸನೆಯ ಗುರುತಿನ ಆಧಾರದ ಮೇಲೆ ನಾಯಿಗಳು ಮನುಷ್ಯರನ್ನು ಪತ್ತೆ ಹಚ್ಚುತ್ತವೆ ಮತ್ತು ಇತರ ಪ್ರಾಣಿಗಳು ಬೇಟೆಯಾಡುತ್ತವೆ. ಅದೇ ರೀತಿ ಎಲ್ಲ ಜಾತಿಯ ಪ್ರಾಣಿ-ಪಕ್ಷಿಗಳ, ಗಿಡ-ಮರಗಳ ವಾಸನೆ ವಾತಾವರಣದಲ್ಲಿ ಸದಾಕಾಲ ಇರುತ್ತದೆ. ಇದನ್ನು ಕೆಮಿಕಲ್ ಎಕಾಲಜಿ ಎಂದು ಕರೆಯಬಹುದು.

    ಮನುಷ್ಯನೂ ಸೇರಿದಂತೆ ಬಹುತೇಕ ಎಲ್ಲ ಪ್ರಾಣಿಗಳು ಬದುಕುತ್ತಿರುವುದೇ ಇಂತಹ ಕೆಮಿಕಲ್ ಎಕಾಲಜಿಯ ಪ್ರಭಾವದಿಂದ. ಬಹುತೇಕ ಪ್ರಾಣಿಗಳಿಗೆ, ಆ ವಾಸನೆಯ ಮೂಲಕ, ಯಾವ ಜೀವಿ ಎಷ್ಟು ದೂರದಲ್ಲಿದೆ, ಅದು ಎಷ್ಟು ಗಾತ್ರದ ಜೀವಿ ಎಂದು ಗ್ರಹಿಸುವ ಶಕ್ತಿ ಇರುತ್ತದೆ. ಸರೀಸೃಪಗಳಿಗೆ ಶಬ್ದ ಗ್ರಹಿಸುವ ಕಿವಿಗಳು ವಿಕಾಸವಾಗಿಲ್ಲ. ಹಾಗಾಗಿ ಹಾವುಗಳು ನಾಲಿಗೆಯ ಮುಖಾಂತರ ವಾಸನೆಯನ್ನು ಗ್ರಹಿಸುವುದು ಅವುಗಳ ವಿಶೇಷತೆ. ಅದಕ್ಕೋಸ್ಕರ ಹಾವುಗಳ ನಾಲಿಗೆ ಆಗಾಗ್ಗೆ ಹೊರಗೆ ಬರುತ್ತದೆ. ಗಾಳಿಯಲ್ಲಿರುವ ವಾಸನೆಯ ಮೂಲಕ ಹಾವುಗಳು ಇಲಿಗಳನ್ನು ಹುಡುಕಿ, ಕಚ್ಚಿ ಪ್ರಜ್ಞೆ ತಪ್ಪಿಸಿ, ಸ್ವಲ್ಪ ಸಮಯದ ನಂತರ ತಿನ್ನುತ್ತವೆ.

    ಒಂದು ಅಂದಾಜಿನ ಪ್ರಕಾರ ಒಂದು ಹಾವು ಒಂದು ವರ್ಷಕ್ಕೆ 200 ಇಲಿಗಳನ್ನು ತಿನ್ನುತ್ತದೆ. ಇಲ್ಲದಿದ್ದರೆ ಈ ಭೂಮಿ ಮೇಲೆ ಇಲಿಗಳೇ ರಾಜ್ಯಭಾರ ಮಾಡುತ್ತಿದ್ದವು. ಹಾವುಗಳು ಇಲಿಗಳನ್ನು ತಿಂದು ಮನುಷ್ಯನಿಗೆ ಸಹಾಯ ಮಾಡುತ್ತವೆ. ಪ್ರಪಂಚದಲ್ಲಿ ಅಂದಾಜು 3,500ಕ್ಕೂ ಹೆಚ್ಚು ಜಾತಿಯ ಹಾವುಗಳಿವೆ. ಅವುಗಳಲ್ಲಿ ಅಂದಾಜು 20% ಮಾತ್ರ ವಿಷಪೂರಿತ ಹಾವುಗಳು. ಅಂತಹ ವಿಷಪೂರಿತ ಹಾವುಗಳಲ್ಲಿ 7% ಹಾವುಗಳು ಮಾತ್ರ ಮನುಷ್ಯನನ್ನು ಕಚ್ಚಿ ಸಾಯಿಸುವ ಸಾಮರ್ಥ್ಯ ಹೊಂದಿವೆ.

    VIDEO | ಕಣ್ತುಂಬಿಕೊಳ್ಳಿ ನೂತನ ಸಂಸತ್ ಭವನದ ಈ ಸೊಬಗ..

    ರಾಜ್ಯೋತ್ಸವ ರಸಪ್ರಶ್ನೆ - 21

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts