More

    ಎಂಎಲ್​ಎ ಟಿಕೆಟ್ ಸಿಗದಿದ್ದರೂ ಸಿಕ್ಕಿತು ಸಚಿವ ಸ್ಥಾನ!

    ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ನೂತನ ಸಚಿವರಾಗಿ ನಾಳೆ ಪ್ರಮಾಣವಚನ ಸ್ವೀಕರಿಸಲಿರುವವರ ಪಟ್ಟಿ ಬಹಿರಂಗಗೊಂಡಿದ್ದು, ಅಚ್ಚರಿಯೊಂದು ಕಂಡುಬಂದಿದೆ. ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಸಿಗದಿದ್ದವರಿಗೆ ಕೊನೆಗೂ ಸಚಿವಸ್ಥಾನ ಸಿಕ್ಕಿದೆ. ಗಗೊಂಡಿದ್ದು, ಅಚ್ಚರಿಯೊಂದು ಕಂಡುಬಂದಿದೆ.

    ಇದನ್ನೂ ಓದಿ: ‘ನಿನ್ನನ್ನು, ನಿನ್ನ ಮಕ್ಕಳನ್ನು ಜೀವಸಹಿತ ಬಿಡಲ್ಲ’ ಎಂದು ಕೆಎಎಸ್​ ಅಧಿಕಾರಿಗೆ ಕೊಲೆ ಬೆದರಿಕೆ: ಡಾ.ಸಂಜಯ್ ವಿರುದ್ಧ ಎಫ್​ಐಆರ್​

    ವಿಧಾನಸಭಾ ಚುನಾವಣೆ ವೇಳೆ ರಾಯಚೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್​ ಟಿಕೆಟ್ ಆಕಾಂಕ್ಷಿ ಆಗಿದ್ದ ಎನ್​.ಎಸ್​. ಬೋಸರಾಜು ಅವರೇ ಆ ಅದೃಷ್ಟವಂತ. ಬಳಿಕ ವಿಧಾನಪರಿಷತ ಸದಸ್ಯ ಸ್ಥಾನ ಗಿಟ್ಟಿಸಿಕೊಂಡಿದ್ದ ಇವರು ಸಚಿವಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ ಇವರಿಗೆ ಸಚಿವ ಸ್ಥಾನ ಸಿಗಬಾರದು ಎಂದು ಕಾಂಗ್ರೆಸ್ ಶಾಸಕರೇ ಒತ್ತಡ ತಂದಿದ್ದರು. ಅದಕ್ಕಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಪತ್ರ ಬರೆದಿದ್ದರು. ರಾಯಚೂರು ಜಿಲ್ಲೆಯ ಸಿಂಧನೂರು ಕ್ಷೇತ್ರದ ಶಾಸಕ ಹಂಪನಗೌಡ ಬಾದರ್ಲಿ, ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್ ಹಾಗೂ ಇನ್ನಿಬ್ಬರು ಮುಖಂಡರಾದ ಎ.ವಸಂತ್ ಕುಮಾರ್, ಅಸ್ಲಂ ಪಾಷಾ ಪತ್ರ ಬರೆದಿದ್ದರು. ಅದಾಗ್ಯೂ ಬೋಸರಾಜು ಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

    ಇದನ್ನೂ ಓದಿ: ನಾಳೆ ಯಾರ್ಯಾರ ಪ್ರಮಾಣವಚನ ಸ್ವೀಕಾರ?; ಇಲ್ಲಿದೆ ನೂತನ ಸಚಿವರ ಅಧಿಕೃತ ಪಟ್ಟಿ

    ಇಂದು ಬಹಿರಂಗಗೊಂಡಿರುವ 24 ನೂತನ ಸಚಿವರ ಅಧಿಕೃತ ಪಟ್ಟಿಯಲ್ಲಿ, ಕೆಲವು ಘಟಾನುಘಟಿ ನಾಯಕರ ಹೆಸರೇ ಬಿಟ್ಟುಹೋಗಿದೆ. ಆರ್.ವಿ.ದೇಶಪಾಂಡೆ, ಬಿ ಕೆ ಹರಿಪಸ್ರಾದ್, ಟಿ.ಬಿ.ಜಯಚಂದ್ರ ಹಾಗೂ ಸಿಎಂ ಆಪ್ತ ಬಸವರಾಜ ರಾಯರೆಡ್ಡಿ ಅವರಿಗೂ ಸಚಿವ ಸ್ಥಾನ ಕೈತಪ್ಪಿಹೋಗಿದ್ದರೂ ಬೋಸರಾಜುಗೆ ಸಿಕ್ಕಿದ್ದು ಅಚ್ಚರಿ ಮೂಡಿಸಿದೆ.

    ದಂಪತಿ ಮಧ್ಯೆ ಪ್ರೀತಿ ಇದ್ದರೂ ದಾಂಪತ್ಯ ದ್ರೋಹ; ವಿವಾಹೇತರ ಸಂಬಂಧದ ಬಗ್ಗೆ ಇಲ್ಲ ಪಶ್ಚಾತ್ತಾಪ: ಏನಿದು ಅಧ್ಯಯನ?

    22 ವರ್ಷ ತನ್ನೊಳಗಿದ್ದ ಹೃದಯವನ್ನು 16 ವರ್ಷಗಳ ಬಳಿಕ ಮ್ಯೂಸಿಯಮ್​ನಲ್ಲಿ ಕಣ್ಣೆದುರೇ ಕಂಡಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts