ಸಿನಿಮಾ

ಖ್ಯಾತ ನಿರ್ದೇಶಕ ಕೆ.ವಾಸು ವಿಧಿವಶ

ಹೈದರಾಬಾದ್‌: ಹಿರಿಯ ನಿರ್ದೇಶಕ ಕೆ.ವಾಸು ನಿಧನರಾಗಿದ್ದಾರೆ. ಹೈದರಾಬಾದ್‌ನ ಪ್ರತಿಷ್ಠಿತ ಕಿಮ್ಸ್ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದು, ಅವರಿಗೆ 60 ವರ್ಷ ವಯಸ್ಸಾಗಿತ್ತು.

ಇದನ್ನೂ ಓದಿ: ಸಚಿವ ಸ್ಥಾನ ನೀಡಿದ್ದರೆ ಚೆನ್ನಾಗಿತ್ತು: ಶಾಸಕ ಪುಟ್ಟರಂಗಶೆಟ್ಟಿ

ಹಲವು ದಿನಗಳಿಂದ ಕಿಡ್ನಿ ಸಂಬಂಧಿತ ಸಮಸ್ಯೆಯಿಂದ ಬಳಲುತ್ತಿದ್ದ ವಾಸು ಹೈದರಾಬಾದ್‌ನ ಪ್ರತಿಷ್ಠಿತ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಅಪಾರ ಚಿತ್ರಗಳನ್ನು ನಿರ್ದೇಶಿಸಿದ್ದ ವಾಸು, ಕನ್ನಡದಲ್ಲಿ ನಟ ಜಗ್ಗೇಶ್​ ಅಭಿನಯದ ಸರ್ವರ್​ ಸೋಮಣ್ಣ ಚಿತ್ರವನ್ನು ನಿರ್ದೆಶಿಸಿದ್ದರು.

ಆಡಪಿಳ್ಳಾ ತಂದ್ರಿ, ಆಡಪಿಲ್ಲ, ಪುಟ್ಟಿನಿಲ್ಲ ಮೆಟ್ಟಿನಿಲ್ಲ, ಕೊತ್ತಲ ರಾಯುಡು, ಪಕ್ಕಿಂತಿ ಅಮ್ಮಾಯಿ, ಕೊತ್ತ ದಂಪತ್ತುಲು, ಕಾಳಹಾಳ ಕಾಪುರಂ ಚಿತ್ರಗಳ ಮೂಲಕ ವಾಸು ಉತ್ತಮ ಹೆಸರು ಗಳಿಸಿದ್ದರು. ವಾಸು ನಿಧನಕ್ಕೆ ಚಿತ್ರರಂಗದ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದು, ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿ ಅಂತಿಮ ವಿಧಿವಿಧಾನಗಳು ನಡೆಯಲಿದೆ.(ಏಜೆನ್ಸೀಸ್​)

Latest Posts

ಲೈಫ್‌ಸ್ಟೈಲ್