More

    ಹಿಂದು ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಪತ್ನಿಗೆ ನೀಡಿದ್ದ ಉದ್ಯೋಗಕ್ಕೆ ಕಾಂಗ್ರೆಸ್​ ಸರ್ಕಾರ ಕೊಕ್​!

    ಮಂಗಳೂರು: ಬಿಜೆಪಿ ಅಧಿಕಾರ ಕಳೆದುಕೊಂಡು ಕಾಂಗ್ರೆಸ್​, ಕರ್ನಾಟಕದ ಗದ್ದುಗೆ ಏರಿದ ಬೆನ್ನಲ್ಲೆ ಹತ್ಯೆಗೀಡಾಗಿದ್ದ ಹಿಂದು ಕಾರ್ಯಕರ್ತ ಪ್ರವೀಣ್​ ನೆಟ್ಟಾರ್ ಅವರ​ ಪತ್ನಿಯನ್ನು ಸರ್ಕಾರ ಕೆಲಸದಿಂದ ತೆಗೆದುಹಾಕಿದ್ದು, ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದೆ.

    ಪ್ರವೀಣ್ ನೆಟ್ಟಾರ್ ಅವರ ಪತ್ನಿ ಕುಮಾರಿ ಎಂ. ಅವರಿಗೆ ಮುಖ್ಯಮಂತ್ರಿ ಸಚಿವಾಲಯದಲ್ಲಿನ ಗ್ರೂಪ್ ಸಿ ಹುದ್ದೆಗೆ ನೇಮಕಗೊಳಿಸಿ ನಿರ್ಗಮಿತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2022ರ ಸೆ. 29ರಂದು ಆದೇಶ ಹೊರಡಿಸಿದ್ದರು. ಇದೀಗ ಸರ್ಕಾರ ಬದಲಾಗಿದ್ದು, ನೂತನ ಕಾಂಗ್ರೆಸ್​ ಸರ್ಕಾರ ನೆಟ್ಟಾರ್ ಪತ್ನಿಗೆ ಕೆಲಸದಿಂದ‌ ಕೊಕ್ ಕೊಟ್ಟಿದೆ.

    ಇದನ್ನೂ ಓದಿ: ಏಕತೆಯ ಸಂಕೇತ: ಸಂಸತ್ ಭವನ ಉದ್ಘಾಟನೆ ಬಹಿಷ್ಕಾರ ಬೇಕಿರಲಿಲ್ಲ

    ಬೊಮ್ಮಾಯಿ ಸರ್ಕಾರದ ತಾತ್ಕಾಲಿಕ ನೆಲೆಯ ನೇಮಕಾತಿಯನ್ನು ಕಾಂಗ್ರೆಸ್​ ಸರ್ಕಾರ ರದ್ದು ಮಾಡಿದೆ. ದಕ್ಷಿಣ ಕ‌ನ್ನಡ ಜಿಲ್ಲಾಡಳಿತ ಕಚೇರಿಯ ಪ್ರಾಕೃತಿಕ ವಿಕೋಪ ವಿಭಾಗದದಲ್ಲಿ ನೆಟ್ಟಾರ್​ ಪತ್ನಿ ಕೆಲಸ ಮಾಡುತ್ತಿದ್ದರು. ಪ್ರವೀಣ್ ನೆಟ್ಟಾರ್ ಹತ್ಯೆಯ ಬಳಿಕ ಮಾನವೀಯ ದೃಷ್ಠಿಯಿಂದ ರಾಜ್ಯ ಸರ್ಕಾರ ಕೆಲಸ ನೀಡಿತ್ತು. ಇದೀಗ ಕಾಂಗ್ರೆಸ್​ ಸರ್ಕಾರ ಕೆಲಸದಿಂದ ತೆಗೆದುಹಾಕಿದ್ದು, ಮತ್ತೊಮ್ಮೆ ಹಿಂದುಗಳ ಕೆಂಗಣ್ಣಿಗೆ ಸರ್ಕಾರ ಗುರಿಯಾಗಲಿದೆ.

    ಘಟನೆ ಹಿನ್ನೆಲೆ?

    2022ರ ಜುಲೈ 26ರಂದು ರಾತ್ರಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ ಪ್ರವೀಣ್​ ನೆಟ್ಟಾರ್​ರನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಪ್ರವೀಣ್ ನೆಟ್ಟಾರು ದಕ್ಷಿಣ ಕನ್ನಡ ಜಿಲ್ಲಾ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯರಾಗಿದ್ದರು. ಇವರ ಹತ್ಯೆ ಇಡೀ ರಾಜ್ಯವನ್ನೇ ತಲ್ಲಣಗೊಳಿಸಿತ್ತು. ಪ್ರವೀಣ್​ ಕುಟುಂಬದ ಬೆನ್ನಿಗೆ ನಾವಿದ್ದೇವೆ ಎಂದು ಸಿಎಂ ಆ ವೇಳೆ ಅಭಯ ನೀಡಿದ್ದರು. ಅದರಂತೆ ದೊಡ್ಡಬಳ್ಳಾಪುರದಲ್ಲಿ ನಡೆದ ಜನಸ್ಪಂದನ ಸಮಾವೇಶದಲ್ಲಿ ನೆಟ್ಟಾರ್​ ಪತ್ನಿಗೆ ಸರ್ಕಾರಿ ಉದ್ಯೋಗ ಘೋಷಣೆ ಮಾಡಿದ್ದರು. ಬಳಿಕ ಆದೇಶ ಹೊರಡಿಸಿ ಮಾತು ಉಳಿಸಿಕೊಂಡರು. (ದಿಗ್ವಿಜಯ ನ್ಯೂಸ್​)

    ಎಜುಕೇಷನ್ ಎಕ್ಸ್‌ಪೋ ಇಂದಿನಿಂದ: ಜಯನಗರ 5ನೇ ಬ್ಲಾಕ್‌ನ ಶಾಲಿನಿ ಮೈದಾನದಲ್ಲಿ ಆಯೋಜನೆ, ರಾಮಲಿಂಗಾ ರೆಡ್ಡಿ ಚಾಲನೆ

    ಐಫೋನ್​ ಗಿಫ್ಟ್​ ಕೊಡಲು ನಿರಾಕರಿಸಿದ ಬಾಯ್​ಫ್ರೆಂಡ್​ಗೆ ಬಿಗ್​ ಶಾಕ್​ ಕೊಟ್ಟ ಗರ್ಲ್​ಫ್ರೆಂಡ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts