ನನಗೆ ರಾಜಕೀಯ ಸೇರುವ ಯೋಚನೆ ಇಲ್ಲ: ಕಂಗನಾ ರಣಾವತ್​

Kangana Ranaut - Final
Published on

ಯಾವಾಗ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಂಗನಾ ರಣಾವತ್​ ಬೆಂಬಲಿಸಿದರೋ, ಆಗಿನಿಂದಲೇ ಅವರು ಭಾರತೀಯ ಜನತಾ ಪಕ್ಷ ಸೇರುತ್ತಾರೆ ಎಂಬ ಸುದ್ದಿಯೊಂದು ಕೇಳಿ ಬಂದಿತ್ತು. ಆ ನಂತರದ ಕೆಲವು ಬೆಳವಣಿಗೆಗಳು, ಕಂಗನಾ ಅವರ ಮುಂದಿನ ಗುರಿ ರಾಜಕೀಯ ಎಂಬುದನ್ನು ಪುಷ್ಟೀಕರಿಸಿತ್ತು.

ಆದರೆ, ಕಂಗನಾ ಮಾತ್ರ ಇದುವರೆಗೂ ಭಾರತೀಯ ಜನತಾ ಪಕ್ಷ ಸೇರಿಲ್ಲ. ಅಷ್ಟೇ ಅಲ್ಲ, ಮುಂದಿನ ದಿನಗಳಲ್ಲೂ ಸೇರುವುದಿಲ್ಲವಂತೆ. ಅದಕ್ಕೆ ಕಾರಣ, ಅವರಿಗೂ ರಾಜಕೀಯಕ್ಕೂ ಆಗಿ ಬರುವುದಿಲ್ಲವಂತೆ. ಹಾಗಂತ ಅವರೇ ಇತ್ತೀಚೆಗೆ ಟ್ವೀಟ್​ ಮಾಡಿಕೊಂಡಿದ್ದಾರೆ.

'ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಪೋರ್ಟ್​ ಮಾಡಿದೆ ಎಂಬ ಕಾರಣಕ್ಕೆ ನಾನು ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸುತ್ತೇನೆ ಎಂದು ಹಲವರು ನಂಬಿದ್ದಾರೆ. ಗೊತ್ತಿಲ್ಲದಿದ್ದರೆ ಕೇಳಿ, ನನ್ನ ತಾತ 15 ವರ್ಷಗಳ ಕಾಲ ಕಾಂಗ್ರೆಸ್​ ಎಂ.ಎಲ್​.ಎ ಆಗಿದ್ದವರು. ಅಷ್ಟೇ ಅಲ್ಲ, 'ಗ್ಯಾಂಗ್​ಸ್ಟರ್​' ಚಿತ್ರದ ನಂತರ ಪ್ರೀತಿ ವರ್ಷ ನನಗೆ ಕಾಂಗ್ರೆಸ್​ನಿಂದ ಪ್ರತೀ ವರ್ಷ ನನಗೆ ಕಾಂಗ್ರೆಸ್​ ಸೇರುವುದಕ್ಕೆ ಆ ಪಕ್ಷದಿಂದ ಆಫರ್​ ಸಿಕ್ಕಿತ್ತು' ಎಂದು ಕಂಗನಾ ಹೇಳಿದ್ದಾರೆ.

ಇನ್ನು 'ಮಣಿಕರ್ಣಿಕಾ' ಚಿತ್ರದ ನಂತರ ಭಾರತೀಯ ಜನತಾ ಪಕ್ಷದಿಂದಲೂ ತಮಗೆ ಪಕ್ಷ ಸೇರುವ ಆಫರ್​ ಬಂದಿತ್ತು ಎಂದು ಹೇಳಿರುವ ಅವರು, 'ನನಗೆ ನಟನೆಯ ಬಗ್ಗೆ ಹೆಚ್ಚು ಪ್ಯಾಶನ್​ ಇದೆಯೇ ಹೊರತು, ಯಾವತ್ತೂ ರಾಜಕೀಯ ಸೇರುವ ಯೋಚನೆ ನನಗೆ ಬಂದಿಲ್ಲ. ಹಾಗಾಗಿ ನಾನು ರಾಜಕೀಯ ಪಕ್ಷ ಸೇರುವುದಕ್ಕೆ ಇಷ್ಟೆಲ್ಲಾ ಮಾಡುತ್ತಿದ್ದೇನೆ ಎಂದು ಟ್ರೋಲ್​ ಮಾಡುತ್ತಿರುವವರಿಗೆ, ನಾನು ಯಾವುದೇ ಪಕ್ಷ ಸೇರುತ್ತಿಲ್ಲ ಎಂದು ಸ್ಪಷ್ಟಪಡಿಸುತ್ತಿದ್ದೇನೆ' ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net