More

    ಸೈಫ್​ 50 ನೇ ವರ್ಷದ ಬರ್ತ್​​ಡೇಗೆ ಪತ್ನಿ ಕರೀನಾ ನೀಡಿದ ಉಡುಗೊರೆ ಇದು…

    ಸೈಫ್​ ಅಲಿಖಾನ್​ ಆಗಸ್ಟ್ 16ಕ್ಕೆ 50 ವರ್ಷದ ಜನ್ಮದಿನ ಆಚರಿಸಿಕೊಂಡರು. ಕರೊನಾ ಹಿನ್ನೆಲೆಯಲ್ಲಿ ಸರಳವಾಗಿ ಮನೆಯಲ್ಲಿಯೇ ಕುಟುಂಬಸ್ಥರ ಜತೆ ಸೇರಿ ಸೆಲೆಬ್ರೇಟ್​ ಮಾಡಿಕೊಂಡರು. ಪತ್ನಿ ಕರೀನಾ ಕಪೂರ್​ ಖಾನ್​ ಸೇರಿ ಕೆಲವೇ ಕೆಲವು ಮಂದಿಯ ಸಮ್ಮುಖದಲ್ಲಿ ಕೇಕ್​ ಕತ್ತರಿಸಿ ಹಾಫ್​ ಸೆಂಚುರಿ ಬಾರಿಸಿದರು. ಇನ್ನು ಸೆಲೆಬ್ರಿಟಿಗಳ ಬರ್ತ್​ಡೇ ಅಂದರೆ ಕೇಳಬೇಕೇ, ಅಲ್ಲಿ ವಿಶೇಷವಾದ ಉಡುಗೊರೆ ಇರಲೇಬೇಕಲ್ಲವೇ.. ಹೌದು, ಪತ್ನಿ ಕರೀನಾ ಅಷ್ಟೇ ವಿಶೇಷವಾದ ಉಡುಗೊರೆಯನ್ನೇ ಸೈಫ್​ಗೆ ನೀಡಿದ್ದಾರೆ.

    ಇದನ್ನೂ ಓದಿ: ಜನರೇಷನ್ ಗ್ಯಾಪ್​ನಲ್ಲಿ ಚೌಕಾಬಾರ! ಚಿತ್ರೀಕರಣಕ್ಕೆ ಮತ್ತೆ ಚಾಲನೆ

    ವಿಶೇಷವಾದ ಉಡುಗೊರೆಯೊಂದನ್ನು ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿರುವ ಕರೀನಾ ಪ್ರೀತಿಯ ಪತಿಗೆ ಸರ್ಫ್ರೈಸ್​ ನೀಡಿದ್ದಾರೆ. ಸೈಫ್​ ಅವರ ಬಾಲ್ಯದ ಫೋಟೋಗಳಿಂದ ಹಿಡಿದು ಈಗಿನ ಫೋಟೋಗಳನ್ನೆಲ್ಲ ವಿಡಿಯೋ ರೂಪದಲ್ಲಿ ಜೋಡಿಸಿ ಹಂಚಿಕೊಂಡಿದ್ದಾರೆ. ಅಚ್ಚರಿ ವಿಚಾರ ಏನೆಂದರೆ, 50 ವರ್ಷದ ಆ ಸವಿನೆನಪಿಗೆ ಬರೋಬ್ಬರಿ 22 ನಿಮಿಷದ ವಿಡಿಯೋವನ್ನು ಸೈಫ್​ಗೆ ತೋರಿಸಿದ್ದರು. ಜಾಳತಾಣಗಳಿಗೆ ಅಪ್​ಲೋಡ್​ ಮಾಡಲೆಂದೆ ಅದನ್ನು 3 ನಿಮಿಷಕ್ಕೆ ಟ್ರಿಮ್​ ಮಾಡಿದ್ದಾರೆ.

    ಇದನ್ನೂ ಓದಿ: ಎಸ್​.ಪಿ.ಬಾಲಸುಬ್ರಹ್ಮಣ್ಯಂ ಆರೋಗ್ಯದಲ್ಲಿ ಮತ್ತಷ್ಟು ಚೇತರಿಕೆ; ವೈದ್ಯರಿಂದ ಭರವಸೆ

    ‘ಸೈಫ್​ 50ನೇ ವರ್ಷದ ಜನ್ಮದಿನಕ್ಕೆ 50 ವರ್ಷದ ಅವರ ಬದುಕನ್ನು ತೋರಿಸಬೇಕೆಂದು 22 ನಿಮಿಷದ ವಿಡಿಯೋ ಮಾಡಿದ್ದೆ. ಅದು ತುಂಬ ಸುದೀರ್ಘವಾಗಿತ್ತು. ಇದೀಗ 50 ಫೋಟೋಗಳಿರುವ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದೇನೆ. ಐ ಲವ್​ ಯೂ ಮೈ ಲವ್​’ ಎಂದಿದ್ದಾರೆ. (ಏಜೆನ್ಸೀಸ್​)

    ಮರಣೋತ್ತರ ವಿಶೇಷ ಪ್ರಶಸ್ತಿಗೆ ಭಾಜನರಾಗುತ್ತಿದ್ದಾರೆ ಸುಶಾಂತ್​; ಯಾವುದಾ ಅವಾರ್ಡ್ ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts