More

    ಮರಣೋತ್ತರ ವಿಶೇಷ ಪ್ರಶಸ್ತಿಗೆ ಭಾಜನರಾಗುತ್ತಿದ್ದಾರೆ ಸುಶಾಂತ್​; ಯಾವುದಾ ಅವಾರ್ಡ್ ಗೊತ್ತಾ?

    ಸುಶಾಂತ್​ ಸಿಂಗ್​ ಆತ್ಮಹತ್ಯೆಗೆ ಶರಣಾಗಿ ಎರಡು ತಿಂಗಳ ಮೇಲಾಯಿತು. ಇಂದಿಗೂ ಅವರ ಸಾವಿನ ಬಗ್ಗೆ ತನಿಖೆ ನಡೆಯುತ್ತಿದೆ. ಒಂದಿಲ್ಲೊಂದು ರೀತಿಯಲ್ಲಿ ತಿರುವು ಪಡೆದುಕೊಳ್ಳುತ್ತಿದೆ. ತನಿಖೆಯ ಹಾದಿ ದಿನದಿಂದ ದಿನಕ್ಕೆ ಕಠಿಣವಾಗುತ್ತಿದ್ದು, ಹೊಸ ಹೊಸ ವಿಚಾರಗಳು ಹೊರ ಬರುತ್ತಿವೆ. ಈ ನಡುವೆ ಸುಶಾಂತ್​ ಸಾವಿಗೆ ನ್ಯಾಯದೊರಕಬೇಕೆಂಬ ಉದ್ದೇಶದಿಂದ ಸಹೋದರಿ ಶ್ವೇತಾ ಸಿಂಗ್​ ಕೀರ್ತಿ ಗ್ಲೋಬಲ್ ಪ್ರೇಯರ್ ಸಹ ಆಯೋಜಿಸಿದ್ದರು. ಇದೀಗ ಇನ್ನೊಂದು ಬದಿಯಲ್ಲಿ ಸುಶಾಂತ್​ಗೆ ರಾಷ್ಟ್ರ ಪ್ರಶಸ್ತಿ ನೀಡುವ ಬಗ್ಗೆ ಚರ್ಚೆಗಳೂ ನಡೆಯುತ್ತಿವೆ.

    ಇದನ್ನೂ ಓದಿ: ಜನರೇಷನ್ ಗ್ಯಾಪ್​ನಲ್ಲಿ ಚೌಕಾಬಾರ! ಚಿತ್ರೀಕರಣಕ್ಕೆ ಮತ್ತೆ ಚಾಲನೆ

    ಹೌದು, ಈಗಾಗಲೇ ಸಿನಿಮಾ ವಲಯದಲ್ಲಿ ಮತ್ತು ಸರ್ಕಾರದ ಮಟ್ಟದಲ್ಲಿ ಈ ಸಂಬಂಧ ಚರ್ಚೆಗಳು ನಡೆಯುತ್ತಿದ್ದು, ಸುಶಾಂತ್​ ಸಾಧನೆ ಪರಿಗಣಿಸಿ ಮರಣೋತ್ತರ ರಾಷ್ಟ್ರ ಪ್ರಶಸ್ತಿಯನ್ನು ನೀಡುವ ಅಭಿಪ್ರಾಯ ವ್ಯಕ್ತವಾಗಿದೆ. ‘ಸುಶಾಂತ್​ ಸಾವಿನ ಬಳಿಕ ಇಡೀ ಸಿನಿಮಾರಂಗವೇ ಅಲುಗಾಡಿದೆ. ಇಡೀ ಬಾಲಿವುಡ್​ ಕಂಬನಿ ಮಿಡಿದಿದೆ. ಅವರ ಸಾವಿನ ಬಳಿಕ ಸುಶಾಂತ್​ ಅವರನ್ನು ಗುರುತಿಸಲಾಗುತ್ತಿದೆ. ಇದೆಲ್ಲವನ್ನು ಗಮನಿಸಿ ವಿಶೇಷ ರಾಷ್ಟ್ರ ಪ್ರಶಸ್ತಿಯನ್ನು ನೀಡಲಾಗುವುದು’ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ನಿರ್ಧರಿಸಿದೆ ಎಂಬುದು ಮೂಲಗಳ ಮಾಹಿತಿ.

    ಇದನ್ನೂ ಓದಿ: ಎಸ್​.ಪಿ.ಬಾಲಸುಬ್ರಹ್ಮಣ್ಯಂ ಆರೋಗ್ಯದಲ್ಲಿ ಮತ್ತಷ್ಟು ಚೇತರಿಕೆ; ವೈದ್ಯರಿಂದ ಭರವಸೆ

    ಸಿನಿಮೋತ್ಸವದಲ್ಲಿ ಸುಶಾಂತ್​ ಅವರ ಸಿನಿಮಾಯಾನದ ಎಲ್ಲ ಸಿನಿಮಾಗಳ ಪ್ರದರ್ಶನವನ್ನೂ ಆಯೋಜಿಸಲು ಸರ್ಕಾರ ನಿರ್ಧರಿಸಿದೆಯಂತೆ. ಜತೆಗೆ ಭಾರತೀಯ ಸಿನಿಮಾಕ್ಕೆ ಸುಶಾಂತ್​ ಕೊಡುಗೆಯನ್ನು ಪರಿಗಣಿಸಿ ವಿಶೇಷವಾದ ಮರೋಣೋತ್ತರ ರಾಷ್ಟ್ರ ಪ್ರಶಸ್ತಿ ನೀಡಲಾಗುತ್ತದೆಯಂತೆ. (ಏಜೆನ್ಸೀಸ್​)

    ಹಳೇ ಲಯಕ್ಕೆ ಮರಳುತ್ತಿದ್ದಾರೆ ನಟ ಕೋಮಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts