More

    ಆಕೆ ಮಿಸ್ ಇಂಡಿಯಾ..ವರಿಸಿದ್ದು 35ಸಾವಿರ ಕೋಟಿ ರೂ.ಆಸ್ತಿ ಒಡೆಯನನ್ನು..!

    ಮುಂಬೈ:ಗಾಯತ್ರಿ ಜೋಶಿ ಅವರು ಡಿಸೆಂಬರ್ 2004 ರಲ್ಲಿ ಅಶುತೋಷ್ ಗೋವಾರಿಕರ್ ಅವರ ‘ಸ್ವದೇಸ್’ ಚಿತ್ರದ ಮೂಲಕ ಶಾರುಖ್ ಖಾನ್ ಜೊತೆಗಿನ ಬಾಲಿವುಡ್ ಚಲನಚಿತ್ರಕ್ಕೆ ಪಾದಾರ್ಪಣೆ ಮಾಡಿದರು. ಇದು ಆಕೆಯ ಮೊದಲ ಮತ್ತು ಏಕೈಕ ಚಿತ್ರವಾಗಿತ್ತು.

    ಇದನ್ನೂ ಓದಿ:ವೈರಲ್ ಆದ ಸಲ್ಮಾನ್ ಖಾನ್ ಮನೆಯ ಫೋಟೋಗಳು…ಅವರಿಲ್ಲಿ ವಾಸ ಮಾಡಲು ಕಾರಣವೂ ಅಷ್ಟೇ ವಿಶೇಷ!

    ಗಾಯತ್ರಿ ಜೋಶಿ ಒಂದು ಕಾಲದಲ್ಲಿ ಚಿತ್ರರಂಗದಲ್ಲಿ ಅದ್ಭುತ ನಟಿಯಾಗಿದ್ದರು. ಆದರೆ ಅವರು ಚಿತ್ರರಂಗಕ್ಕೆ ಹೆಚ್ಚು ಸಮಯ ನೀಡಲಿಲ್ಲ ಮತ್ತು ಕೇವಲ ಒಂದು ಚಿತ್ರದ ನಂತರ ನಟನೆಗೆ ವಿದಾಯ ಹೇಳಿದರು. ಸೂಪರ್‌ಸ್ಟಾರ್ ಶಾರುಖ್ ಖಾನ್ ಜತೆ ನಟಿಸುವುದರೊಂದಿಗೆ ಬಾಲಿವುಡ್ ಚಿತ್ರದಲ್ಲಿ ನಟಿಸಬೇಕೆಂಬ ಆಕೆಯ ಕನಸು ನನಸಾಯಿತು. ಆಕೆಗೆ ಅವಕಾಶಗಳಿದ್ದರೂ ಒಂದೇ ಚಿತ್ರಕ್ಕೆ ನಟನೆಗೆ ಗುಡ್​ಬೈ ಹೇಳಿ ಶ್ರೀಮಂತ ಉದ್ಯಮಿ ಬಿಲಿಯನೇರ್ ವಿಕಾಸ್ ಒಬೆರಾಯ್ ಅವರನ್ನು ವಿವಾಹವಾದರು.

    ಗಾಯತ್ರಿ ಜೋಶಿ ಮಹಾರಾಷ್ಟ್ರದ ನಾಗ್ಪುರ ಮೂಲದವರು. ಬಾಲಿವುಡ್‌ಗೆ ಪಾದಾರ್ಪಣೆ ಮಾಡುವ ಮೊದಲು, ಗೋದ್ರೇಜ್, ಎಲ್‌ಜಿ, ಪಾಂಡ್ಸ್, ಬಾಂಬೆ ಡೈಯಿಂಗ್, ಸನ್‌ಸಿಲ್ಕ್ ಮತ್ತು ಫಿಲಿಪ್ಸ್‌ನಂತಹ ಬ್ರ್ಯಾಂಡ್‌ಗಳಿಗೆ ಮಾಡೆಲ್ ಆಗಿದ್ದರು.

    ಗಾಯತ್ರಿ 1999 ರ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯ ಐದು ಅಂತಿಮ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದರು. ಮಿಸ್ ಇಂಡಿಯಾ ಇಂಟರ್ನ್ಯಾಷನಲ್ 2000 ಕಿರೀಟವನ್ನು ಪಡೆದರು. ಜಪಾನ್‌ನಲ್ಲಿ ನಡೆದ ಮಿಸ್ ಇಂಟರ್ನ್ಯಾಷನಲ್ 2000 ಸೌಂದರ್ಯ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.

    ‘ಸ್ವದೇಸ್’ ಬಿಡುಗಡೆಯಾದ ಕೆಲವು ತಿಂಗಳ ನಂತರ, ಗಾಯತ್ರಿ 2005 ರಲ್ಲಿ ಭಾರತೀಯ ಬಿಲಿಯನೇರ್, ರಿಯಲ್​ ಎಸ್ಟೇಟ್​ ಕಂಪನಿ ಆಲೀಕ ವಿಕಾಸ್ ಒಬೆರಾಯ್ ಅವರನ್ನು ವಿವಾಹವಾದರು. ಬಳಿಕ ಚಿತ್ರೋದ್ಯಮದಿಂದ ನಿವೃತ್ತರಾದರು. ಅವರು ಪ್ರಸ್ತುತ ಮುಂಬೈನಲ್ಲಿ ತಮ್ಮ ಪತಿ ಮತ್ತು ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ, ಗ್ಲಿಟ್ಜ್ ಮತ್ತು ಗ್ಲಾಮರ್ ಪ್ರಪಂಚದಿಂದ ದೂರವಿರುತ್ತಾರೆ.

    ಗಾಯತ್ರಿ ಜೋಶಿ ಅವರ ಪತಿ ವಿಕಾಸ್ ಒಬೆರಾಯ್ ಕೋಟ್ಯಾಧಿಪತಿ. ಅವರು ಮುಂಬೈ ಮೂಲದ ರಿಯಲ್ ಎಸ್ಟೇಟ್ ಕಂಪನಿ ಒಬೆರಾಯ್ ರಿಯಾಲ್ಟಿ ನಡೆಸುತ್ತಿದ್ದಾರೆ. ಫೋರ್ಬ್ಸ್ ಪ್ರಕಾರ ಅವರ ನಿವ್ವಳ ಮೌಲ್ಯವು 4.3 ಶತಕೋಟಿ ಡಾಲರ್(35000 ಕೋಟಿ ರೂಪಾಯಿ) ಆಗಿದೆ.

    ಸಿದ್ದರಾಮಯ್ಯ ಜನಸ್ಪಂದನಕ್ಕೆ ಬಂದ ಜನಸಾಗರ ನೋಡಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts