ವೈರಲ್ ಆದ ಸಲ್ಮಾನ್ ಖಾನ್ ಮನೆಯ ಫೋಟೋಗಳು…ಅವರಿಲ್ಲಿ ವಾಸ ಮಾಡಲು ಕಾರಣವೂ ಅಷ್ಟೇ ವಿಶೇಷ!

salman
Published on

ಮುಂಬೈ: ತಮ್ಮ ಒಂದು ಸಿನಿಮಾದಿಂದಲೇ ಕೋಟಿಗಟ್ಟಲೆ ಗಳಿಸುವ ಸಲ್ಮಾನ್ ಖಾನ್, ಕೆಲವೊಮ್ಮೆ ಚಿತ್ರಕ್ಕೆ ಅರ್ಧ ಪಾಲು ಮಾತ್ರ ಕೇಳುತ್ತಾರೆ. ಬಹುತೇಕರಿಗೆ ತಿಳಿದಿರುವ ಹಾಗೆ ಸಲ್ಮಾನ್ ಸುಮಾರು 2,850 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಆದರೆ ಈಗಲೂ ಅವರು ಒಂದು ಮಲಗುವ ಕೋಣೆಯಿರುವ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದಾರೆ. ಹೌದು, ಆಶ್ಚರ್ಯವಾಗುತ್ತಿರಬೇಕಲ್ಲವಾ?, ಈ ಫ್ಲಾಟ್‌ ಬೆಲೆ 16 ಕೋಟಿ ರೂಪಾಯಿ. ಸದ್ಯ ಇಲ್ಲಿ ವಾಸ ಮಾಡುತ್ತಿರುವುದರ ಹಿಂದಿನ ವಿಶೇಷ ಕಾರಣವನ್ನೂ ಭಾಯಿಜಾನ್ ವಿವರಿಸಿದ್ದಾರೆ.

ಮನೆಯೊಂದಿಗಿದೆ ಅಪಾರ ನೆನಪು 

ಸಲ್ಮಾನ್ ಖಾನ್ ನಿವ್ವಳ ಮೌಲ್ಯ 2850 ಕೋಟಿ ರೂ. ಇದರ ಹೊರತಾಗಿಯೂ ಸಲ್ಮಾನ್ ಕೇವಲ 16 ಕೋಟಿ ರೂಪಾಯಿ ಮೌಲ್ಯದ ಮನೆಯಲ್ಲಿ ವಾಸಿಸುತ್ತಿದ್ದಾರೆ. ಸಲ್ಮಾನ್ ಈ ಮನೆಯೊಂದಿಗೆ ಅನೇಕ ನೆನಪುಗಳನ್ನು ಹೊಂದಿದ್ದಾರೆ ಎಂಬುದು ಇದರ ಹಿಂದಿನ ಕಾರಣ. ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ಸಲ್ಮಾನ್ ಬಾಲ್ಯದಿಂದಲೂ ಈ ಮನೆಯಲ್ಲಿ ವಾಸಿಸುತ್ತಿದ್ದೇನೆ ಮತ್ತು ಈ ಮನೆಯೊಂದಿಗೆ ಅಸಂಖ್ಯಾತ ನೆನಪುಗಳಿವೆ ಎಂದು ಹೇಳಿದ್ದರು. ಅವರು ತಮ್ಮ ಬಾಲ್ಯವನ್ನು ಸಹ ಇದೇ ಮನೆಯಲ್ಲಿಯೇ ಕಳೆದರು. ಆದ್ದರಿಂದ ಅವರು ಈ ಮನೆಯಲ್ಲಿ ವಾಸಿಸುತ್ತಿದ್ದಾರೆ.

ಈ ಫ್ಲಾಟ್ ಸಲ್ಮಾನ್​​​​ಗೆ ನೆಚ್ಚಿನದು  ಕಳೆದ 50 ವರ್ಷಗಳಿಂದ ಸಲ್ಮಾನ್ ಈ ಮನೆಯಲ್ಲಿ ವಾಸಿಸುತ್ತಿದ್ದು, ಅವರಿಗೆ ತುಂಬಾ ಇಷ್ಟವಾಗಿದೆ. ಅದಕ್ಕಾಗಿಯೇ ಅವರು ಅದನ್ನು ಖಾಲಿ ಮಾಡಲು ಬಯಸುವುದಿಲ್ಲ. ತನಗಾಗಿ ಇನ್ನೊಂದು ಮನೆಯನ್ನು ಕೊಳ್ಳಲು ಸಾಧ್ಯವಿಲ್ಲವೆಂದಲ್ಲ, ಸಲ್ಮಾನ್ ತನಗಾಗಿ ಯಾವಾಗ ಬೇಕಾದರೂ ಐಷಾರಾಮಿ ಮನೆಯನ್ನು ಖರೀದಿಸಬಹುದು, ಆದರೆ ತನ್ನ ಮನೆಯ ಮೇಲಿನ ಅಪಾರವಾದ ಬಾಂಧವ್ಯದಿಂದಾಗಿ, ಅವರು ಎಂದಿಗೂ ಬೇರೆ ಯಾವುದೇ ಮನೆಯ ಬಗ್ಗೆ ಯೋಚಿಸುವುದಿಲ್ಲ ಮತ್ತು ಇಲ್ಲಿ ವಾಸಿಸಲು ಆದ್ಯತೆ ನೀಡುತ್ತಾರೆ.

ತುಂಬಾ ಸಿಂಪಲ್ ಸಲ್ಮಾನ್ ಮನೆಯಲ್ಲಿನ ವಸ್ತುಗಳು  ಇತ್ತೀಚೆಗೆ ಸಲ್ಮಾನ್ ಖಾನ್ ಅವರ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅದರಲ್ಲಿ ಅವರ ತೂಕವೂ ಹೆಚ್ಚಾಗಿದೆ ಎಂದು ತೋರಿಸಲಾಗಿದೆ. ಈ ಫೋಟೋಗಳಲ್ಲಿ ಸಲ್ಮಾನ್ ಖಾನ್ ಅವರ ಮನೆಯ ಒಳ ನೋಟವೂ ಕಾಣಿಸುತ್ತದೆ. ಇದರಲ್ಲಿ ಸಲ್ಮಾನ್ ಮನೆಯಲ್ಲಿ ಸರಳವಾದ ಸೋಫಾ, ಸರಳವಾದ ಡೈನಿಂಗ್ ಟೇಬಲ್​​ಗಳಿರುವುದು ಸ್ಪಷ್ಟವಾಗಿ ಕಾಣಬಹುದು. ಒಟ್ಟಿನಲ್ಲಿ ಸಲ್ಮಾನ್ ತುಂಬಾ ಸರಳ ಜೀವನಶೈಲಿಯನ್ನು ಇಷ್ಟಪಡುತ್ತಾರೆ.

ಇವರೆಲ್ಲಾ ಕೋಟಿಗಟ್ಟಲೆ ಮೌಲ್ಯದ ಮನೆಗಳಲ್ಲಿದ್ದಾರೆ!  ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವುದರಿಂದ ಜನರು ಸಲ್ಮಾನ್ ಮನೆಯ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ, ನಾವು ಇತರ ತಾರೆಯರ ಮನೆಗಳ ಬಗ್ಗೆ ಹೇಳುವುದಾದರೆ ಶಾರುಖ್ 200 ಕೋಟಿ ರೂಪಾಯಿ ಮೌಲ್ಯದ ಮನೆಯಲ್ಲಿ ವಾಸಿಸುತ್ತಿದ್ದಾರೆ. ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಕೂಡ 120 ಕೋಟಿ ರೂಪಾಯಿ ಮೌಲ್ಯದ ಮನೆಯಲ್ಲಿ ಜಲ್ಸಾದಲ್ಲಿ ವಾಸಿಸುತ್ತಿದ್ದಾರೆ. ಶಿಲ್ಪಾ ಶೆಟ್ಟಿ ಕೂಡ 100 ಕೋಟಿ ರೂಪಾಯಿ ಮೌಲ್ಯದ ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ, ಆದರೆ ಸಲ್ಮಾನ್ ಖಾನ್ ಕೇವಲ 16 ಕೋಟಿ ರೂಪಾಯಿ ಮೌಲ್ಯದ ಫ್ಲಾಟ್‌ನಲ್ಲಿ ವಾಸಿಸಲು ಬಯಸುತ್ತಾರೆ.

ಸಲ್ಮಾನ್ ಹುಟ್ಟುಹಬ್ಬ ಮತ್ತು ಈದ್‌ನ ವಿಶೇಷ ಸಂದರ್ಭದಲ್ಲಿ, ಇಲ್ಲಿಂದ ತಮ್ಮ ಅಭಿಮಾನಿಗಳಿಗೆ ವಿಶ್ ಮಾಡುತ್ತಾರೆ. ಸಲ್ಮಾನ್ ತಮ್ಮ ಮನೆಯಲ್ಲಿ ಜಿಮ್ ಕೂಡ ನಿರ್ಮಿಸಿದ್ದಾರೆ. ಮನೆಯಲ್ಲಿನ ಬಹುತೇಕ ವಸ್ತುಗಳು ತುಂಬಾ ಸರಳವಾಗಿದೆ. ಇದಲ್ಲದೇ ಸಲ್ಮಾನ್ ಗೆ ಇನ್ನೂ ಹಲವು ಆಸ್ತಿಗಳಿದ್ದರೂ ಅವರು ಈ ಫ್ಲಾಟ್ ನಲ್ಲಿಯೇ ವಾಸವಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net