More

    35 ವರ್ಷಗಳ ಹಿಂದೆ 11,000 ರೂ.ಸಂಭಾವನೆ ಪಡೆದಿದ್ದ ಸಲ್ಲು ಭಾಯ್‌ ಒಟ್ಟು ಆಸ್ತಿ ಎಷ್ಟಿದೆ, ಎಷ್ಟು ಕಾರುಗಳಿವೆ?

    ಮುಂಬೈ: ಕಳೆದ ಮೂರು ದಶಕಗಳಿಂದ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಬಾಲಿವುಡ್ ಆಳುತ್ತಿರುವುದಲ್ಲದೆ, ಅಪಾರ ಸಂಪತ್ತನ್ನೂ ಗಳಿಸಿದ್ದಾರೆ. ಇವರ ನಿವ್ವಳ ಮೌಲ್ಯ ತಿಳಿದ ಯಾರಾದರೂ ಬೆಚ್ಚಿ ಬೀಳುತ್ತಾರೆ. ಹೌದು, ಅತ್ಯಂತ ಕಡಿಮೆ ಸಂಭಾವನೆ ಪಡೆದು ಸಿನಿಮಾ ಜಗತ್ತಿಗೆ ಕಾಲಿಟ್ಟಿದ್ದ ಅವರು ಇಂದು ಕೋಟ್ಯಂತರ ಆಸ್ತಿಯ ಒಡೆಯ.

    ಸಲ್ಮಾನ್ 1988 ರಲ್ಲಿ ‘ಬಿವಿ ಹೋ ತೋ ಐಸಿ’ ಚಿತ್ರದ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಇದರಲ್ಲಿ ಅವರು ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದರಲ್ಲಿ ಕೆಲಸ ಮಾಡಿದ್ದಕ್ಕೆ ಸಲ್ಮಾನ್ ಖಾನ್ ಪಡೆದಿದ್ದು ಕೇವಲ 11,000 ರೂ. ಈಗ ಸಿನಿಮಾದಲ್ಲಿ ಕೆಲಸ ಮಾಡಲು ಕೋಟಿಗಟ್ಟಲೇ ಸಂಭಾವನೆ ಪಡೆಯುತ್ತಾರೆ.

    ಎಲ್ಲರಿಗೂ ಗೊತ್ತಿರುವ ಹಾಗೆ ‘ಬಿಗ್ ಬಾಸ್’ ನಡೆಸಿಕೊಡಲು ಸಲ್ಮಾನ್ ಖಾನ್ 12 ಕೋಟಿ ರೂ.ಸಂಭಾವನೆ ಪಡೆಯುತ್ತಾರೆ. ಅಷ್ಟೇ ಅಲ್ಲ, ಬಾಲಿವುಡ್‌ನ ಅತಿ ಹೆಚ್ಚು ಸಂಭಾವನೆ ಪಡೆಯುವ ತಾರೆಗಳಲ್ಲಿ ಒಬ್ಬರು. 2023 ರಲ್ಲಿ ಬಿಡುಗಡೆಯಾದ ‘ಟೈಗರ್ 3’ ಚಿತ್ರಕ್ಕಾಗಿ ಅವರು ನಿರ್ಮಾಪಕರಿಂದ 100 ಕೋಟಿ ರೂಪಾಯಿಗೂ ಹೆಚ್ಚು ಸಂಭಾವನೆ ಪಡೆದಿದ್ದರು. ಹಾಗೆಯೇ ಸಲ್ಮಾನ್ ಖಾನ್ ಒಂದು ಸಾಮಾಜಿಕ ಮಾಧ್ಯಮ ಪೋಸ್ಟ್‌ನಿಂದ 50 ಲಕ್ಷ ರೂ. ಪಡೆಯುತ್ತಾರೆ. ಸಲ್ಮಾನ್ ನಿವ್ವಳ ಮೌಲ್ಯ 2850 ಕೋಟಿ ರೂ. ಮತ್ತು ವಾರ್ಷಿಕ ಆದಾಯ 200 ಕೋಟಿ ರೂ. ಮುಂಬೈನಲ್ಲಿರುವ ಸಲ್ಮಾನ್ ಖಾನ್ ಅವರ ಗ್ಯಾಲಕ್ಸಿ ಅಪಾರ್ಟ್‌ಮೆಂಟ್ ಯಾವಾಗಲೂ ಸುದ್ದಿಯಲ್ಲಿರುತ್ತದೆ. ಈ ಭವ್ಯವಾದ ಮತ್ತು ಐಷಾರಾಮಿ ಅಪಾರ್ಟ್‌ಮೆಂಟ್‌ನ ಬೆಲೆ 114 ಕೋಟಿ ರೂ. ಎನ್ನಲಾಗಿದೆ. ಇನ್ನು ಪನ್ವೇಲ್‌ನಲ್ಲಿರುವ ಸಲ್ಮಾನ್‌ನ ಫಾರ್ಮ್‌ಹೌಸ್‌ನ ಬೆಲೆ 94 ಕೋಟಿ ರೂ.

    ಸಲ್ಮಾನ್ ಖಾನ್ ಚಿಂಬೈ ರಸ್ತೆಯಲ್ಲಿ 17 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಗೊರೈ ಬೀಚ್‌ನಲ್ಲಿ ಅವರಿಗೆ 35 ಕೋಟಿ ರೂಪಾಯಿ ಮೌಲ್ಯದ ಮನೆ ಇದೆ. ಇದಲ್ಲದೇ ಸಲ್ಮಾನ್ ಖಾನ್ ಮುಂಬೈ ಮತ್ತು ದುಬೈನಲ್ಲಿ ಕೋಟಿಗಟ್ಟಲೆ ಮೌಲ್ಯದ ಮೂರು ಪ್ರಾಪರ್ಟಿ ಹೊಂದಿದ್ದಾರೆ. ಸಲ್ಮಾನ್ ಖಾನ್ ಅವರು ‘ಸಲ್ಮಾನ್ ಖಾನ್ ಫಿಲ್ಮ್ಸ್’ ನಿರ್ಮಾಣ ಸಂಸ್ಥೆಯ ಮಾಲೀಕರೂ ಆಗಿದ್ದಾರೆ.

    ‘ದಿ ಬೀಯಿಂಗ್ ಹ್ಯೂಮನ್ ಫೌಂಡೇಶನ್’ ಎಂಬ ಚಾರಿಟಿಯನ್ನು ಹೊಂದಿರುವ ಸಲ್ಮಾನ್ SK-27 ಹೆಸರಿನ ಜಿಮ್ ಫ್ರಾಂಚೈಸ್ ಹೊಂದಿದ್ದಾರೆ. ಇದಲ್ಲದೇ ಸಲ್ಮಾನ್ ಖಾನ್ ಬೀಯಿಂಗ್ ಹ್ಯೂಮನ್ ಕ್ಲೋಥಿಂಗ್ ಬ್ಯಾಂಡ್ ಮಾಲೀಕರಾಗಿದ್ದಾರೆ.

    ಸಲ್ಮಾನ್ ಖಾನ್ ಗೆ ಐಷಾರಾಮಿ ಕಾರುಗಳೆಂದರೆ ತುಂಬಾ ಇಷ್ಟ. ಅವರು ಆಗಾಗ್ಗೆ ತನ್ನ ಐಷಾರಾಮಿ ಕಾರುಗಳನ್ನು ಓಡಿಸುವುದನ್ನು ಕಾಣಬಹುದು. ಇವರ ಕಾರು ಸಂಗ್ರಹಣೆಯಲ್ಲಿ ರೇಂಜ್ ರೋವರ್ ವೋಗ್, LX470, Audi RS7, Mercedes S ಕ್ಲಾಸ್, AMG GLE 43, ಲ್ಯಾಂಡ್ ಕ್ರೂಸರ್, BMW X6 ನಂತಹ ಉತ್ತಮ ಕಾರುಗಳು ಸೇರಿವೆ. ಅವರ ಬಳಿ ಕೆಲವು ಸ್ಪೋರ್ಟ್ಸ್ ಬೈಕ್‌ಗಳೂ ಇವೆ.

    ಟರ್ಕಿ ಭೂಕಂಪದಿಂದ ಇಸ್ರೇಲ್-ಹಮಾಸ್ ಯುದ್ಧದವರೆಗೆ…ಇಲ್ಲಿದೆ 2023ರಲ್ಲಿ ಜಗತ್ತಿನಲ್ಲಿ ನಡೆದ ಪ್ರಮುಖ ಘಟನೆಗಳ ವಿವರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts