More

    2 ತಿಂಗಳ ಹಿಂದೆ ಸುಹಾನಿ ದೇಹದಲ್ಲಾದ ಈ ಸಣ್ಣ ಬದಲಾವಣೆ ಆಕೆಯ ಜೀವದ ಜತೆ ಕನಸನ್ನೂ ಕಸಿಯಿತು!

    ನವದೆಹಲಿ: ಆಮೀರ್​ಖಾನ್​ ನಟಿಸಿದ ಜನಪ್ರಿಯ ಚಿತ್ರ ‘ದಂಗಲ್’ನಲ್ಲಿ ಬಬಿತಾ ಕುಮಾರಿ ಪಾತ್ರ ನಿರ್ವಹಿಸಿದ್ದ ಸುಹಾನಿ ಭಟ್ನಾಗರ್​ ಬಾಲ ನಟಿಯಾಗಿ ಸ್ಟಾರ್​ ಪಟ್ಟ ಗಳಿಸಿದ್ದರು. ನಟನೆಯಲ್ಲಿ ಮೋಡಿ ಮಾಡಿದ್ದ ಈ ಬಾಲ ನಟಿ 19ರ ಇಳಿ ವಯಸ್ಸಿನಲ್ಲಿಯೇ ಇಹಲೋಕ ತ್ಯಜಿಸಿರುವುದು ಚಿತ್ರರಂಗಕ್ಕೆ ದೊಡ್ಡ ಆಘಾತವಾಗಿದೆ.

    ಸುಹಾನಿ ಭಟ್ನಾಗರ್ ಸಾವಿಗೆ ಅಸಲಿ ಕಾರಣ ಏನೆಂಬುದನ್ನು ಆಕೆಯ ತಂದೆ ಪುನೀತ್​ ಭಟ್ನಾಗರ್​, ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ. ಸುಹಾನಿ ಡರ್ಮಟೊಮಿಯೊಸಿಟಿಸ್ (ಸ್ನಾಯು ದೌರ್ಬಲ್ಯ ಮತ್ತು ಚರ್ಮದ ದದ್ದುಗಳಿಂದ ಗುರುತಿಸಲ್ಪಟ್ಟ ಉರಿಯೂತದ ಕಾಯಿಲೆ) ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದರು. 10 ದಿನಗಳ ಹಿಂದೆ ಏಮ್ಸ್​ಗೆ ದಾಖಲಾಗಿದ್ದರು. ಅದಕ್ಕೂ ಎರಡು ತಿಂಗಳ ಹಿಂದೆ ಸುಹಾನಿ ಕಾಲಲ್ಲಿ ಊತ ಕಂಡುಬಂದಿತ್ತು. ಇದಾದ ಬಳಿಕ ಆಕೆಗೆ ಆರೋಗ್ಯ ಸಮಸ್ಯೆ ಕಾಡಲಾರಂಭಿಸಿತು.

    ಡರ್ಮಟೊಮಿಯೊಸಿಟಿಸ್​ನಿಂದ ಬಳಲುತ್ತಿದ್ದ ಸುಹಾನಿಗೆ ಸ್ಟೀರಾಯ್ಡ್‌ಗಳನ್ನು ಸೂಚಿಸಲಾಯಿತು, ಏಕೆಂದರೆ ರೋಗಕ್ಕೆ ಏಕೈಕ ಚಿಕಿತ್ಸೆಯಾಗಿತ್ತು. ಆದಾಗ್ಯೂ, ಔಷಧಿಯು ಸುಹಾನಿಯ ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ಅಡ್ಡ ಪರಿಣಾಮ ಬೀರಿತು. ಇದರ ಪರಿಣಾಮ ಸೋಂಕಿಗೂ ಕಾರಣವಾಯಿತು. ಸೋಂಕು ಉಲ್ಬಣಗೊಂಡು ಆಕೆಯ ಶ್ವಾಸಕೋಶವನ್ನೇ ದುರ್ಬಲಗೊಳಿಸಿತು. ಸುಹಾನಿಯ ಪ್ರಮುಖ ಅಂಗಗಳಲ್ಲಿ ನೀರು ಸಂಗ್ರಹವಾಗಿ, ಉಸಿರಾಟದ ತೊಂದರೆ ಕಾಣಿಸಿಕೊಂಡು ಶುಕ್ರವಾರ ಕೊನೆಯುಸಿರೆಳೆದಿದ್ದಾಳೆ.

    ಸುಹಾನಿಯನ್ನು ವೆಂಟಿಲೇಟರ್‌ನಲ್ಲಿಟ್ಟ ನಂತರವೂ, ಆಕೆಯ ಆಮ್ಲಜನಕದ ಮಟ್ಟವು ತುಂಬಾ ಕಡಿಮೆಯಾಗಿತ್ತು ಮತ್ತು ಶುಕ್ರವಾರ ಸಂಜೆ 7 ಗಂಟೆಗೆ, AIIMS ವೈದ್ಯರು ಆಕೆ ಮೃತಪಟ್ಟಿರುವುದಾಗಿ ಹೇಳಿದರು. ಚಿತ್ರರಂಗದ ಮೇಲೆ ಸಾಕಷ್ಟು ಕನುಸುಗಳನ್ನು ಕಂಡಿದ್ದಳು. ಸಿನಿ ಉದ್ಯಮಕ್ಕೆ ಮರಳಲು ಯೋಜಿಸಿದ್ದಳು. ಕಾಲೇಜಿನಲ್ಲಿಯೂ ಉತ್ತಮವಾಗಿ ಓದುತ್ತಿದ್ದಳು. ಅದಕ್ಕೆ ನಿದರ್ಶನವಾಗಿ ಕೊನೆಯ ಸೆಮಿಸ್ಟರ್‌ನಲ್ಲಿಯೂ ಅಗ್ರಸ್ಥಾನದಲ್ಲಿದ್ದಳು. ಪ್ರತಿಯೊಂದರಲ್ಲೂ ಸುಹಾನಿ ಪ್ರತಿಭಾವಂತಳಾಗಿದ್ದಳು. ನಮ್ಮ ಮಗಳು ನಮಗೆ ತುಂಬಾ ಹೆಮ್ಮೆ ತಂದಿದ್ದಾಳೆ.

    ಅಂಹಾಗೆ ಸುಹಾನಿ, ಭಟ್ನಾಗರ್ ನಿತೇಶ್ ತಿವಾರಿ ಅವರ ದಂಗಲ್ ನಲ್ಲಿ ತಮ್ಮ ಅಭಿನಯದ ಮೂಲಕ ಎಲ್ಲರನ್ನೂ ಮೆಚ್ಚಿಸಿದ್ದರು. ನಟಿ ಈ ಚಿತ್ರದಲ್ಲಿ ಜೂನಿಯರ್ ಬಬಿತಾ ಫೋಗಟ್ ಪಾತ್ರವನ್ನು ನಿರ್ವಹಿಸಿದರು. ಗಲ್ಲಾಪೆಟ್ಟಿಗೆಯಲ್ಲಿ ವಿಶ್ವದಾದ್ಯಂತ 3000 ಕೋಟಿ ರೂಪಾಯಿಗಳನ್ನು ಗಳಿಸುವ ಮೂಲಕ ಈ ಚಿತ್ರವು ಇತಿಹಾಸವನ್ನು ಸೃಷ್ಟಿಸಿತು. ಕ್ರೀಡೆ ಆಧಾರಿತ ಸಿನಿಮಾದಲ್ಲಿ ಆಮೀರ್ ಖಾನ್, ಝೈರಾ ವಾಸಿಮ್, ಸನ್ಯಾ ಮಲ್ಹೋತ್ರಾ ಮತ್ತು ಫಾತಿಮಾ ಸನಾ ಶೇಖ್ ಸೇರಿ ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. (ಏಜೆನ್ಸೀಸ್​)

    1700 ವರ್ಷ ಹಳೆಯ ಮೊಟ್ಟೆಯನ್ನು ಓಪನ್​ ಮಾಡಿದ ಸಂಶೋಧಕರಿಗೆ ಕಾದಿತ್ತು ಬಿಗ್​ ಶಾಕ್​!

    ನಿಮ್ಮ ಮಕ್ಕಳು ಕಾಟನ್​ ಕ್ಯಾಂಡಿ (ಬಾಂಬೆ ಮಿಠಾಯಿ) ತಿಂದರೆ ಕ್ಯಾನ್ಸರ್​ ಖಚಿತ: ಪುಟಾಣಿಗಳ ಪ್ರೀತಿಯ ಮಿಠಾಯಿ ತಮಿಳುನಾಡಿನಲ್ಲಿ ಸಂಪೂರ್ಣ ಬ್ಯಾನ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts