More

    1700 ವರ್ಷ ಹಳೆಯ ಮೊಟ್ಟೆಯನ್ನು ಓಪನ್​ ಮಾಡಿದ ಸಂಶೋಧಕರಿಗೆ ಕಾದಿತ್ತು ಬಿಗ್​ ಶಾಕ್​!

    ಲಂಡನ್​: ಬರೋಬ್ಬರಿ 1700 ವರ್ಷ ಹಳೆಯದಾದ ಮೊಟ್ಟೆಯೊಂದು ಉತ್ಖನನ ಮಾಡುವ ವೇಳೆ ಸಂಶೋಧಕರ ಕಣ್ಣಿಗೆ ಬಿದ್ದಿರುವ ಘಟನೆ ಇಂಗ್ಲೆಂಡ್​ನ ಬಕ್ಕಿಂಗ್​ಹ್ಯಾಮ್​ಶೈರ್​ನಲ್ಲಿ ನಡೆದಿದ್ದು, ಮೊಟ್ಟೆಯ ಒಳಗಡೆ ನೋಡಿದ ಸಂಶೋಧಕರೇ ಒಂದು ಕ್ಷಣ ಅಚ್ಚರಿಗೀಡಾಗಿದ್ದಾರೆ.

    2010ರಲ್ಲಿ ಬಕ್ಕಿಂಗ್​ಹ್ಯಾಮ್​ಶೈರ್​ನ ಆಯ್ಲೆಸ್ಬರಿ ಪಟ್ಟಣದಲ್ಲಿರುವ ನೀರಿನಿಂದ ತುಂಬಿದ ರೋಮನ್ ಹೊಂಡವನ್ನು ಉತ್ಖನನ ಮಾಡುವಾಗ 4 ಮೊಟ್ಟೆಗಳು ಪತ್ತೆಯಾದವು. ನೇಯ್ದ ಬುಟ್ಟಿ, ಕುಂಬಾರಿಕೆ ಪಾತ್ರೆಗಳು, ಚರ್ಮದ ಬೂಟುಗಳು ಮತ್ತು ಪ್ರಾಣಿಗಳ ಮೂಳೆಗಳ ಜತೆಯಲ್ಲಿ ಮೊಟ್ಟೆಗಳು ಇದ್ದವು.

    ಈ ಮೊಟ್ಟೆಗಳಲ್ಲಿ ಯಾವುದೇ ಬಿರುಕು ಇರಲಿಲ್ಲ. ಆದರೆ, ಎರಡು ಮೊಟ್ಟೆಗಳು ಉತ್ಖನನ ಸ್ಥಳದಿಂದ ತೆಗೆಯುವಾಗ ಹೊಡೆದು ಹೋದವು ಮತ್ತು ಕಡು ಸಲ್ಫರ್ ವಾಸನೆಯನ್ನು ಬೀರಿತು ಎಂದು ಲಂಡನ್‌ನ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂನಲ್ಲಿ ಪಕ್ಷಿಗಳ ಮೊಟ್ಟೆಗಳು ಮತ್ತು ಗೂಡುಗಳ ಹಿರಿಯ ಮೇಲ್ವಿಚಾರಕ ಡೌಗ್ಲಾಸ್ G.D. ರಸ್ಸೆಲ್ ಮಾಹಿತಿ ನೀಡಿದ್ದಾರೆ.

    ನಾಲ್ಕು ಮೊಟ್ಟೆಗಳಲ್ಲಿ ಒಂದು ಮೊಟ್ಟೆಯ ಒಳಗಡೆ ನೋಡಿದಾಗ ಸಂಶೋಧಕರಿಗೆ ಶಾಕ್​ ಕಾದಿತ್ತು. ಏಕೆಂದರೆ, ಮೊಟ್ಟೆಯ ಒಳಗೆ ಹಳದಿ ಲೋಳೆ ಮತ್ತು ಬಿಳಿ ದ್ರವ ಸ್ವಲ್ಪವೂ ಕೆಡದಂತೆ ಇತ್ತು. ಡೌಗ್ಲಾಸ್ G.D. ರಸ್ಸೆಲ್ ಪ್ರಕಾರ ಇದು ಅತ್ಯಂತ ಹಳೆಯ ಉದ್ದೇಶಪೂರ್ವಕವಾಗಿ ಸಂರಕ್ಷಿಸಲ್ಪಟ್ಟ ಏವಿಯನ್ ಪಕ್ಷಿಯ ಮೊಟ್ಟೆ ಎಂದು ತಿಳಿಸಿದ್ದಾರೆ.

    ಕೆಂಟ್ ವಿಶ್ವವಿದ್ಯಾಲಯದ ತಂಡವು 3D ಚಿತ್ರಗಳನ್ನು ನೀಡುವ ಮೊಟ್ಟೆಯ ಮೈಕ್ರೋ-CT ಸ್ಕ್ಯಾನ್ ಅನ್ನು ನಡೆಸಿದೆ. ಅದರ ಚಿತ್ರಗಳನ್ನು ಪರೀಕ್ಷಿಸಿದಾಗ ಮೊಟ್ಟೆಯ ಒಳಗಿನ ದ್ರವ ಹಾಗೂ ಹಳದಿ ಲೋಳೆ ಹಾಗೇ ಇದೆ. ಬಕಿಂಗ್‌ಹ್ಯಾಮ್‌ಶೈರ್ ಕೌನ್ಸಿಲ್‌ನ ಹೇಳಿಕೆಯ ಪ್ರಕಾರ, ಯೋಚಿಸಿದ್ದಕ್ಕಿಂತಲೂ ಈ ಮೊಟ್ಟೆಯು ಅಪರೂಪವಾಗಿದೆ.

    ಪುರಾತತ್ವಶಾಸ್ತ್ರಜ್ಞ ಡಾನಾ ಕತ್‌ಬರ್ಟನ್ ಬ್ರೌನ್ ಮಾತನಾಡಿ, ಬರಿದಾಗುವ ಈ ದ್ರವಗಳು ಇನ್ನೂ ಮೊಟ್ಟೆಯ ಒಳಗೆ ಹೇಗಿದೆ ಎಂಬುದು ಆಶ್ಚರ್ಯಕರವಾಗಿದೆ. ಈ ಕುರಿತು ಮತ್ತಷ್ಟು ಸಂಶೋಧನೆ ನಡೆಯಲಿದೆ ಎಂದು ತಿಳಿಸಿದ್ದಾರೆ. ಸದ್ಯ ಈ ಮೊಟ್ಟೆ ಇದೀಗ ಟಾಕ್​ ಆಫ್​ ದಿ ಟೌನ್​ ಆಗಿದೆ. (ಏಜೆನ್ಸೀಸ್​)

    ಗಂಡನೂ ಜತೆಗಿಲ್ಲ… ಈ ಒಂದು ಸಂಬಂಧದಿಂದ ಸುಂದರ ಜೀವನವನ್ನೇ ಹಾಳುಮಾಡಿಕೊಂಡ ನಟಿ ಮೀರಾ ಜಾಸ್ಮಿನ್​!

    ಎಂದಾದ್ರೂ ಆ್ಯಪಲ್​ ಟೀ ಟ್ರೈ ಮಾಡಿದ್ದೀರಾ? ಈ ರೀತಿ ಮಾಡಿ ನಿಮ್ಮ ದೇಹದಲ್ಲಾಗುವ ಚಮತ್ಕಾರ ನೋಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts