More

    ಇಂಗ್ಲೆಂಡ್​ ವಿರುದ್ಧದ ಉಳಿದ 3 ಟೆಸ್ಟ್​ ಪಂದ್ಯಗಳಿಗೂ​ ಕೊಹ್ಲಿ ಅಲಭ್ಯ: ಬಿಸಿಸಿಐ ಕೊಟ್ಟ ಕಾರಣ ಹೀಗಿದೆ…

    ನವದೆಹಲಿ: ಇಂಗ್ಲೆಂಡ್​​ ವಿರುದ್ಧದ ಉಳಿದ ಮೂರು ಟೆಸ್ಟ್​ ಪಂದ್ಯಗಳಿಗೆ ಬಿಸಿಸಿಐ ತಂಡವನ್ನು ಪ್ರಕಟಿಸಿದ್ದು, ವೈಯಕ್ತಿಕ ಕಾರಣಗಳನ್ನು ನೀಡಿ ವಿರಾಟ್​ ಕೊಹ್ಲಿ ಟೆಸ್ಟ್​ನಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ.

    ಬಿಸಿಸಿಐ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಸರಣಿಯ ಉಳಿದ ಪಂದ್ಯಗಳಿಗೆ ಕೊಹ್ಲಿ ಆಯ್ಕೆಗೆ ಅಲಭ್ಯರಾಗುತ್ತಾರೆ ಮತ್ತು ಸ್ಟಾರ್ ಬ್ಯಾಟರ್‌ನ ನಿರ್ಧಾರವನ್ನು ಮಂಡಳಿಯು ಬೆಂಬಲಿಸುತ್ತದೆ ಎಂದು ಬಿಸಿಸಿಐ ತಿಳಿಸಿದೆ.

    ಕೊಹ್ಲಿ ಅವರು ಆರಂಭದಲ್ಲಿ ಹೈದರಾಬಾದ್ ಮತ್ತು ವೈಜಾಗ್‌ನಲ್ಲಿ ನಡೆದ ಮೊದಲ ಎರಡು ಟೆಸ್ಟ್‌ ಪಂದ್ಯಗಳಿಂದ ಹಿಂದೆ ಸರಿದಿದ್ದರು. ಕೊನೆಯ ಮೂರು ಪಂದ್ಯಗಳಿಗೆ ಲಭ್ಯವಾಗುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಇದೀಗ ವೈಯಕ್ತಿಕ ಕಾರಣಗಳಿಂದ ಉಳಿದ ಪಂದ್ಯಗಳಿಂದಲೂ ಅಂತರ ಕಾಯ್ದುಕೊಂಡಿದ್ದಾರೆ. ಇತ್ತೀಚೆಗಷ್ಟೇ ಕೊಹ್ಲಿ ಮತ್ತು ಅನುಷ್ಕಾ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಎಬಿ ಡಿವಿಲಿಯರ್ಸ್​ ಹೇಳಿದ್ದರು. ಭಾರಿ ಸುದ್ದಿಯಾದ ಬಳಿಕ ಡಿವಿಲಿಯರ್ಸ್​ ಯೂಟರ್ನ್​ ಹೊಡಿದಿದ್ದಾರೆ.

    ಟೆಸ್ಟ್​ ತಂಡ: ರೋಹಿತ್ ಶರ್ಮಾ (ನಾಯಕ), ಜಸ್ಪ್ರೀತ್ ಬುಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ಕೆಎಲ್ ರಾಹುಲ್, ರಜತ್ ಪಾಟಿದಾರ್, ಸರ್ಫರಾಜ್ ಖಾನ್, ಧ್ರುವ್ ಜುರೆಲ್ (ವಿಕೆಟ್​ ಕೀಪರ್​), ಕೆಎಸ್ ಭರತ್ (ವಿಕೆಟ್​ ಕೀಪರ್​), ಆರ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಸರ್ ಪಟೇಲ್ ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್ ಮತ್ತು ಆಕಾಶ್ ದೀಪ್.

    ಇನ್ನು ಕೆಎಲ್ ರಾಹುಲ್ ಮತ್ತು ರವೀಂದ್ರ ಜಡೇಜಾ ಅವರ ಭಾಗವಹಿಸುವಿಕೆಯು ವೈದ್ಯಕೀಯ ತಂಡ ನೀಡುವ ಫಿಟ್​ನೆಸ್​​ ಪ್ರಮಾಣ ಪತ್ರದ ಮೇಲೆ ನಿಂತಿದೆ. ಗಾಯದ ಕಾರಣ ವೈಜಾಗ್ ಟೆಸ್ಟ್‌ನಿಂದ ಹೊರಗುಳಿದಿದ್ದ ಕೆಎಲ್ ರಾಹುಲ್ ಮತ್ತು ರವೀಂದ್ರ ಜಡೇಜಾ ಅವರ ಬಗ್ಗೆ ಬಿಸಿಸಿಐ ಅಪ್‌ಡೇಟ್ ಸಹ ನೀಡಿದೆ. ಇವರಿಬ್ಬರ ಪಾಲ್ಗೊಳ್ಳುವಿಕೆ ವೈದ್ಯಕೀಯ ತಂಡದ ಅನುಮತಿಗೆ ಒಳಪಟ್ಟಿರುತ್ತದೆ ಎಂದು ಮಂಡಳಿ ತಿಳಿಸಿದೆ. (ಏಜೆನ್ಸೀಸ್​)

    ನನ್ನ ಕಾಲ್ಬೆರಳಿನ ಸತ್ತ ಚರ್ಮವೂ ಸೆಕ್ಸಿಯಾಗಿದೆ ಆದ್ರೆ…. ದಪ್ಪ ತೊಡೆ, ಮಾದಕತೆ ಬಗ್ಗೆ ಮೃನಾಲ್​ ಓಪನ್​ ಟಾಕ್​

    ಡ್ರಗ್ ಓವರ್ ಡೋಸ್ ಅವಾಂತರ; ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾಳೆ ಪೋರ್ನ್ ಸ್ಟಾರ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts