More

  ನನ್ನ ಕಾಲ್ಬೆರಳಿನ ಸತ್ತ ಚರ್ಮವೂ ಸೆಕ್ಸಿಯಾಗಿದೆ ಆದ್ರೆ…. ದಪ್ಪ ತೊಡೆ, ಮಾದಕತೆ ಬಗ್ಗೆ ಮೃನಾಲ್​ ಓಪನ್​ ಟಾಕ್​

  ಮುಂಬೈ: ಸೀತಾ ರಾಮಂ ಸಿನಿಮಾ ಮೂಲಕ ಸೀತಾ ಮಹಾಲಕ್ಷ್ಮೀಯಾಗಿ ಸಾಂಪ್ರದಾಯಿಕ ಪಾತ್ರದಲ್ಲಿ ಎಲ್ಲರ ಮನಸ್ಸು ಗೆದ್ದಿರುವ ನಟಿ ಮೃನಾಲ್​ ಠಾಕೂರ್, ಸದ್ಯ ಸಾಕಷ್ಟು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಬಾಲಿವುಡ್​ಗಿಂತ ಬೇರೆ ಭಾಷೆಗಳಲ್ಲೇ ಭಾರಿ ಆಫರ್​ಗಳು ಬರುತ್ತಿವೆ. ಸ್ಟಾರ್​ ನಟಿಯರ ಸಾಲಿಗೆ ಸೇರಿರುವ ಮೃನಾಲ್​, ಇದೀಗ ಬಾಡಿ ಶೇಮಿಂಗ್​ ಬಗ್ಗೆ ಮಾತನಾಡಿದ್ದಾರೆ.

  ಮೃನಾಲ್ ಠಾಕೂರ್​ ಅವರು ಲವ್​ ಸೋನಿಯಾ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಈ ಸಿನಿಮಾ ವಿಮರ್ಶಾತ್ಮಕವಾಗಿ ಮೆಚ್ಚುಗೆ ಗಳಿಸಿತು. ಆದರೆ, ಮೃನಾಲ್​ ಮಾತ್ರ ಹೆಸರು ಮಾಡಲಿಲ್ಲ. ಬಾಲಿವುಡ್​ನಲ್ಲೂ ಅವಕಾಶಗಳು ಸಿಗಲಿಲ್ಲ. ಇಂತಹ ಸಂದರ್ಭದಲ್ಲಿ ಸೀತಾರಾಮಂ ಮತ್ತು ಹಾಯ್​ ನಾನ್ನಾ ಸಿನಿಮಾಗಳು ಮೃನಾಲ್​ಗೆ ಒಳ್ಳೆಯ ಹೆಸರು ತಂದುಕೊಟ್ಟಿವೆ. ಹೀಗಾಗಿ ಈ ಸಿನಿಮಾಗಳ ಮೇಲೆ ಮೃನಾಲ್​ಗೆ ತುಂಬಾ ಪ್ರೀತಿ ಇದೆ. ​

  ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ಮೃನಾಲ್​, ತನ್ನನ್ನು ಆಯ್ಕೆ ಮಾಡುವಂತೆ ಬಾಲಿವುಡ್‌ನ ನಿರ್ಮಾಪಕರಿಗೆ ಹೇಳಿ ಹೇಳಿ ಸುಸ್ತಾಗಿದೆ. ಬಾಲಿವುಡ್​ನಲ್ಲೂ ನನಗೆ ಅವಕಾಶಗಳು ಬರುತ್ತಿವೆ. ಆದರೆ, ಸೀತಾರಾಮ ಚಿತ್ರದ ಸೀತೆ ಮತ್ತು ಹಾಯ್​ ನಾನ್ನಾ ಸಿನಿಮಾದ ಯಷ್ಣ ಅಥವಾ ಸೋನಿಯಾ ರೀತಿಯ ಪಾತ್ರಗಳು ಸಿಗುತ್ತಿಲ್ಲ. ಉತ್ತಮ ಪಾತ್ರಗಳು ಬೇಕಿದೆ ಎಂದಿದ್ದಾರೆ.

  ಇದೇ ಸಮಯದಲ್ಲಿ ಬಾಡಿ ಶೇಮಿಂಗ್​ ಬಗ್ಗೆ ಮಾತನಾಡಿದ ಮೃನಾಲ್​, ಆ ವ್ಯಕ್ತಿ ನನ್ನನ್ನು ಮಾದಕ ಪಾತ್ರದಲ್ಲಿ ನೋಡುವುದಿಲ್ಲವಂತೆ ಅಥವಾ ನಾನು ಸಾಕಷ್ಟು ಸೆಕ್ಸಿಯಾಗಿ ಕಾಣುವುದಿಲ್ಲ ಎಂದು ಹೇಳಿದ್ದರಿಂದ ನಿರ್ಮಾಪಕರೊಬ್ಬರು ನನಗೆ ಅವಕಾಶ ನೀಡಲಿಲ್ಲ. ನನ್ನ ಕಾಲ್ಬೆರಳಿನ ಸತ್ತ ಚರ್ಮವೂ ಕೂಡ ಸೆಕ್ಸಿಯಾಗಿದೆ ಆದರೆ, ನಿರಂತರವಾಗಿ ಆ ಪಾತ್ರಗಳಿಗೆ ನಾನು ಒಡ್ಡಿಕೊಳ್ಳುವುದಿಲ್ಲ. ನಿರ್ದೇಶಕರು ನನ್ನನ್ನು ವಿಭಿನ್ನ ಪಾತ್ರಗಳಲ್ಲಿ ರೂಪಿಸಲು ತಟಸ್ಥವಾಗಿರಲು ಬಯಸುವುದಾಗಿ ಮೃನಾಲ್​ ಹೇಳಿದ್ದಾರೆ.

  ನಾನು ಜೇಡಿಮಣ್ಣಾಗಲು ಬಯಸುತ್ತೇನೆ. ಏಕೆಂದರೆ, ಜೇಡಿಮಣ್ಣನ್ನು ವಿವಿಧ ಭಾಗಗಳಾಗಿ ರೂಪಿಸಬಹುದು. ಮಾದಕತೆ ಎಂಬುದು ಒಬ್ಬರ ದೃಷ್ಟಿಕೋನವನ್ನು ಅವಲಂಬಿಸಿರುತ್ತದೆ. ನನಗೆ ಒಳ್ಳೆಯ ಸಂಭಾಷಣೆಯು ಸೆಕ್ಸಿಯಾಗಿದೆ ಎಂದ ಮೃನಾಲ್​, ಮೊದಲ ಬಾರಿಗೆ ಹಾಡೊಂದರಲ್ಲಿ ನಟಿಸಿದಾಗ, ತೂಕ ಇಳಿಸಿಕೊಳ್ಳಲು ಜನರು ಸಲಹೆ ನೀಡಿದ್ದನ್ನು ಮೃನಾಲ್​ ನೆನೆದರು. ಅಲ್ಲದೆ, ಬಿಟ್ಟಿ ಸಲಹೆಗಳಿಗೆ ಆ ವೇಳೆ ಖಡಕ್​ ಆಗಿಯೇ ತಿರುಗೇಟು ನೀಡಿದ್ದ ಮೃನಾಲ್​, ನನಗೆ ದಪ್ಪ ತೊಡೆಗಳಿವೆ ಮತ್ತು ನಾನು ಅವುಗಳನ್ನು ಹೊಂದಿದ್ದೇನೆ. ನನಗೆ ಅನಾನುಕೂಲವಾಗಿಲ್ಲದಿದ್ದರೆ, ನೀವು ಯಾಕೆ ಹಾಗೆ ಫೀಲ್​ ಮಾಡಿಕೊಳ್ಳುತ್ತೀರಿ ಎಂದಿದ್ದರಂತೆ.

  ಮತ್ತೊಂದು ಸಂದರ್ಶನದಲ್ಲಿ, ಮೃನಾಲ್ ಅವರು ಜಿಮ್‌ಗೆ ಹೋದಾಗ ಯಾರೋ ಅವರಿಗೆ ಸಲಹೆ ನೀಡಿದ್ದನ್ನು ನೆನೆದರು. ಇವು ನಿಮ್ಮ ಸಮಸ್ಯೆಯ ಪ್ರದೇಶಗಳಾಗಿವೆ ಎಂದು ದೇಹದ ಬಗ್ಗೆ ಕಾಮೆಂಟ್​ ಮಾಡಿದರಂತೆ. ಆದರೆ, ಆ ಕಾಮೆಂಟ್‌ಗೆ ಬಾಸ್ ಮಹಿಳೆಯಂತೆ ಪ್ರತಿಕ್ರಿಯಿಸಿದ ಮೃನಾಲ್, ಇಲ್ಲ ಇದು ನನ್ನ ಶಕ್ತಿ ಎಂದಿದ್ದರಂತೆ.

  ಸಿನಿಮಾ ವಿಚಾರಕ್ಕೆ ಬಂದರೆ, ಮೃನಾಲ್​ ಠಾಕೂರ್​ ಅವರು ವಿಜಯ್​ ದೇವರ ನಟನೆಯ ಫ್ಯಾಮಿಲಿ ಸ್ಟಾರ್​ ಸಿನಿಮಾದಲ್ಲಿ ನಟಿಸಿದ್ದಾರೆ. (ಏಜೆನ್ಸೀಸ್​)

  ಸೀತಾ ಮಹಾಲಕ್ಷ್ಮೀಯ ಬ್ಯಾಕ್​ ಟು ಬ್ಯಾಕ್​ ಬೋಲ್ಡ್​ ಅವತಾರ ಕಂಡು ಅಭಿಮಾನಿಗಳಿಗೆ ಅಸಮಾಧಾನ!

  ಕಾಲಿಗೆ ಬೇಕಾದ್ರೂ ಬೀಳ್ತೀನಿ ಆ ಫೋಟೋ ಡಿಲೀಟ್​​​ ಮಾಡಿ: ಸೀತಾ ಮಹಾಲಕ್ಷ್ಮೀಗೆ ಫ್ಯಾನ್ಸ್​​ ಮನವಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts