More

  ಕಾಲಿಗೆ ಬೇಕಾದ್ರೂ ಬೀಳ್ತೀನಿ ಆ ಫೋಟೋ ಡಿಲೀಟ್​​​ ಮಾಡಿ: ಸೀತಾ ಮಹಾಲಕ್ಷ್ಮೀಗೆ ಫ್ಯಾನ್ಸ್​​ ಮನವಿ

  ನವದೆಹಲಿ: ಸೀತಾ ರಾಮಂ ಸಿನಿಮಾ ಮೂಲಕ ಸೀತಾ ಮಹಾಲಕ್ಷ್ಮೀಯಾಗಿ ಸಾಂಪ್ರದಾಯಿಕ ಪಾತ್ರದಲ್ಲಿ ಎಲ್ಲರ ಮನಸ್ಸು ಗೆದ್ದಿರುವ ನಟಿ ಮೃನಾಲ್​ ಠಾಕೂರ್​ ಅವರ ಹಾಟ್​ ಅವತಾರಕ್ಕೆ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ.

  ನೀಲಿ ಬಣ್ಣದ ಬಿಕಿನಿ ಧರಿಸಿ ಕ್ಯಾಮೆರಾಗೆ ಪೋಸ್​​ ನೀಡಿರುವ ಮೃನಾಲ್ ಠಾಕೂರ್​ ಅವರ ಹಾಟ್​ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಸಮುದ್ರ ತೀರದಲ್ಲಿ ನೀರಿನಲ್ಲಿ ತೋಯ್ದಿರುವ ಸ್ಥಿತಿಯಲ್ಲಿ ನಿಂತು ಕ್ಯಾಮೆರಾಗೆ ಮೃನಾಲ್​ ಪೋಸ್​​ ನೀಡಿದ್ದಾರೆ. ಫೋಟೋಗೆ ಫೋಟೋ ಡಂಪ್​ ಎಂದು ಅಡಿಬರಹ ನೀಡಿದ್ದಾರೆ.

  ಇದನ್ನೂ ಓದಿ: ಪ್ಲಾಸ್ಟಿಕ್​ ಕೊಡಿ ಚಿನ್ನ ತಗೊಳ್ಳಿ! ಹೊಸ ಸಾಹಸಕ್ಕೆ ಕೈ ಹಾಕಿದ ಜಮ್ಮು ಕಾಶ್ಮೀರದ ಗ್ರಾಮ

  ಮೃನಾಲ್​ ಅವರು ಪ್ರವಾಸದಲ್ಲಿ ಇರುವಂತೆ ತೋರುತ್ತದೆ. ಅನೇಕ ಫೋಟೋಗಳನ್ನು ಶೇರ್​ ಮಾಡಿದ್ದು, ಅದರಲ್ಲಿ ವಡಾ ಪಾವ್​ ಮತ್ತು ಉತ್ತರ ಭಾರತದ ಥಾಲಿ ಸೇರಿದಂತೆ ಸ್ವಾದಿಷ್ಟಕರ ಆಹಾರದ ಫೋಟೋ ಕೂಡ ಇದೆ. 24 ಗಂಟೆಗಳ ಹಿಂದೆ ಇನ್​ಸ್ಟಾಗ್ರಾಂನಲ್ಲಿ ಫೋಟೋಗಳನ್ನು ಪೋಸ್ಟ್​ ಮಾಡಲಾಗಿದ್ದು, ಈವರೆಗೆ 15 ಲಕ್ಷಕ್ಕೂ ಹೆಚ್ಚು ಮಂದಿ ಲೈಕ್​ ಮಾಡಿದ್ದಾರೆ.

  ಹಲವರು ಮೃನಾಲ್​ ಅವರನ್ನು ಸೀತಾ ಮಹಾಲಕ್ಷ್ಮೀ ಪಾತ್ರದಲ್ಲಿ ನೋಡಿರುವುದರಿಂದ ಅದರಿಂಚಾಗೆ ಹಾಟ್​ ಅವತಾರದಲ್ಲಿ ಅವರನ್ನು ನೋಡಲು ಇಷ್ಟಪಡುತ್ತಿಲ್ಲ ಮತ್ತು ಬೇಸರ ಸಹ ಹೊರಹಾಕಿದ್ದಾರೆ. ಇದು ನಮ್ಮ ಸೀತಾ ಮಹಾಲಕ್ಷ್ಮೀನಾ ಎಂದು ಕೆಲ ನೆಟ್ಟಿಗರು ಹುಬ್ಬೇರಿಸಿದ್ದಾರೆ. ಹಾಟ್​ ಅವತಾರ ಕಂಡು ಏನಾಯಿತು ಸೀತಾ? ಎಂದು ಕೆಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

  ದಯವಿಟ್ಟು ನಾನು ನಿಮ್ಮಲ್ಲಿ ಬೇಡಿಕೊಳ್ಳುತ್ತೇನೆ. ನಿಮ್ಮ ಕಾಲಿಗೆ ಬೇಕಾದರೂ ಬೀಳುತ್ತೇನೆ, ದಯವಿಟ್ಟು ಈ ಬಿಕಿನಿ ಫೋಟೋಗಳನ್ನು ಡಿಲೀಟ್​ ಮಾಡಿ. ನಿಮ್ಮನ್ನು ಈ ರೀತಿಯಾಗಿ ನೋಡಲು ಆಗುತ್ತಿಲ್ಲ ಎಂದು ನೆಟ್ಟಿಗನೊಬ್ಬ ಪರಿಪರಿಯಾಗಿ ಬೇಡಿಕೊಂಡಿದ್ದಾನೆ.

  See also  ಸವಲತ್ತು ಬಳಸಿಕೊಂಡು ಸಾಧನೆ: ಅರುಣ್ ಕುಮಾರ್ ಪುತ್ತಿಲ ಸಲಹೆ

  ಇದನ್ನೂ ಓದಿ: ಚುನಾವಣಾ ತಯಾರಿ ನಡೆಸುತ್ತಿದ್ದ ಸ್ವತಂತ್ರ ಅಭ್ಯರ್ಥಿಗೆ ಶಾಕ್​ ನೀಡಿದ ಜಿಲ್ಲಾಧಿಕಾರಿ!

  Sita Mahalakshmi 1

  ಸೀತಾ ಮಹಾಲಕ್ಷ್ಮೀ ಒಂದು ಪಾತ್ರವಷ್ಟೇ ಅದು ರೀಲ್​ ಮತ್ತು ಮೃನಾಲ್​ ಠಾಕೂರ್​ ರಿಯಲ್​ ಮತ್ತು ಬಿಕಿನಿ ಧರಿಸುವುದರಲ್ಲಿ ಏನು ತಪ್ಪಿದೆ ಎಂದು ಕೆಲವರು ಪ್ರಶ್ನೆ ಮಾಡುವ ಮೂಲಕ ಮೃನಾಲ್​ ಪರ ಬ್ಯಾಟ್​ ಬೀಸಿದ್ದಾರೆ.

  ಸಿನಿಮಾ ವಿಚಾರಕ್ಕೆ ಬಂದರೆ ಮೃನಾಲ್ ಠಾಕೂರ್ ಅವರು ಆದಿತ್ಯ ರಾಯ್ ಕಪೂರ್ ಅವರೊಂದಿಗೆ ಗುಮ್ರಾ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. (ಏಜೆನ್ಸೀಸ್​​​​)

  ನಮ್ಮ ಕಿಚ್ಚ ಮಾರಿಕೊಳ್ಳುವವರಲ್ಲ! ಬಿಜೆಪಿ ವಿರುದ್ಧ ಪ್ರಕಾಶ್​ ರಾಜ್​ ವಾಗ್ದಾಳಿ

  ನಟ ಸುದೀಪ್​ಗೆ ಬಂದ ಬೆದರಿಕೆ ಪತ್ರದಲ್ಲಿ ಏನಿದೆ? ತನಿಖೆಯ ಜವಾಬ್ದಾರಿ ಸಿಸಿಬಿ ಹೆಗಲಿಗೆ

  100 ಮಿಲಿಯನ್​ ಕ್ಲಬ್​ಗೆ ‘ಕಾಂತಾರ’ ಚಿತ್ರದ ‘ಸಿಂಗಾರ ಸಿರಿಯೇ …’

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts