More

  ಸೀತಾ ಮಹಾಲಕ್ಷ್ಮೀಯ ಬ್ಯಾಕ್​ ಟು ಬ್ಯಾಕ್​ ಬೋಲ್ಡ್​ ಅವತಾರ ಕಂಡು ಅಭಿಮಾನಿಗಳಿಗೆ ಅಸಮಾಧಾನ!

  ಮುಂಬೈ: ಸೀತಾ ರಾಮಂ ಸಿನಿಮಾ ಮೂಲಕ ಸೀತಾ ಮಹಾಲಕ್ಷ್ಮೀಯಾಗಿ ಸಾಂಪ್ರದಾಯಿಕ ಪಾತ್ರದಲ್ಲಿ ಎಲ್ಲರ ಮನಸ್ಸು ಗೆದ್ದಿರುವ ನಟಿ ಮೃನಾಲ್​ ಠಾಕೂರ್, ಸದ್ಯ ಸಾಕಷ್ಟು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಇದೀಗ ಅವರ ನಟನೆಯ “ಹಾಯ್​ ನಾನಾ” ಸಿನಿಮಾದ ಟೀಸರ್​​ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.

  ಈ ಸಿನಿಮಾದಲ್ಲಿ ಮೃನಾಲ್​ ಠಾಕೂರ್​ ಅವರು ತೆಲುಗಿನ ಸ್ಟಾರ್​ ನಟ ನಾನಿ ಜತೆ ನಟಿಸಿದ್ದಾರೆ. ಟೀಸರ್​​ನಲ್ಲಿ ತಂದೆ-ಮಗಳ ಪ್ರೀತಿಯ ಬಂಧ ಒಂದೆಡೆಯಾದರೆ, ಮೃನಾಲ್​ ಮತ್ತು ನಾನಿ ಲಿಪ್​ಲಾಕ್​ ದೃಶ್ಯಗಳು ಎಲ್ಲರ ಗಮನ ಸೆಳೆದಿದೆ. ಅದರಲ್ಲ ಮೃನಾಲ್​ ಅಭಿಮಾನಿಗಳಿಗೆ ಒಂದು ರೀತಿಯಲ್ಲಿ ಶಾಕ್​ ಆಗಿದೆ. ಏಕೆಂದರೆ ಸೀತಾ ರಾಮಂ ಸಿನಿಮಾದಲ್ಲಿ ಸೀತಾ ಮಹಾಲಕ್ಷ್ಮೀ ಪಾತ್ರದಲ್ಲಿ ಅವರನ್ನು ನೋಡಿ ಫಿದಾ ಆದ ಅಭಿಮಾನಿಗಳು ಮೃನಾಲ್​ ಅವರನ್ನು ಬೋಲ್ಡ್​ ಪಾತ್ರಗಳಲ್ಲಿ ಒಪ್ಪಿಕೊಳ್ಳಲು ಸುತಾರಂ ತಯಾರಿಲ್ಲ.

  ಈ ಲಸ್ಟ್​​ ಸ್ಟೋರಿ ವೆಬ್​ ಸರಣಿಯಲ್ಲೂ ಮೃನಾಲ್​ ಹಸಿಬಿಸಿ ದೃಶ್ಯಗಳಲ್ಲಿ ನಟಿಸಿದ್ದರು. ಆಗಲೂ ಅಭಿಮಾನಿಗಳ ಅಪಸ್ವರ ಎತ್ತಿದ್ದರು. ಅಲ್ಲದೆ, ಮೃನಾಲ್​ ಅವರು ಆಗಾಗ ಸಾಮಾಜಿಕ ಜಾಲತಾಣದಲ್ಲಿ ಬಿಕಿನಿ ಫೋಟೋಗಳನ್ನು ಹರಿಬಿಡುತ್ತಿರುತ್ತಾರೆ. ಈ ವೇಳೆಯೂ ಸಹ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿ ಟ್ವೀಟ್​ ಮಾಡುತ್ತಿರುತ್ತಾರೆ. ಇದೀಗ ಹಾಯ್​ ನಾನಾ ಸಿನಿಮಾದಲ್ಲಿ ಮೃನಾಲ್​ ಲಿಪ್​ಲಾಕ್​ ಮಾಡಿರುವುದನ್ನು ಅಭಿಮಾನಿಗಳು ಸಹಿಸಿಕೊಳ್ಳುತ್ತಿಲ್ಲ.

  ಹಾಯ್​ ನಾನಾ ಸಿನಿಮಾದಲ್ಲಿ ಒಂದಲ್ಲ ಎರಡಲ್ಲ ಹಲವು ದೃಶ್ಯಗಳಲ್ಲಿ ಮೃನಾಲ್​ ಲಿಪ್​ಲಾಕ್​ ಮಾಡಿದ್ದಾರೆ. ಇದನ್ನು ನೋಡಿ ಶಾಕ್​ ಆಗಿರುವ ಅಭಿಮಾನಿಗಳು ಕಾಮೆಂಟ್​ ಬಾಕ್ಸ್​ನಲ್ಲಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಇವರೇನಾ ನಮ್ಮ ಸೀತಾ ಮಹಾಲಕ್ಷ್ಮೀ ಎನ್ನುತ್ತಿದ್ದಾರೆ. ಸತತವಾಗಿ ನಿಮ್ಮಿಂದ ಇಂತಹ ದೃಶ್ಯಗಳನ್ನು ನಾವು ನಿರೀಕ್ಷಿಸಿರಲಿಲ್ಲ ಎನ್ನುತ್ತಿದ್ದಾರೆ. ಆದರೆ, ಈ ಬಗ್ಗೆ ಚಿಂತಿಸದೇ ಪಾತ್ರಕ್ಕೆ ಏನು ಬೇಕೋ ಅದನ್ನು ಮೃನಾಲ್​ ಮಾಡಿಕೊಂಡು ಹೋಗುತ್ತಿದ್ದಾರೆ. ಅಲ್ಲದೆ, ಅನೇಕ ಸಿನಿಮಾಗಳಲ್ಲಿಯೂ ಮೃನಾಲ್​ ಬಿಜಿಯಾಗಿದ್ದಾರೆ.

  See also  ಕನ್ನಡ ಚಿತ್ರಗಳಿಗೆ ಹೌಸ್‌ಫುಲ್​ ಭಾಗ್ಯ: ಎಲ್ಲರ ಮನೆಯಲ್ಲೀಗ ಕನ್ನಡ ಚಿತ್ರಗಳ ಕಲರವ

  ಲೈಂಗಿಕತೆ ಬಗ್ಗೆ ಮುಕ್ತ ಮಾತು
  ಲಸ್ಟ್​ ಸ್ಟೋರಿ ಸರಣಿಯಲ್ಲಿ ತಮ್ಮ ನಟನೆಯ ಮೂಲಕ ಮೃನಾಲ್​ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿದ್ದರು. ಈ ಸರಣಿಯಲ್ಲಿ ಶೀಘ್ರದಲ್ಲೇ ಮದುವೆ ಆಗಲಿರುವ ವೇದ ಹೆಸರಿನ ಹೆಣ್ಣಿನ ಪಾತ್ರವನ್ನು ನಿರ್ವಹಿಸಿದರು. ಸಂದರ್ಶನವೊಂದರಲ್ಲಿ ಸೆಕ್ಸ್​ ಬಗ್ಗೆ ಮುಕ್ತವಾಗಿ ಮಾತನಾಡಿದ್ದರು. ಬೆಳೆಯುವ ಹಂತದಲ್ಲಿ ಮತ್ತು ಯೌವ್ವನದಲ್ಲಿ ಸೆಕ್ಸ್ ಮತ್ತು ಕಾಮದ ಬಗ್ಗೆ ಪ್ರಬುದ್ಧವಾಗಿ ಮಾತನಾಡುವುದು ತುಂಬಾ ಮುಖ್ಯ ಎಂದು ನಾನು ಬಲವಾಗಿ ನಂಬುತ್ತೇನೆ. ಮಕ್ಕಳಿಗೆ ಸೆಕ್ಸ್​ ಮತ್ತು ಕಾಮ (Lust)ದ ಬಗ್ಗೆ ಅರಿವು ಇರಬೇಕು. ಕುಟುಂಬದ ಯಾರದರೂ ಒಬ್ಬರು ಮಕ್ಕಳು ಮತ್ತು ಯುವಕ, ಯುವತಿಯರಿಗೆ ಈ ವಿಚಾರಗಳ ಬಗ್ಗೆ ಮುಕ್ತವಾಗಿ ಮತ್ತು ಪ್ರಮಾಣಿಕವಾಗಿ ಮಾತನಾಡಬೇಕು. ಆಗ ಮಾತ್ರ ಈ ವಿಷಯಗಳ ಬಗ್ಗೆ ಹೊರಗಿನಿಂದ ಬರುತ್ತಿರುವುದು ಸುಳ್ಳು ಮಾಹಿತಿ ಎಂಬುದು ಗೊತ್ತಾಗುತ್ತದೆ ಮತ್ತು ಇವುಗಳ ಬಗ್ಗೆ ಅರಿವು ಮೂಡುತ್ತದೆ ಎಂದರು.

  ಮೃನಾಲ್​ ಠಾಕೂರ್​ ಅವರ ಸಿನಿಮಾ ವಿಚಾರಕ್ಕೆ ಬರುವುದಾದರೆ ಹಾಯ್​ ನಾನಾ ಸಿನಿಮಾದ ಡಿಸೆಂಬರ್​ 7ರಂದು ಬಿಡುಗಡೆಯಾಗಲಿದೆ. ಇದರೊಂದಿಗೆ ವಿಜಯ್ ದೇವರಕೊಂಡ ಅವರೊಂದಿಗೆ ಇನ್ನೂ ಹೆಸರಿಸದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. (ಏಜೆನ್ಸೀಸ್​)

  Lust and S..x ಬಗ್ಗೆ ಮೃನಾಲ್​ ಮುಕ್ತ​ ಮಾತು: ಸೀತಾ ಮಹಾಲಕ್ಷ್ಮೀಯ ಹೇಳಿಕೆ ವೈರಲ್​!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts