More

  Lust and S..x ಬಗ್ಗೆ ಮೃನಾಲ್​ ಮುಕ್ತ​ ಮಾತು: ಸೀತಾ ಮಹಾಲಕ್ಷ್ಮೀಯ ಹೇಳಿಕೆ ವೈರಲ್​!

  ಮುಂಬೈ: ಸೀತಾ ರಾಮಂ ಸಿನಿಮಾ ಮೂಲಕ ಸೀತಾ ಮಹಾಲಕ್ಷ್ಮೀಯಾಗಿ ಸಾಂಪ್ರದಾಯಿಕ ಪಾತ್ರದಲ್ಲಿ ಎಲ್ಲರ ಮನಸ್ಸು ಗೆದ್ದಿರುವ ನಟಿ ಮೃನಾಲ್​ ಠಾಕೂರ್, ಸದ್ಯ ಸಾಕಷ್ಟು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಇದೀಗ ಅವರ ನಟನೆಯ ಲಸ್ಟ್​ ಸ್ಟೋರೀಸ್​ 2 ವೆಬ್​ ಸರಣಿ ಬಿಡುಗಡೆಯಾಗಿದೆ. ಇದರ ಬೆನ್ನಲ್ಲೇ ಮೃನಾಲ್​ ಅವರು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್​ನಲ್ಲಿದ್ದಾರೆ. ಅದಕ್ಕೆ ಕಾರಣ ಲಸ್ಟ್​ ಸ್ಟೋರೀಸ್​ 2 ವೆಬ್​ ಸರಣಿಯಲ್ಲಿನ ಅವರ ಹಸಿಬಿಸಿ ದೃಶ್ಯಗಳು.

  ಸೀತಾ ಮಹಾಲಕ್ಷ್ಮೀಯಾಗಿ ಸಾಂಪ್ರದಾಯಿ ಪಾತ್ರದಲ್ಲಿ ಮೃನಾಲ್​ ಅವರನ್ನು ಕಣ್ತುಂಬಿಕೊಂಡ ಅಭಿಮಾನಿಗಳು, ಲಸ್ಟ್​ ಸ್ಟೋರೀಸ್​ ಸರಣಿಯಲ್ಲಿ ಅವರ ಹಾಟ್​ನೆಸ್​ ನೋಡಿ ದಂಗಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮೃನಾಲ್​ ಅವರ ಹಸಿಬಿಸಿ ದೃಶ್ಯಗಳು ಹರಿದಾಡುತ್ತಿದ್ದು, ಅದನ್ನು ನೋಡಿದವರೂ ಇವರೇನಾ ನಮ್ಮ ಸೀತಾ ಮಹಾಲಕ್ಷ್ಮೀ ಎಂದು ಬಾಯಿ ಮೇಲೆ ಬೆರಳಿಟ್ಟುಕೊಳ್ಳುತ್ತಿದ್ದಾರೆ.

  ಇದನ್ನೂ ಓದಿ: ಮೆದುಳಿನ ಆರೋಗ್ಯ ತುಂಬಾ ಮುಖ್ಯ: ಈ ಚಟುವಟಿಕೆಗಳನ್ನು ಅನುಸರಿಸಿ, ಮೆದುಳನ್ನು ಸಕ್ರಿಯವಾಗಿರಿಸಿ

  ಲಸ್ಟ್​ ಸ್ಟೋರಿ ಸರಣಿಯಲ್ಲಿ ತಮ್ಮ ನಟನೆಯ ಮೂಲಕ ಮೆಚ್ಚುಗೆಗೆ ಪಾತ್ರವಾಗಿರುವ ಮೃನಾಲ್​, ಈ ಸರಣಿಯಲ್ಲಿ ಶೀಘ್ರದಲ್ಲೇ ಮದುವೆ ಆಗಲಿರುವ ವೇದ ಹೆಸರಿನ ಹೆಣ್ಣಿನ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಸರಣಿಯು ಜೀವನದಲ್ಲಿ ಲೈಂಗಿಕತೆಯ ಮಹತ್ವವನ್ನು ಸಾರುವ ಉದ್ದೇಶವನ್ನು ಹೊಂದಿದೆ.

  ಇದೀಗ ಸಿನಿಮಾ ಸಂದರ್ಶನವೊಂದರಲ್ಲಿ ಮೃನಾಲ್​ ಅವರು ಕಾಮ ಮತ್ತು ಸೆಕ್ಸ್​ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಬೆಳೆಯುವ ಹಂತದಲ್ಲಿ ಮತ್ತು ಯವ್ವನದಲ್ಲಿ ಸೆಕ್ಸ್ ಮತ್ತು ಕಾಮದ ಬಗ್ಗೆ ಪ್ರಬುದ್ಧವಾಗಿ ಮಾತನಾಡುವುದು ತುಂಬಾ ಮುಖ್ಯ ಎಂದು ನಾನು ಬಲವಾಗಿ ನಂಬುತ್ತೇನೆ.

  ಮಕ್ಕಳಿಗೆ ಸೆಕ್ಸ್​ ಮತ್ತು ಕಾಮ (Lust)ದ ಬಗ್ಗೆ ಅರಿವು ಇರಬೇಕು. ಕುಟುಂಬದ ಯಾರದರೂ ಒಬ್ಬರು ಮಕ್ಕಳು ಮತ್ತು ಯುವಕ, ಯುವತಿಯರಿಗೆ ಈ ವಿಚಾರಗಳ ಬಗ್ಗೆ ಮುಕ್ತವಾಗಿ ಮತ್ತು ಪ್ರಮಾಣಿಕವಾಗಿ ಮಾತನಾಡಬೇಕು. ಆಗ ಮಾತ್ರ ಈ ವಿಷಯಗಳ ಬಗ್ಗೆ ಹೊರಗಿನಿಂದ ಬರುತ್ತಿರುವುದು ಸುಳ್ಳು ಮಾಹಿತಿ ಎಂಬುದು ಗೊತ್ತಾಗುತ್ತದೆ ಮತ್ತು ಇವುಗಳ ಬಗ್ಗೆ ಅರಿವು ಮೂಡುತ್ತದೆ ಎಂದರು.

  ಅಂದಹಾಗೆ ಲಸ್ಟ್​ ಸ್ಟೋರೀಸ್​ ವೆಬ್​ ಸರಣಿಯನ್ನು ಆರ್​. ಬಲ್ಕಿ, ಕೊಂಕಣ ಸೇನಾ ಶರ್ಮಾ, ಸುಜಯ್​ ಘೋಷ್​ ಮತ್ತು ಅಮಿತ್​ ಶರ್ಮಾ ನಿರ್ದೇಶಿಸಿದ್ದಾರೆ. ಈ ಸರಣಿಯಲ್ಲಿ ಕಾಜೋಲ್, ವಿಜಯ್ ವರ್ಮ, ತಮನ್ನಾ ಭಾಟಿಯಾ, ತಿಲೋಟಮಾ ಶೋಮ್, ಅಮೃತಾ ಸುಭಾಷ್, ನೀನಾ ಗುಪ್ತಾ ಮತ್ತು ಕುಮುದ್ ಮಿಶ್ರಾ ಅಭಿನಯಿಸಿದ್ದಾರೆ.

  ಇದನ್ನೂ ಓದಿ: ರಾಜ್ಯದ ಮೊದಲ ಫಾರ್ಮುಲಾ 1 ಟ್ರ್ಯಾಕ್ ನಿರ್ಮಿಸಲು ಪ್ಲ್ಯಾನ್​: ಬಗೆದಷ್ಟು ಬಯಲಾಗ್ತಿದೆ ಅಜಿತ್​ ರೈ ಅಕ್ರಮ

  ಮೃನಾಲ್​ ಠಾಕೂರ್​ ಅವರ ಸಿನಿಮಾ ವಿಚಾರಕ್ಕೆ ಬರುವುದಾದರೆ ವಿಜಯ್ ದೇವರಕೊಂಡ ಅವರೊಂದಿಗೆ ಇನ್ನೂ ಹೆಸರಿಸದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಮತ್ತು ನಾನಿ ಜತೆಯು ನಟಿಸಲಿದ್ದಾರೆ. (ಏಜೆನ್ಸೀಸ್​)

  ಮೃನಾಲ್​ ಠಾಕೂರ್​ ಹಳೇ ಫೋಟೋ ವೈರಲ್​! ಇವರೇನಾ ಸೀತಾಮಹಾಲಕ್ಷ್ಮೀ ಎನ್ನುತ್ತಿರುವ ನೆಟ್ಟಿಗರು

  ಕಾಲಿಗೆ ಬೇಕಾದ್ರೂ ಬೀಳ್ತೀನಿ ಆ ಫೋಟೋ ಡಿಲೀಟ್​​​ ಮಾಡಿ: ಸೀತಾ ಮಹಾಲಕ್ಷ್ಮೀಗೆ ಫ್ಯಾನ್ಸ್​​ ಮನವಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts