More

    ಧೋನಿ ಮತ್ತೊಂದು IPL ಸೀಸನ್​ ಆಡಿದ್ರೆ ಈ ಒಂದು ನಿಯಮ ಬದಲಿಸದಂತೆ ಬಿಸಿಸಿಐಗೆ ರಾಯುಡು ಮನವಿ!

    ಬೆಂಗಳೂರು: ಪ್ರಸಕ್ತ ಐಪಿಎಲ್​ ಟೂರ್ನಿಯ ಲೀಗ್ ಹಂತವು ಮುಗಿದಿದೆ. ನಿರ್ಣಾಯಕ ಪ್ಲೇಆಫ್​ ಪಂದ್ಯಗಳಿಗೆ ಕ್ಷಣಗಣನೆ ಆರಂಭವಾಗಿದೆ. ಎಲ್ಲ 10 ತಂಡಗಳು ತಮ್ಮ 14 ಪಂದ್ಯಗಳನ್ನು ಪೂರ್ಣಗೊಳಿಸಿದ್ದು, ಹೆಚ್ಚು ಗೆಲುವುಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರ 4 ತಂಡಗಳು ಪ್ಲೇ ಆಫ್‌ ಪ್ರವೇಶಿಸಿವೆ. ಉಳಿದ ಆರು ತಂಡಗಳು ಹೊರಬಿದ್ದಿವೆ. ಕೆಕೆಆರ್​, ಎಸ್​ಆರ್​ಎಚ್​, ಆರ್​ಆರ್​ ಮತ್ತು ಆರ್​ಸಿಬಿ ಪ್ಲೇ ಆಫ್‌ಗೆ ಅರ್ಹತೆ ಪಡೆದಿವೆ. ಪ್ಲೇ ಆಫ್‌ ಪ್ರವೇಶ ಪಡೆಯುತ್ತೇವೆ ಎಂದು ಭಾವಿಸಿದ್ದ ಸಿಎಸ್‌ಕೆ ತವರಿನ ಹಾದಿ ಹಿಡಿದಿದೆ. ಇದರೊಂದಿಗೆ ಈ ಸೀಸನ್‌ನಲ್ಲಿ ಲೆಜೆಂಡರಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಅವರ ಆಟ ಮುಕ್ತಾಯವಾಗಿದೆ. ಆದರೆ, ಮುಂದಿನ ಐಪಿಎಲ್ ಸೀಸನ್​ನಲ್ಲೂ ಧೋನಿ ಆಡಬೇಕು ಎಂದು ಅನೇಕ ಕ್ರಿಕೆಟ್ ಅಭಿಮಾನಿಗಳು ಬಯಸುತ್ತಿದ್ದಾರೆ. ಇತ್ತೀಚೆಗೆ ಅಂಬಟಿ ರಾಯುಡು ಕೂಡ ಇದೇ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ.

    ಐಪಿಎಲ್​ನಿಂದ ಧೋನಿ ನಿವೃತ್ತಿಯಾಗುವ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ. ಆದರೆ, ಧೋನಿ ಮುಂದಿನ ಐಪಿಎಲ್ ಸೀಸನ್​ನಲ್ಲೂ ಆಡಲು ಬಯಸಿದ್ದಾರೆ ಎನ್ನಲಾಗುತ್ತಿದೆ. ಒಂದು ವೇಳೆ 18ನೇ ಆವೃತ್ತಿಯಲ್ಲಿ ಧೋನಿ ಆಡಿದರೆ, ಬಿಸಿಸಿಐ ಈ ಒಂದು ಕೆಲಸ ಮಾಡುವಂತೆ ಟೀಮ್​ ಇಂಡಿಯಾ ಹಾಗೂ ಸಿಎಸ್​ಕೆ ತಂಡದ ಮಾಜಿ ಆಟಗಾರ ಅಂಬಾಟಿ ರಾಯುಡು ವಿಶೇಷ ಮನವಿ ಮಾಡಿಕೊಂಡಿದ್ದಾರೆ.

    ಮುಂದಿನ ಸೀಸನ್​ನಲ್ಲೂ ಇಂಪ್ಯಾಕ್ಟ್​ ಪ್ಲೇಯರ್​ ನಿಯಮ ಮುಂದುವರಿಸುವಂತೆ ಬಿಸಿಸಿಐ ಬಳಿ ರಾಯುಡು ಕೇಳಿಕೊಂಡಿದ್ದಾರೆ. ಈ ನಿಯಮ ಇದ್ದರೆ ಮುಂದಿನ ಸೀಸನ್​ನಲ್ಲೂ ಧೋನಿ ಆಡುವ ಸಾಧ್ಯತೆ ಇದೆ ಎಂದಿದ್ದಾರೆ. ಆದರೆ, ಇದು ಧೋನಿಯ ಕೊನೆಯ ಸೀಸನ್ ಎಂಬ ಪ್ರಚಾರ ಟೂರ್ನಿ ಆರಂಭಕ್ಕೂ ಮುನ್ನವೇ ನಡೆದಿತ್ತು. ಆದಾಗ್ಯೂ ಧೋನಿ ಇದುವರೆಗೂ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ.

    ಧೋನಿ ಅವರು ಈ ಸೀಸನ್​ನಲ್ಲಿ ಬೃಹತ್ ಇನ್ನಿಂಗ್ಸ್ ಆಡದಿದ್ದರೂ, ಕ್ರೀಡಾಭಿಮಾನಿಗಳಿಗೆ, ವಿಶೇಷವಾಗಿ ಅವರ ಅಭಿಮಾನಿಗಳ ಮನಸ್ಸಿಗೆ ಮುದ ನೀಡುವಂತೆ ಉತ್ತಮ ಹೊಡೆತಗಳನ್ನು ಹೊಡೆ ಹೊಡೆದಿದ್ದಾರೆ. ಈ ಐಪಿಎಲ್​ನಲ್ಲಿ ವಿಂಟೇಜ್ ಧೋನಿಯನ್ನು ಪರಿಚಯಿಸಿದ ಅವರು ಬೃಹತ್ ಸಿಕ್ಸರ್‌ಗಳನ್ನು ಸಿಡಿಸಿದರು. ಅದರಲ್ಲೂ ಆರ್​ಸಿಬಿ ವಿರುದ್ಧ ಮೇ 18ರಂದು ನಡೆದ ನಿರ್ಣಾಯಕ ಪಂದ್ಯದಲ್ಲಿ 110 ಮೀಟರ್​ ಉದ್ದದ ಟೂರ್ನಿಯ ಅತ್ಯಂತ ಉದ್ದದ ಸಿಕ್ಸರ್​ ಸಿಡಿಸಿದರು.

    ರುತುರಾಜ್ಗೆ ನಾಯಕತ್ವ ಹಸ್ತಾಂತರಿಸಿದ್ದರಿಂದ ಇದು ಧೋನಿಯ ಕೊನೆಯ ಐಪಿಎಲ್ ಸೀಸನ್ ಎಂದು ಹೇಳಲಾಗಿದೆ. ಆದರೆ, ಇಂಪ್ಯಾಕ್ಟ್​ ಪ್ಲೇಯರ್​ ನಿಯಮ ಮುಂದುವರಿಸಿದರೆ ಧೋನಿ ಮುಂದಿನ ಐಪಿಎಲ್​ ಸೀಸನ್​ ಆಡಬಹುದು ಎಂದು ರಾಯುಡು ಹೇಳಿದ್ದಾರೆ. ಮುಂದಿನ ಸೀಸನ್​ನಲ್ಲಿ ಕೇವಲ ಬ್ಯಾಟಿಂಗ್ ಮಾಡುವ ಮೂಲಕ ಧೋನಿ ಇಂಪ್ಯಾಕ್ಟ್​ ಪ್ಲೇಯರ್​ ಆಗಿ ಆಡುವ ಸಾಧ್ಯತೆಯಿದೆ. ಆದ್ದರಿಂದ ಅದನ್ನು ರದ್ದುಗೊಳಿಸದೆ ಆ ನಿಯಮವನ್ನು ಮುಂದುವರಿಸಲು ರಾಯುಡು ವಿನಂತಿಸಿದ್ದಾರೆ. (ಏಜೆನ್ಸೀಸ್​)

    ಕೈಜಾರಿ ಬಿದ್ದ ಮಗು ಬದುಕಿದರೂ ನಿಲ್ಲದ ಟೀಕೆ: ಟ್ರೋಲ್​ಗಳ ಹಾವಳಿಗೆ ಬೇಸತ್ತು ಸಾವಿಗೆ ಶರಣಾದ ತಾಯಿ

    ಶೇಕ್​ ಹ್ಯಾಂಡ್​ ವಿವಾದ: ಯಾರು ಯಾರಿಗೆ ಅವಮಾನ ಮಾಡಿದ್ರು? ಈ ವಿಡಿಯೋ ನೋಡಿದ್ರೆ ನಿಮಗೆ ಗೊತ್ತಾಗುತ್ತೆ!

    ಮೆಟ್ರೋ ರೈಲಿನೊಳಗೆ ಅಶ್ಲೀಲ ಡಾನ್ಸ್​! ಯುವತಿಯ ವಿರುದ್ಧ ಭಾರಿ ಆಕ್ರೋಶ, ಕಠಿಣ ಕ್ರಮಕ್ಕೆ ಆಗ್ರಹ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts