More

    ರಾಜ್ಯದ ಮೊದಲ ಫಾರ್ಮುಲಾ 1 ಟ್ರ್ಯಾಕ್ ನಿರ್ಮಿಸಲು ಪ್ಲ್ಯಾನ್​: ಬಗೆದಷ್ಟು ಬಯಲಾಗ್ತಿದೆ ಅಜಿತ್​ ರೈ ಅಕ್ರಮ

    ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರಿಂದ ಬಂಧನಕ್ಕೆ ಒಳಗಾಗಿರುವ ಕೆ.ಆರ್. ಪುರಂ ತಹಸೀಲ್ದಾರ್​ ಅಜಿತ್​ ರೈ, ರಾಜ್ಯದ ಮೊದಲ ಫಾರ್ಮುಲಾ 1 ಟ್ರ್ಯಾಕ್ ನಿರ್ಮಿಸಲು ಯೋಜನೆ ರೂಪಿಸಿದ್ದರು ಎಂಬ ಸ್ಫೋಟಕ ಸಂಗತಿ ಬಯಲಾಗಿದೆ.

    ಕಾರ್ ರೇಸ್ ಫಾರ್ಮುಲಾ ಟ್ರ್ಯಾಕ್ ನಿರ್ಮಾಣ ಮಾಡಲು ಅಜಿತ್​ ರೈ ಸಾಕಷ್ಟು ಭೂಮಿ ಖರೀದಿ ಮಾಡಿದ್ದರು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹತ್ತಿರ ಇರುವ ದೊಡ್ಡಬಳ್ಳಾಪುರ ಬಳಿ 150 ಎಕರೆ ಭೂಮಿಯಲ್ಲಿ ಫಾರ್ಮುಲ ಟ್ರ್ಯಾಕ್​ ನಿರ್ಮಾಣ ಮಾಡಲು ರೈ ಪೂರ್ವ ಸಿದ್ದತೆಯಲ್ಲಿದ್ದರು.

    ಉತ್ತರ ಪ್ರದೇಶ ನೋಯ್ಡಾದಲ್ಲಿರುವ ಬುದ್ಧ ಇಂಟರನ್ಯಾಷನಲ್​ ಸರ್ಕಿಟ್ ಫಾರ್ಮುಲಾ ಕಾರ್ ರೇಸ್​ಗೆ ರೈ ಭೇಟಿ ಕೊಟ್ಟಿದ್ದರು. ರೈ ಅವರು ಕಾರುಗಳು ಬಗ್ಗೆ ಕ್ರೇಜ್ ಹೊಂದಿದ್ದರು. ದೇಶ ವಿದೇಶಗಳಲ್ಲಿ ನಡೆಯುತ್ತಿದ್ದ ಫಾರ್ಮುಲಾ ರೇಸ್​ಗಳಿಗೆ ಭೇಟಿ ನೀಡುತ್ತಿದ್ದರು. ಇದ್ದರಿಂತ ಪ್ರೇರಿತಗೊಂಡು ಸ್ವಂತ ಫಾರ್ಮುಲಾ ರೇಸ್ ಟ್ರ್ಯಾಕ್ ಆರಂಭಿಸಲು ತಯಾರಿ ನಡೆಸುತ್ತಿದ್ದರು.

    ಇದನ್ನೂ ಓದಿ: ವಾಹನ ನೋಂದಣಿ ದಂಧೆಗೆ ತನಿಖೆ ಬಿಸಿ, ಹೊಸಕೋಟೆ ಯಾರ್ಡ್​ಗೆ ಖಾಕಿ ಪಡೆ ಲಗ್ಗೆ

    ಅಜಿತ್​ ರೈ 11 ಐಷಾರಾಮಿ ಕಾರು ಹೊಂದಿದ್ದಾರೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ರೇಸ್ ಟ್ರ್ಯಾಕ್ ನಿರ್ಮಾಣ ಮಾಡಿದ್ರೆ ಹೆಚ್ಚಿನ ಸಂಖ್ಯೆಯಲ್ಲಿ ಪೇಕ್ಷಕರು ಕೊಡ ಪಾಲ್ಗೊಳಬಹುದು. ಇದರಿಂದ ಹೆಚ್ಚು ಆದಾಯ ಬರುತ್ತದೆ ಎಂದು ಟ್ರ್ಯಾಕ್​ ನಿರ್ಮಾಣ ಮಾಡಲು ಯೋಜನೆ ರೂಪಿಸಿದ್ದರು.

    ಅಪಾರ ಆಸ್ತಿ ಪತ್ತೆ

    ಸಹಕಾರ ನಗರದ ಅಜಿತ್​ ರೈ ಮನೆ ಮೇಲೆ ದಾಳಿ ಮಾಡಿದ ವೇಳೆ ಫಾರ್ಮುಲಾ ರೇಸ್ 1ಗೆ ನಿರ್ಮಾಣ ಮಾಡಲು ಸಿದ್ಧಪಡಿಸಿದ್ದ ಯೋಜನೆಯ ನಕ್ಷೆ ಪತ್ತೆಯಾಗಿದ್ದು, ಈ ವಿಚಾರ ಬಹಿರಂಗವಾಗಿದೆ.

    ಕೆ.ಆರ್. ಪುರಂ ತಹಸೀಲ್ದಾರ್ ಅಜಿತ್ ರೈರನ್ನು ಲೋಕಾಯುಕ್ತ ಪೊಲೀಸರು ಗುರುವಾರ (ಜೂ.29) ಬಂಧಿಸಿದ್ದಾರೆ. ಎರಡು ದಿನಗಳ ಕಾಲ ತಹಶೀಲ್ದಾರ್ ಮನೆ, ಕಚೇರಿ ಮೇಲೆ ದಾಳಿ ಮಾಡಿ ನಿರಂತರ ಪರಿಶೀಲನೆ ಮಾಡಲಾಗಿದೆ. ಈ ವೇಳೆ ಆದಾಯಕ್ಕೂ ಮೀರಿ ಆಸ್ತಿ ಗಳಿಕೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಅಜಿತ್ ರೈರನ್ನು ಬಂಧಿಸಲಾಗಿದೆ.

    ಅಜಿತ್​ ರೈಗೆ ಸಂಬಂಧಿಸಿದ ಸ್ಥಳಗಳಲ್ಲಿ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು 40 ಲಕ್ಷ ನಗದು, 700 ಗ್ರಾಂ ಚಿನ್ನ, 1.90 ಕೋಟಿ ಮೌಲ್ಯದ ವಸ್ತುಗಳು, ಐಷಾರಾಮಿ ಕಾರು ಮತ್ತು ಬೈಕ್​ಗಳನ್ನು ವಶಕ್ಕೆ ಪಡೆದಿದ್ದರು. 4 ಥಾರ್ ಕಾರ್, 4 ಫಾರ್ಚೂನರ್ ಕಾರ್, 3 ರಾಯಲ್ ಎನ್‌ಫೀಲ್ಡ್, 1 ಲ್ಯಾಂಡ್ ಕ್ರೂಸರ್ (2.5 ಕೋಟಿ ಮೌಲ್ಯ) ಹೊಂದಿದ್ದು, ಎಲ್ಲ ಕಾರಿಗೂ ಒಂದೇ ನಂಬರ್ ರಿಜಿಸ್ಟರ್ ಇದೆ. ಆದರೆ ಇದ್ಯಾವುದಕ್ಕೂ ಅಜಿತ್​ ರೈ ಲೆಕ್ಕ ಕೊಡುತ್ತಿಲ್ಲ ಎನ್ನಲಾಗಿದೆ.

    ಇದನ್ನೂ ಓದಿ: ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಸಮಿತಿ ಸಭೆ- ಶಾಲಾವರಣ ಹದಗೆಡಿಸಿದರೆ ಕೇಸ್ ದಾಖಲಿಸಿ-ಜಿಲ್ಲಾಧಿಕಾರಿ ಶಿವಾನಂದ ಕಾಪಶಿ

    ದಾಳಿ ವೇಳೆ ಅಜಿತ್ ರೈಗೆ ಸೇರಿದ 100 ಎಕರೆಗೂ ಅಧಿಕ ವಿವಿಧ ಆಸ್ತಿ ಪತ್ರಗಳು ಲಭ್ಯವಾಗಿವೆ. ಅಜಿತ್ ರೈ ಸಂಬಂಧಿಕರು, ಸ್ನೇಹಿತರ ಹೆಸರಲ್ಲೂ ಆಸ್ತಿ ಪತ್ರಗಳು ಪತ್ತೆಯಾಗಿವೆ. ಬೇನಾಮಿ ಹೆಸರಿನಲ್ಲಿ ಅಜಿತ್​ ರೈ ಆಸ್ತಿ ಮಾಡಿರುವ ಶಂಕೆ ವ್ಯಕ್ತವಾಗಿದೆ. (ದಿಗ್ವಿಜಯ ನ್ಯೂಸ್​)

    ರಾಮ್​ಚರಣ್​-ಉಪಾಸನಾ ದಂಪತಿಗೆ ಮುಕೇಶ್​ ಅಂಬಾನಿಯಿಂದ ಚಿನ್ನದ ತೊಟ್ಟಿಲು ಗಿಫ್ಟ್​: ಬೆಲೆ ಕೇಳಿದ್ರೆ ಬೆರಗಾಗ್ತೀರಾ!

    ಮೆದುಳು ಹೊರಬಂದು ಸಾಯುವ ಸ್ಥಿತಿಯಲ್ಲಿದ್ದ ಮಹಿಳೆಗೆ ಹಣ ಪಡೆಯದೆ ಚಿಕಿತ್ಸೆ: ಮಾನವೀಯತೆ ಮೆರೆದ ವೈದ್ಯರು

    ಹಾವು ಕಚ್ಚಿದ ಬಳಿಕ ಚಿಕಿತ್ಸೆ ಪಡೆದು ಮನೆಗೆ ಮರಳಿದ ವ್ಯಕ್ತಿಗೆ ಮರುದಿನವೇ ಕಾದಿತ್ತು ಬಿಗ್​ ಶಾಕ್​: ತಪ್ಪಲಿಲ್ಲ ಸಾವು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts