ಮೆದುಳು ಹೊರಬಂದು ಸಾಯುವ ಸ್ಥಿತಿಯಲ್ಲಿದ್ದ ಮಹಿಳೆಗೆ ಹಣ ಪಡೆಯದೆ ಚಿಕಿತ್ಸೆ: ಮಾನವೀಯತೆ ಮೆರೆದ ವೈದ್ಯರು

BNG Woman
Published on

ಬೆಂಗಳೂರು: ಅಪಘಾತಕ್ಕೀಡಾಗಿ ಸಾಯುವ ಹಂತದಲ್ಲಿದ್ದ ಬಡ ಮಹಿಳೆಯ ಬಳಿ ಹಣ ಪಡೆಯದೆ 24 ಗಂಟೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿ ಜೀವ ಉಳಿಸುವ ಮೂಲಕ ವೈದ್ಯರು ತಮ್ಮ ವೃತ್ತಿಪರತೆಯನ್ನು ಎತ್ತಿ ಹಿಡಿದಿದ್ದಲ್ಲದೆ, ಮಾನವೀಯತೆ ಮರೆದಿದ್ದಾರೆ.

ಈ ಘಟನೆ ಹೊಸಕೋಟೆಯ ಸಿಲಿಕಾನ್ ಸಿಟಿ ಆಸ್ವತ್ರೆಯಲ್ಲಿ ನಡೆದಿದೆ. ಹಿಂಡಿಗನಾಳ ಗ್ರಾಮದ ಪ್ರಿಯ ಎಂಬುವರು 2 ವರ್ಷದ ಹಿಂದಷ್ಟೇ ಮದುವೆ ಆಗಿದ್ದಾರೆ. ಹಿಂಡಿಗನಾಳ ಗ್ರಾಮದಲ್ಲಿ ಸಂಭವಿಸಿದ ಅಪಘಾತದಿಂದ ಮೆದುಳು ಹೊರಗಡೆ ಬಂದು ಸಾಯುವ ಸ್ಥಿತಿಯಲ್ಲಿ ಪ್ರಿಯಾ ನರಳಾಡುತ್ತಿದ್ದರು.

ಬೈಕ್​ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ತಲೆಯ ಮೆದುಳು ಹೊರಬಂದು ಗಂಭೀರವಾಗಿ ಗಾಯಗೊಂಡಿದ್ದರು. ಈ ವೇಳೆ ಆಸ್ವತ್ರೆಗೆ ಬಂದ ಪ್ರಿಯಾಗೆ ವೈದ್ಯರು ಮಾನವೀಯತೆ ಆಧಾರದ ಮೇಲೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಹಣ ಪಡೆಯದೆ 24 ಗಂಟೆಯಲ್ಲಿ ಚಿಕಿತ್ಸೆ ಮಾಡಿ ಜೀವ ಉಳಿಸಿದ್ದಾರೆ.

ವೈದ್ಯರ ಕಾರ್ಯ ವೈಖರಿಗೆ ಸಾರ್ವಜನಿಕರು ಹಾಗೂ ಕುಟುಂಬಸ್ಥರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದೀಗ ಯಶಸ್ವಿ ಶಸ್ತ್ರ ಚಿಕಿತ್ಸೆಯಿಂದ ಪ್ರಿಯಾ ಚೇತರಿಸಿಕೊಳ್ಳುತ್ತಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net