ಮಹಾರಾಷ್ಟ್ರದಲ್ಲಿ ಧಗ ಧಗನೆ ಹೊತ್ತಿ ಉರಿದ ಬಸ್​: 25 ಪ್ರಯಾಣಿಕರು ಸಜೀವ ದಹನ, ಚಾಲಕ ಪಾರು

Bus Tragedy
Published on

ಮುಂಬೈ: ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಬಸ್​ ಒಂದು ಅಗ್ನಿಗೆ ಆಹುತಿಯಾಗಿದ್ದು, 25 ಮಂದಿ ಸಜೀವ ದಹನಗೊಂಡಿರುವ ಭೀಕರ ಘಟನೆ ಮಹಾರಾಷ್ಟ್ರದ ಸಮೃದ್ಧಿ ಮಹಾಮಾರ್ಗ್ ಎಕ್ಸ್‌ಪ್ರೆಸ್‌ವೇನಲ್ಲಿ ನಡೆದಿದೆ.

ಬೆಂಕಿಯ ಕೆನ್ನಾಲಿಗೆ ಸುಟ್ಟು ಕರಕಲಾಗಿರುವ ಬಸ್​ ಯವತ್ಮಾಲ್​ನಿಂದ ಪುಣೆಗೆ ತೆರಳುತ್ತಿತ್ತು. ಈ ಘಟನೆ ತಡರಾತ್ರಿ 2 ಗಂಟೆಗೆ ಬುಲ್ಧಾನಾ ಜಿಲ್ಲೆಯಲ್ಲಿ ನಡೆದಿದೆ.

ಬುಲ್ಧಾನ ಜಿಲ್ಲೆಯ ಡೆಪ್ಯುಟಿ ಎಸ್​ಪಿ ಬಾಬುರಾವ್ ಮಹಾಮುನಿ ಮಾತನಾಡಿ, 25 ಶವಗಳನ್ನು ಬಸ್​ನಿಂದ ಹೊರತೆಗೆಯಲಾಗಿದೆ. ಬಸ್ಸಿನಲ್ಲಿ ಒಟ್ಟು 33 ಮಂದಿ ಪ್ರಯಾಣಿಸುತ್ತಿದ್ದರು. 6-8 ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಬುಲ್ಧಾನ ಸಿವಿಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಬಸ್ ಚಾಲಕ ಅವಘಡದಿಂದ ಪಾರಾಗಿ ಸುರಕ್ಷಿತವಾಗಿದ್ದಾರೆ. ಬಸ್‌ನಲ್ಲಿ ಬೆಂಕಿ ಹೊತ್ತಿಕೊಂಡು ಟೈರ್ ಸ್ಫೋಟಗೊಂಡು ಬಸ್ ಪಲ್ಟಿಯಾಗಿ ಹೊತ್ತಿ ಉರಿದಿದೆ ಎಂದು ಬುಲ್ಧಾನ ಎಸ್ಪಿ ಸುನೀಲ್ ಕಡಸಾನೆ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net