

ಹೈದರಾಬಾದ್: ಟಾಲಿವುಡ್ನ ಮೆಗಾ ಕುಟಂಬಕ್ಕೆ ಹೊಸ ಅತಿಥಿಯ ಆಗಮನವಾಗಿರುವುದು ನಿಮಗೆಲ್ಲ ಗೊತ್ತೇ ಇದೆ. ಸೂಪರ್ಸ್ಟಾರ್ ರಾಮ್ಚರಣ್ ಅವರ ಪತ್ನಿ ಉಪಾಸನಾ ಅವರು ಜೂನ್ 20ರ ಬೆಳಗ್ಗೆ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಮೆಗಾ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ನಿನ್ನೆಯಷ್ಟೇ ಮೆಗಾ ಕುಟುಂಬದಲ್ಲಿ ನಾಮಕರಣ ಸಮಾರಂಭ ಅದ್ಧೂರಿಯಾಗಿ ನೆರವೇರಿತು. ಇದರ ಬೆನ್ನಲ್ಲೇ ದೇಶದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ರಾಮಚರಣ್-ಉಪಾಸನ ದಂಪತಿಗೆ ನೀಡಿರುವ ದುಬಾರಿ ಉಡುಗೊರೆಯೊಂದು ಬೆಳಕಿಗೆ ಬಂದಿದೆ.
ರಾಮ್ಚರಣ್ ಮತ್ತು ಉಪಾಸನಾ ಅವರ 11 ವರ್ಷಗಳ ವೈವಾಹಿಕ ಜೀವನದಲ್ಲಿ ಮೊದಲ ಮಗು ಜನಿಸಿದೆ. ಉಪಾಸನಾ ಅವರು ಹೈದರಾಬಾದ್ನ ಜುಬಿಲಿ ಹಿಲ್ಸ್ನಲ್ಲಿರುವ ಅಪೊಲೋ ಆಸ್ಪತ್ರೆಯಲ್ಲಿ ಜೂ. 11ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದರು. ನಿನ್ನೆ ಮಗುವಿನ ನಾಮಕರಣ ಕಾರ್ಯಕ್ರಮ ನಡೆದಿದೆ.
ಮುದ್ದಾದ ಹೆಣ್ಣು ಮಗುವಿಗೆ ‘ಕ್ಲಿನ್ ಕಾರ ಕೊನಿಡೆಲಾ’ ಎಂದು ಹೆಸರಿಟ್ಟಿದ್ದಾರೆ. ಈ ಹೆಸರಿಡಲು ಕಾರಣವೇನೆಂದರೆ, ಆ ಹೆಸರನ್ನು ಲಲಿತಾ ಸಹಸ್ರನಾಮ ನಾಮದಿಂದ ತೆಗೆದುಕೊಳ್ಳಲಾಗಿದೆಯಂತೆ. ಕ್ಲಿನ್ ಕಾರ ಎಂಬುದು ಪ್ರಕೃತಿಯ ಸಾಕಾರವನ್ನು ಪ್ರತಿನಿಧಿಸುತ್ತದೆ ಎಂದು ಮೆಗಾ ಕುಟುಂಬ ಹೇಳಿದೆ.
ಇದೀಗ ತಾಜಾ ನ್ಯೂಸ್ ಒಂದು ಹೊರಬಿದ್ದಿದ್ದು, ರಾಮ್ಚರಣ್ ದಂಪತಿಗೆ ಮುಕೇಶ್ ಅಂಬಾನಿ ಅವರು ದುಬಾರಿ ಉಡುಗೊರೆ ನೀಡಿದ್ದಾರೆ. ಯಾವುದು ಆ ದುಬಾರಿ ಉಡುಗೊರೆ ಅಂದರೆ, ಚಿನ್ನದ ತೊಟ್ಟಿಲು. ಅದರ ಬೆಲೆ ಕೇಳಿದ್ರೆ ನಿಮ್ಮ ಹುಬ್ಬೇರೋದಂತು ಖಚಿತ. ಚಿನ್ನದ ತೊಟ್ಟಿಲಿನ ಮೌಲ್ಯ ಬರೋಬ್ಬರಿ 1 ಕೋಟಿ ರೂಪಾಯಿ.
ಅಂದಹಾಗೆ ರಾಮ್ಚರಣ್ ಮತ್ತು ಉಪಾಸನ 2012ರ ಜೂನ್ 14ರಂದು ಮದುವೆಯಾದರು. ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ರಾಮ್ಚರಣ್-ಉಪಾಸನಾ ದಂಪತಿ ಘೋಷಣೆ ಮಾಡಿದ್ದರು. (ಏಜೆನ್ಸೀಸ್)