More

    ಎಂದಾದ್ರೂ ಆ್ಯಪಲ್​ ಟೀ ಟ್ರೈ ಮಾಡಿದ್ದೀರಾ? ಈ ರೀತಿ ಮಾಡಿ ನಿಮ್ಮ ದೇಹದಲ್ಲಾಗುವ ಚಮತ್ಕಾರ ನೋಡಿ

    ಸೇಬು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಸೇಬನ್ನು ಹೇಗೆ ತಿಂದರೂ ನಿಮ್ಮ ಆರೋಗ್ಯಕ್ಕೆ ಒಳ್ಳೆಯದು. ಆದರೆ, ಅದರಲ್ಲಿರುವ ಬೀಜಗಳನ್ನು ಮಾತ್ರ ತಿನ್ನಲೇಬಾರದು. ಏಕೆಂದರೆ, ಬೀಜದಲ್ಲಿ ವಿಷದ ಅಂಶವಿರುತ್ತದೆ. ಸೇಬನ್ನು ಹಾಗೆಯೇ ತಿನ್ನುವುದು, ಸಲಾಡ್‌ಗಳಾಗಿ ಕತ್ತರಿಸಿ ಅಥವಾ ಜ್ಯೂಸ್‌ನಂತೆ ಕುಡಿಯುವುದು ಒಳ್ಳೆಯದು. ಇದು ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳನ್ನು ಸಹ ನೀಡುತ್ತದೆ.

    ಇನ್ನು ಆರೋಗ್ಯಕರ ದೇಹದ ತೂಕವನ್ನು ಕಾಪಾಡಿಕೊಳ್ಳಲು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನಗೊಳಿಸುವುದರಿಂದಿಡಿದು ಕೊಲೆಸ್ಟ್ರಾಲ್ ನಿಯಂತ್ರಿಸುವವರೆಗೂ ಸೇಬುಗಳು ಅನೇಕ ಪ್ರಯೋಜನಗಳನ್ನು ನೀಡುತ್ತವೆ. ಸೇಬುಗಳನ್ನು ಸರಿಯಾದ ರೀತಿಯಲ್ಲಿ ತಿನ್ನುವುದರಿಂದ ಅಧಿಕ ತೂಕವನ್ನು ಕಡಿಮೆ ಮಾಡಬಹುದು. ವಾಸ್ತವವಾಗಿ ಆಪಲ್ ಸೈಡರ್ ವಿನೆಗರ್​ನಿಂದ ತೂಕ ನಷ್ಟದ ಪ್ರಯೋಜನಗಳ ಬಗ್ಗೆ ಅನೇಕ ಜನರು ತಿಳಿದಿದ್ದಾರೆ. ಇನ್ನು ಸೇಬಿನಿಂದ ತಯಾರಿಸಿದ ಪಾನೀಯವು ಕೂಡ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಅದೇ ಆ್ಯಪಲ್ ಟೀ. ಇದನ್ನು ಮನೆಯಲ್ಲಿಯೇ ತಯಾರಿಸುವುದರಿಂದ ಕೊಬ್ಬು ಕರಗಿ ದೇಹದ ತೂಕ ಕಡಿಮೆಯಾಗುತ್ತದೆ.

    ಸೇಬಿನ ಸಿಪ್ಪೆಯಲ್ಲಿರುವ ಫೈಬರ್ ಮತ್ತು ಆ್ಯಂಟಿಆಕ್ಸಿಡೆಂಟ್ ಪಾಲಿಫಿನಾಲ್‌ಗಳು ಲಿಪೊಪ್ರೋಟೀನ್ ಮಟ್ಟವನ್ನು ಕಡಿಮೆ ಮಾಡಲು ಮತ್ತು ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ತೂಕ ನಷ್ಟಕ್ಕೆ ಕಾರಣವಾಗುತ್ತದೆ. ಸೇಬುಗಳಲ್ಲಿ ಕರಗುವ ಫೈಬರ್ ಅಧಿಕವಾಗಿದೆ. ಆ್ಯಪಲ್ ಟೀ ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದರಲ್ಲಿರುವ ಮ್ಯಾಲಿಕ್ ಆಮ್ಲ ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆಯನ್ನು ಬೆಂಬಲಿಸುತ್ತದೆ.

    ಆ್ಯಪಲ್ ಟೀ ಮಾಡಲು ಬೇಕಾದ ಪದಾರ್ಥಗಳು
    ಆ್ಯಪಲ್ ಟೀ ಮಾಡುವುದು ತುಂಬಾ ಸುಲಭ. ಆ್ಯಪಲ್ ಟೀ ಮಾಡಲು ನಿಮಗೆ ಬೇಕಾಗಿರುವುದು ಒಂದು ಸೇಬು, 3 ಕಪ್ ನೀರು, ಒಂದು ಚಮಚ ನಿಂಬೆ ರಸ, 2 ಟೀ ಬ್ಯಾಗ್‌ಗಳು, ದಾಲ್ಚಿನ್ನಿ ಅಥವಾ ಲವಂಗದ ಪುಡಿ.

    ಮಾಡುವ ವಿಧಾನ
    ಒಂದು ಪಾತ್ರೆಯಲ್ಲಿ ನೀರನ್ನು ಸುರಿಯಿರಿ ಮತ್ತು ಅದಕ್ಕೆ ನಿಂಬೆ ರಸವನ್ನು ಸೇರಿಸಿ. ನಂತರ ಒಲೆ ಹೊತ್ತಿಸಿ ಮತ್ತು ಚಹಾ ಬ್ಯಾಗ್​ಗಳನ್ನು ನೀರಿನಲ್ಲಿ ಮುಳುಗಿಸಿ. ಅದು ಕುದಿಯುವಾಗ, ಸೇಬನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಅದಕ್ಕೆ ಸೇರಿಸಿ. ಕಡಿಮೆ ಶಾಖದಲ್ಲಿ 5 ನಿಮಿಷಗಳ ಕಾಲ ಕುದಿಸಿ. ಅಂತಿಮವಾಗಿ ದಾಲ್ಚಿನ್ನಿ ಅಥವಾ ಲವಂಗ ಪುಡಿಯನ್ನು ಸೇರಿಸಿ. ಈಗ ಆ್ಯಪಲ್​ ಟೀ ರೆಡಿ. (ಏಜೆನ್ಸೀಸ್​)

    ಬ್ಯಾಕ್​ ಟು ಬ್ಯಾಕ್​ ಶತಕ; ವಿರಾಟ್​ ಕೊಹ್ಲಿ ದಾಖಲೆ ಸರಿಗಟ್ಟಿದ ಯಶಸ್ವಿ ಜೈಸ್ವಾಲ್

    ಭಾರತದಲ್ಲಿರುವ ನಕಲಿ ಫೇಸ್​ಬುಕ್​ ಖಾತೆಗಳ ಸಂಖ್ಯೆ ಆಘಾತಕಾರಿಯಾಗಿದೆ! ನಿಮ್ಗೂ ಈ ಮೆಸೇಜ್​ ಬರಬಹುದು ಎಚ್ಚರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts