More

    ಪ್ರತಿ ದಿನ ಮಸ್ಕರಾ ಹಚ್ಚುವುದರಿಂದ ಕಣ್ಣಿನ ಸೋಂಕು ಉಂಟಾಗಬಹುದೇ?  

    ಬೆಂಗಳೂರು: ಹೆಣ್ಣುಮಕ್ಕಳು ಕಣ್ಣುಗಳು, ಕಣ್ಣಿನ ರೆಪ್ಪೆಗಳು ಸುಂದರವಾಗಿ ಕಾಣಲೆಂದು ಮಸ್ಕರಾ ಹಚ್ಚಲು ಇಷ್ಟಪಡುತ್ತಾರೆ. ಆದರೆ ಇದನ್ನು ಸರಿಯಾಗಿ ಉಪಯೋಗಿಸದಿದ್ದರೆ ಕಣ್ಣಿನ ಸೋಂಕಿಗೆ ಕಾರಣವಾಗಬಹುದು ಎನ್ನುವ ಸಂಗತಿ ಬಹುತೇಕರಿಗೆ ತಿಳಿದಿಲ್ಲ.  ಸಾಮಾನ್ಯವಾಗಿ ಮಾರುಕಟ್ಟೆಗೆ ಬರುವ ಹೊಸ ಹೊಸ ಉತ್ಪನ್ನಗಳ ಮೇಲೆ ಎಲ್ಲರಿಗೂ ಒಂದು ಕಣ್ಣು ಇರುತ್ತದೆ. ಇದನ್ನು ಬಳಸಿ ತಾವು ಸುಂದರವಾಗಿ ಕಾಣಲು ಎಲ್ಲರೂ ಇಷ್ಟಪಡುತ್ತಾರೆ. ಈಗೀಗಂತೂ ಮಸ್ಕರಾ ಬಳಸುವುದು ಸಾಮಾನ್ಯವಾಗಿದೆ. ಕೆಲವು ಹುಡುಗಿಯರಿಗಂತೂ ಮಸ್ಕರಾ ಹಚ್ಚುವುದು ಅಭ್ಯಾಸವಾಗಿ ಬಿಟ್ಟಿರುತ್ತದೆ.      

    ಆದರೆ ಪ್ರತಿದಿನ ಮಸ್ಕರಾವನ್ನು ಹಚ್ಚುವುದರಿಂದ ಕಣ್ಣುಗಳಿಗೆ ಸಂಬಂಧಿಸಿದ ಸಮಸ್ಯೆ ಉಂಟಾಗುತ್ತದೆ. ಅದು ಕಣ್ಣುಗಳಿಗೆ ಎಷ್ಟು ಅಪಾಯಕಾರಿ ಎಂದು ಗೊತ್ತೇ?. ಹಾಗಾಗಿ ಇಲ್ಲಿ ಮಸ್ಕರಾವನ್ನು ಪ್ರತಿದಿನ ಹಚ್ಚುವುದರಿಂದ ಹೇಗೆ ಹಾನಿಯಾಗುತ್ತದೆ ಎಂದು ತಿಳಿಸಲಾಗಿದೆ.      

    ಮಸ್ಕರಾವನ್ನು ಹಚ್ಚುವುದರಿಂದ ರೆಪ್ಪೆಗೂದಲುಗಳು ಹೆಚ್ಚು ಸುಂದರವಾಗಿ ಕಾಣಲು ಪ್ರಾರಂಭಿಸುತ್ತವೆ. ಕಾಲೇಜು ಮತ್ತು ಕಚೇರಿಗೆ ಹೋಗುವ ಬಹುತೇಕ ಹುಡುಗಿಯರು ಮನೆಯಿಂದ ಹೊರಡುವ ಮೊದಲು ಪ್ರತಿದಿನ ಮಸ್ಕರಾ ಹಚ್ಚುತ್ತಾರೆ. ಆದರೆ ಪ್ರತಿದಿನ ಮಸ್ಕರಾ ಹಚ್ಚುವುದರಿಂದ ಕಣ್ಣುಗಳ ಮೇಲೆ ಪರಿಣಾಮ ಬೀರುತ್ತದೆ.  

    ಈ ಮೊದಲೇ ಹೇಳಿದ ಹಾಗೆ ಮಸ್ಕರಾವನ್ನು ಹಚ್ಚುವುದರಿಂದ ಕಣ್ಣಿನ ಸೋಂಕಿನ ಅಪಾಯ ಹೆಚ್ಚಬಹುದು. ವಿಶೇಷವಾಗಿ ನೀವು ಅದನ್ನು ತಪ್ಪಾಗಿ ಬಳಸಿದಾಗ. ಮಸ್ಕರಾ ಹಚ್ಚಿದ ನಂತರ ಕೆಲವರಿಗೆ ಕಣ್ಣಿನ ಅಲರ್ಜಿ ಉಂಟಾಗುತ್ತದೆ. ಇದು ತುರಿಕೆ, ಊತ ಮತ್ತು ನೀರಿನಂತಹ ಸಮಸ್ಯೆಗಳನ್ನು ಉಂಟುಮಾಡಬಹುದು.     

    ಕಣ್ಣುಗಳ ಮೇಲೆ ಮಸ್ಕರಾವನ್ನು ಹಚ್ಚುವುದರಿಂದ ಬ್ಯಾಕ್ಟೀರಿಯಾವು ನಿಮ್ಮ ಕಣ್ಣುಗಳನ್ನು ಪ್ರವೇಶಿಸುತ್ತದೆ. ಇದರಿಂದಾಗಿ ಕಣ್ಣುಗಳು ಒಣಗಲು ಮತ್ತು ಕೆಂಪಾಗಲು ಪ್ರಾರಂಭಿಸುತ್ತವೆ. ನೀವು ತುಂಬಾ ನಗುತ್ತಿದ್ದರೆ, ಅದು ನಿಮಗೆ ಜಿಗುಟು ಜಿಗುಟಾದ ಅಥವಾ ಭಾರವಾದ ಹಾಗೆ ಅನಿಸುತ್ತದೆ. ಆದ್ದರಿಂದ 3 ತಿಂಗಳಿಗಿಂತ ಹೆಚ್ಚು ಕಾಲ ಒಂದೇ ಮಸ್ಕರಾವನ್ನು ಬಳಸಬೇಡಿ.

    ಹಾಗೆಯೇ ನಿಮ್ಮ ಮಸ್ಕರಾವನ್ನು ಬೇರೆಯವರೊಂದಿಗೆ ಬದಲಾಯಿಸಬೇಡಿ. ಮಸ್ಕರಾವನ್ನು ಹಚ್ಚಿದ ನಂತರ, ಅದು ಒಣಗಲು ಬಿಡಿ ಮತ್ತು ನಿಮ್ಮ ಕಣ್ಣುಗಳನ್ನು ಮುಟ್ಟಬೇಡಿ. ಮಸ್ಕರಾವನ್ನು ಹಚ್ಚಿದ ನಂತರ ನಿಮ್ಮ ಕಣ್ಣುಗಳಿಗೆ ಸಮಸ್ಯೆಯಾದರೆ ಖಂಡಿತವಾಗಿಯೂ ಒಮ್ಮೆ ವೈದ್ಯರನ್ನು ಸಂಪರ್ಕಿಸಿ.  ಸರಿಯಾಗಿ ಮಸ್ಕಾರ ಬಳಸಲು ಬರದವರಿಗೂ ಕೆಲವು ಟಿಪ್ಸ್ ಗಳು ಮತ್ತು ವಿಡಿಯೋಗಳು ಲಭ್ಯವಿದೆ. ಎಕ್ಸ್ ಪರ್ಟ್ ಬ್ಯೂಟಿಷನ್ ಗಳಿಂದ ಸಹ  ನೀವು ಈ ಬಗ್ಗೆ ಐಡಿಯಾ ಪಡೆಯಬಹುದು.  

    https://www.vijayavani.net/total-solar-eclipse-google-celebrates-with-special-animation

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts