More

    ಭಾರತದಲ್ಲಿರುವ ನಕಲಿ ಫೇಸ್​ಬುಕ್​ ಖಾತೆಗಳ ಸಂಖ್ಯೆ ಆಘಾತಕಾರಿಯಾಗಿದೆ! ನಿಮ್ಗೂ ಈ ಮೆಸೇಜ್​ ಬರಬಹುದು ಎಚ್ಚರ

    ತಿರುವನಂತಪುರಂ: ಫೇಸ್​ಬುಕ್​ನಲ್ಲಿ ನಕಲಿ ಖಾತೆಗಳಿರುವ ಸಂಗತಿ ಹೊಸದೇನಲ್ಲ. ಸಾಕಷ್ಟು ಮಂದಿ ಮುಖವಾಡ ಧರಿಸಿ ವಂಚನೆ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ. ಇದೀಗ ಬಂದಿರುವ ಆಘಾತಕಾರಿ ಮಾಹಿತಿ ಪ್ರಕಾರ ಭಾರತದಲ್ಲಿ ಸುಮಾರು 20 ಕೋಟಿ ನಕಲಿ ಖಾತೆಗಳಿವೆ. ವಿಶ್ವದಾದ್ಯಂತ 93 ಕೋಟಿ ರೂ. ನಕಲಿ ಖಾತೆಗಳನ್ನು ಬ್ಯಾನ್​ ಮಾಡಲಾಗಿದೆ ಎಂದು ಫೇಸ್​​ಬುಕ್​ ತಿಳಿಸಿದೆ.

    ಈ ನಕಲಿ ಖಾತೆಗಳನ್ನು ಸುಲಿಗೆ ಮಾಡಲು, ಮಹಿಳೆಯರ ವಿರುದ್ಧ ಅಪಪ್ರಚಾರ ಮಾಡಲು ಮತ್ತು ಚುನಾವಣಾ ಪ್ರಚಾರಕ್ಕೆ ಬಳಸಲಾಗುತ್ತದೆ. ಈ ಖಾತೆಗಳನ್ನು ಹೆಚ್ಚಾಗಿ ಹೆಣ್ಣು ಮಕ್ಕಳ ಹೆಸರಿನಲ್ಲಿ ಕಾರ್ಯಾಚರಣೆ ಮಾಡಲಾಡಲಾಗುತ್ತದೆ.

    ಸೈಬರ್​​​​ ಪೊಲೀಸರ ಪ್ರಕಾರ, ವಿವಿಧ ಐಪಿ ವಿಳಾಸಗಳ ಮೂಲಕ ಏಕಕಾಲದಲ್ಲಿ 50 ನಕಲಿ ಖಾತೆಗಳನ್ನು ರಚಿಸಬಹುದು. ಒಂದು ವಾರದ ಹಿಂದೆ ಕೇರಳದ ತಿರುವನಂತಪುರಂನ ಪೊಂಗುಮ್ಮುಡುವಿನ ನಿವೃತ್ತ ಬ್ಯಾಂಕ್ ಮ್ಯಾನೇಜರ್ ಹೆಸರಿನಲ್ಲಿ ಸಂದೇಶವೊಂದು ಹರಿದಾಡಿತ್ತು. 18,000 ರೂಪಾಯಿಗೆ ಬೇಡಿಕೆ ಇಡಲಾಗಿತ್ತು. ಫೇಸ್‌ಬುಕ್‌ನಲ್ಲಿರುವ ಫೋಟೋವನ್ನು ಬಳಸಿಕೊಂಡು ಮತ್ತೊಂದು ಸಂಖ್ಯೆಯಿಂದ ವಾಟ್ಸ್​ಆ್ಯಪ್​ ಸಂದೇಶ ಕಳುಹಿಸುವ ಮೂಲಕ ಮೋಸ ಮಾಡಲು ಪ್ರಯತ್ನಿಸಲಾಗಿತ್ತು. ಅನುಮಾನಗೊಂಡ ಸ್ನೇಹಿತರು ನಿವೃತ್ತ ಮ್ಯಾನೇಜರ್​ ಗಮನಕ್ಕೆ ತಂದ ಬಳಿಕ ಸೈಬರ್ ಪೊಲೀಸರಿಗೆ ದೂರು ನೀಡಲಾಗಿತ್ತು. ಟ್ರೂಕಾಲರ್‌ನಲ್ಲಿ ರಾಜಸ್ಥಾನ ಮೂಲದವರ ಹೆಸರು ಕಾಣಿಸಿಕೊಂಡಿದೆ.

    ಸಂದೇಶವು ಸ್ನೇಹಿತರ ಖಾತೆಯಿಂದಲೇ ಬಂದಂತೆಯೇ ಗೋಚರಿಸುತ್ತದೆ. ಒಂದು ವೇಳೆ ಪ್ರತಿಕ್ರಿಯಿಸದಿದ್ದರೆ, ಇನ್ನೊಬ್ಬ ಪರಿಚಿತ ಸ್ನೇಹಿತರ ಪ್ರೊಫೈಲ್‌ನಿಂದ ಮತ್ತೊಂದು ಸಂದೇಶ ಬರುತ್ತದೆ. ಸ್ನೇಹಿತರ ಸಂದೇಶವನ್ನು ಸ್ವೀಕರಿಸಿದ ನಂತರ ಮತ್ತೆ ಯಾವುದೇ ಸಂದೇಶ ಕಳುಹಿಸುವುದಿಲ್ಲ. ಇದರಿಂದಾಗಿ ಸಂದೇಶವು ನಿಜವಾದ ಸ್ನೇಹಿತನಿಂದ ಬಂದಿದೆ ಎಂದು ವ್ಯಕ್ತಿಯು ನಂಬುತ್ತಾನೆ ಮತ್ತು ಹಣ ಕೊಟ್ಟು ಯಾಮಾರುತ್ತಾನೆ.

    ಪಾಸ್​ವರ್ಡ್​ಗಳೊಂದಿಗೆ ಜಾಗರೂಕರಾಗಿರಿ
    * ಖಾತೆಗಳನ್ನು ಹ್ಯಾಕ್ ಮಾಡುವುದನ್ನು ತಡೆಯಲು ಪಾಸ್‌ವರ್ಡ್‌ಗಳು ಬಲವಾಗಿರಬೇಕು.
    * ಹುಟ್ಟಿದ ದಿನಾಂಕ, ವಾಹನ ಸಂಖ್ಯೆ, ವಸತಿ ಸಂಖ್ಯೆಯನ್ನು ಪಾಸ್‌ವರ್ಡ್ ಆಗಿ ಬಳಸಬೇಡಿ.
    * ಖಾತೆಯ ‘ನನ್ನ ಕುರಿತು’ ಪುಟದಲ್ಲಿನ ಮಾಹಿತಿಯನ್ನು ಪರಿಶೀಲಿಸಿ ಮತ್ತು ಮಾಹಿತಿಯು ಅಪೂರ್ಣವಾಗಿದ್ದರೆ ತಕ್ಷಣವೇ ಖಾತೆಯನ್ನು ನಿರ್ಬಂಧಿಸಿ ಮತ್ತು ವರದಿ ಮಾಡಿ.
    * ಸ್ನೇಹಿತರ ಪಟ್ಟಿಯಲ್ಲಿರುವ ಹೆಚ್ಚಿನ ಜನರು ಪರಿಚಯವಿಲ್ಲದವರಾಗಿದ್ದರೆ, ಖಾತೆಯು ನಕಲಿಯಾಗಿರಬಹುದು
    * ಸೈಬರ್ ಸಹಾಯ ಸಂಖ್ಯೆ-1930ಕ್ಕೆ ಕರೆಮಾಡಿ

    ನಾಯಕತ್ವ ಬಿಕ್ಕಟ್ಟು; ಕಾಂಗ್ರೆಸ್​ಗೆ​ ‘ಗುಡ್​ ಬೈ’ ಹೇಳಲಿದ್ದಾರಾ ಮಾಜಿ ಸಿಎಂ ಕಮಲ್​ನಾಥ್​

    ಎಚ್ಚೆಸ್ಸಾರ್ಪಿ ನೋಂದಣಿ ಹೆಸರಲ್ಲಿ ಸೈಬರ್ ಧೋಖಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts