More

    ಎಚ್ಚೆಸ್ಸಾರ್ಪಿ ನೋಂದಣಿ ಹೆಸರಲ್ಲಿ ಸೈಬರ್ ಧೋಖಾ

    ಬೆಂಗಳೂರು: ಹಳೇ ವಾಹನಗಳಿಗೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್ (ಎಚ್​ಎಸ್​ಆರ್​ಪಿ) ಅಳವಡಿಕೆಗೆ ವಿಧಿಸಲಾಗಿದ್ದ ಗಡುವನ್ನು ಮೇ 31ರವರೆಗೆ ವಿಸ್ತರಿಸಿ ಸರ್ಕಾರ ಆದೇಶ ಹೊರಡಿಸಿರುವ ಬೆನ್ನಲ್ಲೇ, ನಕಲಿ ಕ್ಯೂಆರ್ ಕೋಡ್ ಲಿಂಕ್​ಗಳನ್ನು ಆನ್​ಲೈನ್​ನಲ್ಲಿ ಕಳುಹಿಸಿ ವಾಹನ ಮಾಲೀಕರಿಗೆ ವಂಚಿಸಲು ಯತ್ನಿಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಈ ಬಗ್ಗೆ ಎಚ್ಚರಿಕೆ ವಹಿಸುವಂತೆ ಸಾರ್ವಜನಿಕರಿಗೆ ಪೊಲೀಸರು ಸಲಹೆ ನೀಡಿದ್ದಾರೆ.

    ರಕ್ಷಿತ್ ಪಾಂಡೆ ಎಂಬುವರು ತಮ್ಮ ಎಕ್ಸ್ ಖಾತೆ ಮೂಲಕ ನಗರ ಪೊಲೀಸರಿಗೆ ದೂರು ನೀಡಿದ್ದಾರೆ. ನಕಲಿ ಕ್ಯೂ ಆರ್ ಕೋಡ್ ಸಮೇತ ಪೊಲೀಸರಿಗೆ ವಿವರ ನೀಡಿದ್ದಾರೆ. ಗಡುವು ಸಮೀಪಿಸಿದ್ದರಿಂದ ಎಚ್​ಎಸ್​ಆರ್​ಪಿ ಅಳವಡಿಕೆಗೆ ಜನರು ಮುಗಿಬಿದ್ದಿದ್ದರು. ಪರಿಣಾಮ ತಾಂತ್ರಿಕ ಸಮಸ್ಯೆಯಿಂದಾಗಿ ಶುಲ್ಕ ಪಾವತಿ ನಂತರದ ಪ್ರಕ್ರಿಯೆ ಕೈಕೊಡುತ್ತಿವೆ. ದಂಡದ ಎಚ್ಚರಿಕೆ ಕೊಟ್ಟ ಹಿನ್ನೆಲೆಯಲ್ಲಿ ಬುಕ್ಕಿಂಗ್ ಹೆಚ್ಚಾದ್ದರಿಂದ ಸರ್ವರ್ ಸಮಸ್ಯೆ ಕಾಣಿಸಿಕೊಂಡಿದೆ. ಮಾಲೀಕರು ಈ ಪೋರ್ಟಲ್​ಗಳ ಮೂಲಕ ನೋಂದಣಿಗೆ ಪ್ರಯತ್ನಿಸಿದಾಗ ಹಲವರಿಗೆ ಕಂಪನಿ ಹೆಸರು, ವಾಹನದ ಮಾದರಿ ಇನ್ನಿತರ ವಿವರಗಳು ಹೊಂದಾಣಿಕೆಯಾಗುತ್ತಿಲ್ಲ. ಮತ್ತೆ ಕೆಲವರು ವಾಹನದ ನೋಂದಣಿ ಸಂಖ್ಯೆ, ಇಂಜಿನ್ ಸಂಖ್ಯೆ, ಚಾರ್ಸಿ ಸಂಖ್ಯೆಯ ವಿವರ ಹಾಕಿದರೆ ಅಂತಹ ವಾಹನವೇ ಇಲ್ಲವೆಂದು ಪೋರ್ಟಲ್​ಗಳು ತೋರಿಸುತ್ತಿವೆ. ಹಲವು ವಾಹನಗಳ ಮಾಲೀಕರ ಮತ್ತು ಕಂಪನಿಯ ಹೆಸರು ಕೂಡ ಬದಲಾಗುತ್ತಿದೆಯಂತೆ. ಹೀಗಾಗಿ ಕೆಲವರು ನೋಂದಣಿಗೆ ಪರದಾಡುತ್ತಿದ್ದಾರೆ.

    ಸಮಸ್ಯೆಯಾದರೆ ಠಾಣೆಗೆ ದೂರು ನೀಡಿ : ಎಚ್​ಎಸ್​ಆರ್​ಪಿ ಸಂಬಂಧ ಸೋಷಿಯಲ್ ಮೀಡಿಯಾದಲ್ಲಿ ಫೇಕ್ ಲಿಂಕ್​ಗಳು ಶೇರ್ ಆಗುತ್ತಿವೆ. ಜತೆಗೆ ನಕಲಿ ವೆಬ್​ಸೈಟ್​ಗಳ ಕಾರ್ಯ ನಿರ್ವಹಿಸುತ್ತಿವೆ. ಇದರ ಬಗ್ಗೆ ಸ್ವಲ್ಪ ಎಚ್ಚರದಿಂದಿರಿ. ಅಧಿಕೃತ ವೆಬ್​ಸೈಟ್ ಮೂಲಕ ಮಾತ್ರ ನೀವು ಅಪ್ಲೈ ಮಾಡಿ. ಆರ್​ಟಿಓ ಸೈಟ್​ನಿಂದ ಜನರೇಟ್ ಆಗಿಲ್ಲದಿದ್ದರೆ ಯಾವುದೇ ಕಾರಣಕ್ಕೂ ಹಣ ಹಾಕಬೇಡಿ. ಒಮ್ಮೆ ವೆಬ್​ಸೈಟ್ ಸರಿಯಾಗಿದೆಯೇ ಎಂದು ನೋಡಿಕೊಂಡು ನಂತರ ಹಣ ಪಾವತಿಸಿ. ವಂಚನೆಗೆ ಒಳಗಾದಲ್ಲಿ ಕೂಡಲೇ ಸೈಬರ್ ಕ್ರೖೆಂ ಠಾಣೆಗೆ ದೂರು ನೀಡಿ ಎಂದು ದಕ್ಷಿಣ ವಿಭಾಗದ ಸಂಚಾರ ಡಿಸಿಪಿ ಶಿವಪ್ರಕಾಶ್ ದೇವರಾಜ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

    ಅಧಿಕೃತ ವೆಬ್​ಸೈಟ್​ನಿಂದ ಮಾತ್ರ ಎಚ್​ಎಸ್​ಆರ್​ಪಿಗೆ ನೋಂದಣಿ ಮಾಡಿಕೊಳ್ಳಿ ಅದು ಬ್ರೌಸರ್ ಮೇಲೆ ಲಾಕ್ ಸಿಂಬಲ್ ಹೊಂದಿರುತ್ತದೆ ಲಾಕ್ ಸಿಂಬಲ್ ಇಲ್ಲವಾದರೆ ಅದು ಸುರಕ್ಷಿತವಲ್ಲದ ವೆಬ್​ಸೈಟ್ ಆಗಿರುತ್ತದೆ. ಹೀಗಾಗಿ ಜನರು ಬಹಳ ಎಚ್ಚರವಹಿಸಬೇಕು. ಇಲ್ಲವಾದರೆ ಸೈಬರ್ ಖದೀಮರು ನಿಮಗೆ ವಂಚಿಸುತ್ತಾರೆ. ಈ ಬಗ್ಗೆ ಪೊಲೀಸರು ಜಾಗೃತಿ ಮೂಡಿಸುವಂತಹ ಕೆಲಸ ಮಾಡುತ್ತಿದ್ದಾರೆ.

    | ಶಿವಪ್ರಕಾಶ್ ದೇವರಾಜ್ ಬೆಂ.ದಕ್ಷಿಣ ವಿಭಾಗದ ಸಂಚಾರ ಡಿಸಿಪಿ

    Transport.karnataka.gov.in ಅಥವಾ www.siam.in ಭೇಟಿ ಕೊಟ್ಟು ಬುಕ್ ಎಚ್​ಎಸ್​ಆರ್​ಪಿ ಮೇಲೆ ಕ್ಲಿಕ್ ಮಾಡಬೇಕು. ನಿಮ್ಮ ವಾಹನ ತಯಾರಕರನ್ನು ಆಯ್ಕೆ ಮಾಡಿ ವಾಹನದ ಮೂಲ ವಿವರಗಳನ್ನು ಭರ್ತಿ ಮಾಡಬೇಕು. ನಂಬರ್ ಪ್ಲೇಟ್ ಅಳವಡಿಕೆಗೆ ಸ್ಥಳ ಆಯ್ಕೆ ಮಾಡಿಕೊಂಡರೆ ಅವರೇ ಬಂದು ಫಿಟ್ ಮಾಡುತ್ತಾರೆ.

    ಅಕ್ಬರ್‌-ಸೀತಾ ಲಿವಿಂಗ್​ ಟುಗೆದರ್​: ಕೋರ್ಟ್​ ಮೆಟ್ಟಿಲೇರಿದ ವಿಶ್ವ ಹಿಂದೂ ಪರಿಷತ್‌! ನ್ಯಾಯಾಲಯ ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts