More

    ಶಕ್ತಿ,ಸಿದ್ಧಾಂತವನ್ನಾಗಿ ಬಸವಣ್ಣನನ್ನು ಕಾಣಬೇಕು, ಅರವಿಂದ ಜತ್ತಿ

    ಚಿತ್ರದುರ್ಗ: ಬಸವಣ್ಣನವರ ಕುರಿತು ನಾವೆಲ್ಲರೂ ಮಾತನಾಡುತ್ತೇವೆ ಹೊರತು ಅವರ ತತ್ತ್ವ,ಸಿದ್ಧಾಂತಗಳನ್ನು ಅರ್ಥ ಮಾಡಿಕೊಳ್ಳುತ್ತಿಲ್ಲವೆಂದು ಬೆಂಗಳೂರು ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಹೇಳಿದರು. ನಗರದ ಶ್ರೀಮುರುಘರಾಜೇಂದ್ರ ಬೃಹನ್ಮಠದಲ್ಲಿ ಶ್ರೀ ಬಸವೇಶ್ವರ ಜಯಂತಿ ಅಂಗವಾಗಿ ಬುಧವಾರ ಏರ್ಪಡಿಸಿದ್ದ ಚಿಂತನಗೋಷ್ಠಿಯಲ್ಲಿ ಮಾತನಾಡಿದ ಅವರು,ನಿಜಾಚರಣೆ ಬದುಕು ನಮ್ಮದಾಗಬೇಕು.
    ನಾವು ಎಷ್ಟರಮಟ್ಟಿಗೆ ಶುದ್ಧವಾಗಿದ್ದೇವೆ ಎಂದು ಪರಾಮರ್ಶಿಸಿಕೊಳ್ಳಬೇಕು. ನಮ್ಮೊಳಗೆ ಸಲ್ಲದ ವಿಷಯಗಳನ್ನು ತುಂಬಿಕೊಂಡು ನಮ್ಮನ್ನು ನಾವು ಮರೆಯಬಾರದು. ಬಸ ವಣ್ಣನವರ ಜಗದಗಲ,ಮುಗಿಲಗಲ,ಮಿಗೆಯಗಲ ಎಂಬ ಮಾತುಗಳನ್ನು ಅರ್ಥೈಸಿಕೊಳ್ಳಬೇಕು. ಬಸವಣ್ಣನೆಂದರೆ ಎಚ್ಚರಿಕೆ,ಅವರನ್ನು ವ್ಯಕ್ತಿಯಾಗಿ ನೋಡದೆ,ಶಕ್ತಿ,ಸಿದ್ಧಾಂತವಾಗಿ ಕಾಣಬೇಕಿದೆ ಎಂದರು.
    ಮುರುಘಾಮಠದ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಿ,ಅರವಿಂದ ಜತ್ತಿ ಅವರು ಎಲೆ ಮರೆಕಾಯಾಗಿ ಬಸವ ಸಿದ್ಧಾಂತಕ್ಕೆ ಹೊಸ ರೂಪುರೇಷೆ ತಂದುಕೊಟ್ಟವರು. 34 ಭಾಷೆಗಳಲ್ಲಿ ಬಸವಾದಿ ಪ್ರಮಥರ ವಚನಗಳನ್ನು ಮುದ್ರಿಸಿ ಜಗತ್ತಿಗೆ ಪರಿಚಯಿಸಿದ್ದಾರೆ ಎಂದರು.
    ರಾವಂದೂರು ಖಾಸಾ ಮುರುಘಾಮಠದ ಶ್ರೀ ಮೋಕ್ಷಪತಿ ಸ್ವಾಮೀಜಿ ಮಾತನಾಡಿದರು.ಡಾ.ಬಸವಪ್ರಭು ಸ್ವಾಮೀಜಿ,ಶ್ರೀ ಬಸವಮೂರ್ತಿ ಮಾದಾರಚನ್ನಯ್ಯ ಸ್ವಾಮೀಜಿ,ಶ್ರೀ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ,ಶ್ರೀ ಗುರುಬಸವ ಸ್ವಾಮೀಜಿ,ಶ್ರೀ ತಿಪ್ಪೇರುದ್ರ ಸ್ವಾ ಮೀಜಿ,ಶರಣೆ ಸತ್ಯಕ್ಕನವರು,ಶ್ರೀ ಬಸವನಾಗೀದೇವ ಸ್ವಾಮೀಜಿ,ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ,ಶರಣೆ ಜಯದೇವಿ ತಾಯಿ, ಶರಣೆ ಚಿನ್ಮಯಿತಾಯಿ,ಶ್ರೀ ಪೂರ್ಣಾನಂದ ಸ್ವಾಮೀಜಿ ಇದ್ದರು. ಗಾನಯೋಗಿ ಕಲಾ ತಂಡದವರು ವಚನ ಗಾಯನ ಮಾಡಿದರು. ತೋಟಪ್ಪ ಉತ್ತಂ ಗಿ,ಉಮೇಶ್ ಪತ್ತಾರ್ ಹಾಗು ಸಂಗಡಿಗರು ವಚನ ಪ್ರಾರ್ಥನೆ ಮಾಡಿದರು. ಡಾ.ಸ್ನೇಹಲತಾ ಸ್ವಾಗತಿಸಿದರು. ಗೀತಾರುದ್ರೇಶ್ ನಿರೂಪಿಸಿ ದರು.
    (ಸಿಟಿಡಿ 8 ಮುರುಘಾ ಬಸವ)
    ಚಿತ್ರದುರ್ಗ ಮುರುಘಾಮಠದಲ್ಲಿ ಬುಧವಾರ ಏರ್ಪಡಿಸಿದ್ದ ಚಿಂತನಾಗೋಷ್ಠಿಯಲ್ಲಿ ಬಸವೇಶ್ವರರ ಭಾವಚಿತ್ರಕ್ಕೆ ಬೆಂಗಳೂರು ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ,ಡಾ.ಬಸವಕುಮಾರ ಸ್ವಾಮೀಜಿ,ಶ್ರೀ ಮೋಕ್ಷಪತಿ ಸ್ವಾಮೀಜಿ,ಡಾ.ಬಸವಪ್ರಭು ಸ್ವಾಮೀಜಿ,ಶ್ರೀ ಬಸವಮೂರ್ತಿ ಮಾದಾ ರಚನ್ನಯ್ಯ ಸ್ವಾಮೀಜಿ,ಶರಣೆ ಸತ್ಯಕ್ಕ ಮತ್ತಿತರರು ಪುಷ್ಪ ನಮನ ಸಲ್ಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts