ಬಸವಣ್ಣನನ್ನು ಕಾಯಕತತ್ವದ ಗುರು ಎಂದು ಘೋಷಿಸಿ

Declare Basavanna as the Guru of Kayakatatva
ಬಸವಣ್ಣನ ಐಕ್ಯ ಸ್ಥಳದ ಲಿಂಗದ ಮುಂದೆ ವಚನ ಪಠಣ ಮಾಡಿದ ಬಸವಜಯಮೃತುಂಜಯ ಸ್ವಾಮೀಜಿ.
Published on

ಕೂಡಲಸಂಗಮ: ಬಸವಣ್ಣನವರನ್ನು ಭಾರತದ ಕಾಯಕತತ್ವದ ಗುರು ಎಂದು ಕೇಂದ್ರ ಸರ್ಕಾರ ಘೋಷಿಸಬೇಕೆಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಕೂಡಲಸಂಗಮ ಬಸವಣ್ಣನ ಐಕ್ಯ ಮಂಟಪದಲ್ಲಿ ಶುಕ್ರವಾರ ವಚನ ಪಠಣ ಮಾಡುವ ಮೂಲಕ ಬಸವ ಜಯಂತಿ ಕಾರ್ಯಕ್ರಮ ಆಚರಿಸಿ ಅವರು ಮಾತನಾಡಿದರು.

ಸಂವಿಧಾನದ ಮೂಲಕ ಅಂಬೇಡ್ಕರ್ ಅವರು ಸ್ವಾತಂತ್ರೃ ನಂತರದಲ್ಲಿ ಸಮಾನತೆಯ ಬೀಜ ಬಿತ್ತಿದರು. ಸ್ವಾತಂತ್ರ ಪೂರ್ವದಲ್ಲಿ ಸಮಾನತೆ, ಕಾಯಕ ತತ್ವ ಅನುಷ್ಠಾನಗೊಳಿಸಿದವರು ಬಸವಣ್ಣ. ಈಗಾಗಲೇ ಪ್ರಧಾನಮಂತ್ರಿಗಳು ಬಸವಣ್ಣನವರ ಭಾವಚಿತ್ರ, ಅನುಭವ ಮಂಟಪ ಪರಿಕಲ್ಪನೆಯನ್ನು ಸಂಸತ್ತಿನಲ್ಲಿ ಅಳವಡಿಸಿದ್ದಾರೆ. ಕರ್ನಾಟಕ ಸರ್ಕಾರ ಶಾಸನಬದ್ಧವಾಗಿ ಕರ್ನಾಟಕ ಸಾಂಸ್ಕೃತಿಕ ನಾಯಕ ಎಂದು ಬಸವಣ್ಣನವರನ್ನು ಘೋಷಿಸಿದೆ. ಕಾಯಕ ತತ್ವದ ಅಗ್ರಗಣ್ಯ ಗುರು ಬಸವಣ್ಣ ಆಗಿರುವುದರಿಂದ ಭಾರತದ ಕಾಯಕ ತತ್ವದ ಗುರು ಎಂದು ಕೇಂದ್ರ ಸರ್ಕಾರ ಘೋಷಿಸಬೇಕೆಂದು ಮನವಿ ಮಾಡಿದರು.
ಬಸವಣ್ಣನ ಐಕ್ಯ ಸ್ಥಳದ ಲಿಂಗದ ಮುಂದೆ ಬಸವಣ್ಣನ 20ಕ್ಕೂ ಅಧಿಕ ವಚನಗಳನ್ನು ಶ್ರೀಗಳು ಪಠಣ ಮಾಡಿದರು. ಭಕ್ತರು ಶ್ರೀಗಳೊಂದಿಗೆ ವಚನ ಪಠಿಸಿದರು.

ಬಸವೇಶ್ವರ ವೃತ್ತದ ಬಸವಣ್ಣನ ಪುತ್ಥಳಿಗೆ ಶ್ರೀಗಳು ಮಾಲಾರ್ಪಣೆ ಮಾಡಿದರು. ನಂತರ ಲಿಂಗಾಯತ ಪಂಚಮಸಾಲಿ ಪೀಠದಲ್ಲಿ ಬಸವಣ್ಣನ ಜೀವನ, ಸಾಧನೆ, ವಚನ ಸಾಹಿತ್ಯದ ಕುರಿತು ಭಕ್ತರಿಗೆ ಪ್ರವಚನ ನೀಡಿದರು.

ಕೂಡಲಸಂಗಮ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಶೇಖರಗೌಡ ಗೌಡರ, ನಾಗೇಶ, ಸಂಗಮೇಶ ಚೌಧರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net