More

    ವೈದ್ಯರ ನಿರ್ಲಕ್ಷಕ್ಕೆ ಬಾಲಕ ಬಲಿ ಆರೋಪ

    ಹೊಸಪೇಟೆ: ವೈದ್ಯರ ನಿರ್ಲಕ್ಷ್ಯದಿಂದ ಬಾಲಕ ಸಾವನಪ್ಪಿದ್ದಾನೆ ಎಂದು ಆರೋಪಿಸಿ ನಗರದ ಖಾಸಗಿ ಆಸ್ಪತ್ರೆ ಎದುರು ಶವವಿಟ್ಟು ಪ್ರತಿಭಟನೆ ನಡೆಸಿದ ಘಟನೆ ನಗರದಲ್ಲಿ ಬುಧವಾರ ನಡೆದಿದೆ.

    ತಾಲೂಕಿನ ತಾಳೆ ಬಸಾಪುರ ತಾಂಡದ ನಿವಾಸಿ ತುಳಜಾನಾಯ್ಕ್ ಹಾಗೂ ವಿಜಿಬಾಯಿ ದಂಪತಿಯ ಪುತ್ರ ಗೌತಮ್ (9) ಎಂಬ ಮೃತಪಟ್ಟ ಬಾಲಕ. ಶಂಕಿತ ಡೆಂಘ್ಯೀ ಜ್ವರದಿಂದ ಬಳಲುತ್ತಿದ್ದನು. ಪಾಲಕರು ನಗರದ ಅಮರಾವತಿಯ ಶರಣಂ ಆಸ್ಪತ್ರೆಗೆ ಮಂಗಳವಾರ ಮಧ್ಯಾಹ್ನ ಬಾಲಕನ್ನು ದಾಖಲು ಮಾಡಿದ್ದಾರೆ. ಬಾಲಕನನ್ನು ದಾಖಲಿಸಿಕೊಂಡು ವೈದ್ಯರು ಚಿಕಿತ್ಸೆ ನೀಡುತ್ತಿದ್ದರು.

    ಬುಧವಾರ ಏಕಾಏಕಿ, ಬಾಲಕನ ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಕೂಡಲೇ ಡಿಸ್ಚಾರ್ಜ್ ಮಾಡಿ, ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿ ವಿಮ್ಸ್ ಗೆ ಕರೆದ್ಯೊಯ್ಯಲು ವೈದ್ಯರು ಸೂಚನೆ ನೀಡಿದ್ದಾರೆ. ವೈದ್ಯರ ಸಲಹೆಯಂತೆ ಪಾಲಕರು ಅಂಬ್ಯಲೆನ್ಸ್ ಕರೆದೊಯ್ಯು ಮಾರ್ಗ ಮಧ್ಯದಲ್ಲಿ ಬಾಲಕ ಸಾವನಪ್ಪಿದ್ದಾನೆ. ಪುನಃ ನಗರದ ಆಸ್ಪತ್ರೆಗೆ ದಾವಿಸಿ ಬಂದ ಮೃತ ಬಾಲಕನ ಪಾಲಕರು, ಶವವಿಟ್ಟು ಪ್ರತಿಭಟನೆ ನಡೆಸಿದ್ದಾರೆ.

    ಈ ಹಿಂದೆ ಕೂಡ ಆಸ್ಪತ್ರೆಯಲ್ಲಿ ಕಳೆದ ಸೆಪ್ಟೆಂಬರ್ 5ರಂದು ತಾಲೂಕಿನ ಕಲ್ಲಹಳ್ಳಿಯ ಸುನೀಲ್ ಎಂಬ ಯುವಕನ ಸಾವಾಗಿತ್ತು. ಅದಕ್ಕೂ ಮುನ್ಮ ಮಹಿಳೆಯ ಸಾವು ಕೂಡ ಆಗಿದೆ. ಬುಧವಾರ ಬಾಲಕ ಗೌತಮ್ ವೈದ್ಯರ ನಿರ್ಲಕ್ಷ್ಯ ದಿಂದ ಮಗು ಸಾವಾಗಿದೆ ಎಂದು ಆರೋಪಿಸಲಾಗಿದೆ.

    ಸ್ಥಳಕ್ಕೆ ಶಾಸಕ ಎಚ್.ಆರ್.ಗವಿಯಪ್ಪ, ಡಿಎಚ್ ಒ ಶಂಕರ್ ನಾಯ್ಕ, ಡಿವೈಎಸ್ಪಿ ಶರಣ ಬಸವೇಶ್ವರ, ಡಿಎಚ್ಒ ಡಾ.ಭಾಸ್ಕರ್ ಭೇಟಿ ನೀಡಿ, ಪೋಷಕರಿಂದ ಮಾಹಿತಿ ಪಡೆದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು, ಶವವನ್ನು ಅಂಬ್ಯುಲೆನ್ಸ್ನಲ್ಲಿ ಕೊಂಡ್ಯೊಯ್ಯಲು ಮನವೊಲಿಸಿದರೂ ಪಾಲಕರು ಪ್ರತಿಭಟನೆಯನ್ನು ಮುಂದುವರೆಸಿದರು.

    ಯಾವುದೇ ಸಾವು ನೋವುಗಳಾಗದಂತೆ ಎಚ್ಚರಿಕೆಯಿಂದ ವೈದ್ಯರು ಇರಬೇಕು. ಬಾಲಕನ ಸಾವು ವೈದ್ಯರ ನೀಲಕ ಎಂದು ಹೇಳಲಾಗುತ್ತಿದೆ. ಅಧಿಕಾರಿಗಳಿಗೆ ಹೇಳಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ.
    ಎಚ್.ಆರ್.ಗವಿಯಪ್ಪ, ಶಾಸಕ, ಹೊಸಪೇಟೆ

    ವೈದ್ಯರ ನಿರ್ಲಕ್ಷ ಎಂದು ಬಾಲಕನ ಪಾಲಕರು ಆರೋಪಿಸುತ್ತಿದ್ದಾರೆ. ಹಿಂದೆಯೂ ಎರಡು ಮೂರು ಪ್ರಕರಣಗಳ ದಾಖಲಾಗಿದ್ದು, ತಂಡ ರಚನೆ ಮಾಡಿ ಕುಲಂಕುಶವಾಗಿ ಪರಿಶೀಲಿಸಿ ನಿಯಮನುಸಾರ ಕ್ರಮ ಕೈಗೊಳ್ಳಲಾಗುತ್ತದೆ.
    ಶಂಕರ್ ನಾಯ್ಕ, ಡಿಎಚ್.ಒ, ವಿಜಯನಗರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts