More

    ಹೀರೋಯಿನ್ಸ್​ ಅಲ್ಲಿಗೆ ಹೋದರೆ… ತಾಪ್ಸಿಯಿಂದ ಬಾಲಿವುಡ್​ ನೈಟ್​ ಪಾರ್ಟಿಗಳ ಕರಾಳ ರಹಸ್ಯ ಬಯಲು

    ಮುಂಬೈ: ಬಹುಭಾಷಾ ನಟಿ ತಾಪ್ಸಿ ಪನ್ನು ಇಲ್ಲಿಯವರೆಗೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ನಟನೆ ಮಾತ್ರವಲ್ಲದೇ ತಮ್ಮ ನೇರ ನುಡಿಯಿಂದಲೇ ತಾಪ್ಸಿ ಆಗಾಗ ಗಮನ ಸೆಳೆಯುತ್ತಿರುತ್ತಾರೆ. ಇದೀಗ ಸಿನಿಮಾ ಇಂಡಸ್ಟ್ರಿಯಲ್ಲಿ ನಡೆಯುತ್ತಿರುವ ಕೆಲವು ವಿಷಯಗಳ ಬಗ್ಗೆ ತಾಪ್ಸಿ ಬೋಲ್ಡ್​ ಆಗಿಯೇ ಮಾತನಾಡಿದ್ದಾರೆ.

    ಹೊರಗಡೆಗೆ ಹೋಲಿಸಿದರೆ ಸಿನಿಮಾ ಇಂಡಸ್ಟ್ರಿಯಲ್ಲಿ ಕಾರ್ಯಕ್ರಮಗಳು ಮತ್ತು ಪಾರ್ಟಿಗಳು ಸಹಜವಾಗಿಯೇ ಹೆಚ್ಚಿದೆ. ಬಾಲಿವುಡ್ ಇಂಡಸ್ಟ್ರಿಯಲ್ಲಿಯೂ ಕಾರ್ಯಕ್ರಮಗಳು ಹಾಗೂ ಪಾರ್ಟಿಗಳು ಆಗಾಗ ನಡೆಯುತ್ತಿರುತ್ತವೆ. ಆದರೆ, ಈ ಪಾರ್ಟಿಗಳಲ್ಲಿ ತಾಪ್ಸಿ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಬರ್ತ್ ಡೇ ಪಾರ್ಟಿಗಳು, ಕಾರ್ಯಕ್ರಮಗಳು ಮತ್ತು ಫಂಕ್ಷನ್​​ಗಳು ಇವೆಲ್ಲದರಿಂದ ತಾಪ್ಸಿ ದೂರ ಉಳಿದಿದ್ದಾರೆ. ಇದಕ್ಕೆ ಕಾರಣ ಏನು ಎಂದು ಕೇಳಿದಾಗ, ತಾಪ್ಸಿ ಅವರು ಕೆಲವು ಆಸಕ್ತಿದಾಯಕ ಕಾಮೆಂಟ್‌ಗಳನ್ನು ಮಾಡಿದ್ದಾರೆ.

    ತಾಪ್ಸಿ ಅವರು ಜುಮ್ಮಂಡಿ ನಾಧಂ ಚಿತ್ರದ ಮೂಲಕ ಟಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಈ ಚಿತ್ರದ ನಂತರ ತಾಪ್ಸಿಗೆ ಒಳ್ಳೆ ಹೆಸರು ಬಂದರೂ ಹೆಚ್ಚು ಅವಕಾಶಗಳು ಸಿಗಲಿಲ್ಲ. ಹೀಗಾಗಿ ತಾಪ್ಸಿ ಅವರು ಟಾಲಿವುಡ್​ನಿಂದ ಬಾಲಿವುಡ್​ಗೆ ಶಿಫ್ಟ್ ಆದರು. ಸದ್ಯ ಅವರು ಸತತ ಹಿಂದಿ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಬಾಲಿವುಡ್‌ನಲ್ಲಿ ಸಿನಿಮಾ ಮಾಡಿದರೂ ಅಲ್ಲಿ ನಡೆಯುವ ಪಾರ್ಟಿಗಳಿಗೆ ತಾಪ್ಸಿ ಹಾಜರಾಗುವುದಿಲ್ಲ. ಅದಕ್ಕೆ ಕಾರಣ ಏನಿರಬಹುದು ಎಂದು ಕೇಳಿದಾಗ, ತಾಪ್ಸಿ ಹೇಳಿದ್ದೇನೆಂದರೆ, ತಮ್ಮ ಹುಟ್ಟುಹಬ್ಬದ ಪಾರ್ಟಿಗಳಿಗೆ ಆಹ್ವಾನಿಸುವಂತೆ ಬಾಲಿವುಡ್​ನ ದೊಡ್ಡವರಿಗೆ ಮೆಸೇಜ್​ ಮಾಡುವಂತೆ ನನಗೆ ಹೇಳುತ್ತಾರೆ. ಆದರೆ, ಆ ರೀತಿ ಮಾಡಲು ನನ್ನಿಂದ ಸಾಧ್ಯವಿಲ್ಲ. ಏಕೆಂದರೆ ಅದು ನಾನಲ್ಲ. ನಾನು 10 ಗಂಟೆಯವರೆಗೂ ಉಳಿಯಲಾರೆ, ಬೆಳಗ್ಗೆ ಬೇಗ ಏಳುವುದರಿಂದ ರಾತ್ರಿ ಬೇಗನೆ ಮಲಗುವ ಹವ್ಯಾಸ ಇದೆ. ಅಲ್ಲದೆ, ನನಗೆ ಆಲ್ಕೋಹಾಲ್​ ಮತ್ತು ಧೂಮಪಾನದ ಅಭ್ಯಾಸವಿಲ್ಲ. ಹಾಗಾಗಿ ಪಾರ್ಟಿಯಲ್ಲಿ ಏನು ಮಾಡಬೇಕೆಂದು ನನಗೆ ತಿಳಿದಿಲ್ಲ. ನಾನು ನನ್ನ ಫ್ರೆಂಡ್ಸ್​ ಜತೆ ಪಾರ್ಟಿ ಮಾಡುತ್ತೇನೆ ಅಲ್ಲಿ ನಾನು ನೃತ್ಯ ಮಾಡುತ್ತೇನೆ ಮತ್ತು ಬಹಳಷ್ಟು ತಿನ್ನುತ್ತೇನೆ. ನನಗೆ ಅಷ್ಟಾಗಿ ಗೊತ್ತಿಲ್ಲದ ಜನರೊಂದಿಗೆ ನಾನು ಪಾರ್ಟಿ ಮಾಡಲು ಸಾಧ್ಯವಿಲ್ಲ. ನಾನು ಬರುವುದಿಲ್ಲ ಎಂದು ಜನರಿಗೆ ಗೊತ್ತಿದೆ. ಹಾಗಾಗಿ ಅವರು ನನ್ನನ್ನು ಕರೆಯುವುದಿಲ್ಲ. ನಾನು ಪಾರ್ಟಿ ಮಾಡದಿದ್ದರೆ ನನಗೆ ಯಾವುದೇ ಸಿನಿಮಾ ಆಫರ್​ ಸಿಗುವುದಿಲ್ಲ ಎಂದರ್ಥವಲ್ಲ ಎಂದರು.

    ಬಾಲಿವುಡ್​ನಲ್ಲಿ ಕೆಲವು ಕ್ಯಾಂಪ್​ಗಳಿವೆ. ಸ್ವಜನಪಕ್ಷಪಾತ ಇಲ್ಲಿನ ಪ್ರಮುಖ ಸಮಸ್ಯೆಯಾಗಿದೆ. ದೊಡ್ಡ ಬಜೆಟ್​ ಸಿನಿಮಾಗಳನ್ನು ಮಾಡಿದಾಗ ಪಾತ್ರಕ್ಕೆ ನಾನು ಹೊಂದುವುದಿಲ್ಲ ಎಂದು ಹೇಳುವ ಮೂಲಕ ನನಗೆ ಯಾರೂ ಅಗೌರವ ತೋರುವುದಿಲ್ಲ ಎಂಬ ನಂಬಿಕೆ ಇದೆ. ಆದರೆ, ಕ್ಯಾಂಪ್​ಗಳಲ್ಲಿ ಭಾಗವಹಿಸಿದ ಇತರೆ ಕಲಾವಿದರು ನನ್ನ ಹೆಸರನ್ನು ಉಲ್ಲೇಖಿಸದೇ ಇರಬಹುದು ಅಥವಾ ಶಿಫಾರಸು ಮಾಡದೇ ಇರಬಹುದು. ಈ ಕ್ಯಾಂಪ್​ಗಳನ್ನು ಪ್ರವೇಶಿಸಲು ನೈಟ್​ ಪಾರ್ಟಿಗಳು ಒಂದು ಮಾರ್ಗ. ನೀವು ಪಾರ್ಟಿಯಲ್ಲಿ ಜನರೊಂದಿಗೆ ಬೆರೆಯುತ್ತೀರಿ ಹಾಗೂ ಸ್ನೇಹಿತರಾಗುತ್ತೀರಿ. ಇದಾದ ಬಳಿಕ ಸಿನಿಮಾದಲ್ಲಿ ಅವಕಾಶವೂ ಸಿಗುತ್ತದೆ. ಆದರೆ, ಅವಕಾಶಕ್ಕಾಗಿ ನೈಟ್​ ಪಾರ್ಟಿ ಪ್ರಕ್ರಿಯೆ ಮೂಲಕ ಹೋಗಬೇಕಾದ ಅನಿವಾರ್ಯತೆ ನನಗಿಲ್ಲ. ಇದು ನನಗೆ ಇಷ್ಟವೂ ಇಲ್ಲ. ಅಂತಹ ವ್ಯಕ್ತಿಯು ನಾನಲ್ಲ ಎಂದು ಹೇಳುವ ಮೂಲಕ ನಟಿ ತಾಪ್ಸಿ, ಬಾಲಿವುಡ್​ನ ನೈಟ್​ ಪಾರ್ಟಿಗಳ ಕರಾಳ ಮುಖವನ್ನು ಬಿಚ್ಚಿಟ್ಟಿದ್ದಾರೆ.

    ಸಿನಿಮಾ ವಿಚಾರಕ್ಕೆ ಬರುವುದಾದರೆ ಸದ್ಯ ತಾಪ್ಸಿ ಅವರು ತಮ್ಮ ಮುಂದಿನ ಚಿತ್ರ ಫಿರ್ ಆಯಿ ಹಸೀನ್ ದಿಲ್ರುಬಾ ಸಿನಿಮಾ ಪ್ರಚಾರದಲ್ಲಿ ಬಿಜಿಯಾಗಿದ್ದಾರೆ. ಅಲ್ಲದೆ, ತಾಪ್ಸಿ ಬಾಲಿವುಡ್‌ನಲ್ಲಿ ಸರಣಿ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಇದಲ್ಲದೆ, ತಾಪ್ಸಿ ಕೆಲವು ಸಮಯದಿಂದ ಒಬ್ಬ ವ್ಯಕ್ತಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಮತ್ತು ಶೀಘ್ರದಲ್ಲೇ ಆ ವ್ಯಕ್ತಿಯನ್ನು ಮದುವೆಯಾಗಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. (ಏಜೆನ್ಸೀಸ್​)

    ಮಗಳಿಂದಲೇ ಬಯಲಾಯ್ತು ನಟಿ ಲಕ್ಷ್ಮೀಗಿದ್ದ ಅಫೇರ್! ದಾಂಪತ್ಯ ದ್ರೋಹದ ಗುಟ್ಟು ಬಿಚ್ಚಿಟ್ಟ ಮಾಜಿ ಗಂಡ

    ಆನ್​ಲೈನ್​​ ಟ್ರೋಲ್​ಗಳಿಗೆ ಬೇಸತ್ತು ಸಾವಿಗೆ ಶರಣಾದ ಮಹಿಳೆ!? ಸಿಎಂ ಜಗನ್ ಕಂಬನಿ, 20 ಲಕ್ಷ ರೂ. ಪರಿಹಾರ​

    ಶೂಟಿಂಗ್​ ವೇಳೆ ಹಾವು ಕಚ್ಚಿ ಒಬ್ಬ ಸತ್ತೇ ಹೋದ; ದೇವಿ ಚಿತ್ರದ ಶಾಕಿಂಗ್ ಸಂಗತಿ ಬಿಚ್ಚಿಟ್ಟ ಪ್ರೇಮಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts