

ಬೆಂಗಳೂರು: ನಟಿ ಪ್ರೇಮಾ ತೆಲುಗು, ಮಲಯಾಳಂ, ಕನ್ನಡ ಸಿನಿಮಾದಲ್ಲಿ ಬಹುಬೇಡಿಕೆಯ ನಟಿಯರ ಸಾಲಿನಲ್ಲಿ ಒಬ್ಬರಾಗಿದ್ದರು. 90 ರ ದಶಕದ ಈ ನಟಿ ಅನೇಕ ಹಿಟ್ ಸಿನಿಮಾಗಳಲ್ಲಿ ಕಾಣಿಸಿಕೊಂಡಟಿದ್ದಾರೆ. ಪ್ರೇಮಾ ಸಿನಿಮಾ ಚಿತ್ರೀಕರಣದ ವೇಳೆ ನಡೆದಿರುವ ಒಂದು ಘಟನೆಯಿಂದ ವ್ಯಕ್ತಿಯೊಬ್ಬ ಪ್ರಾಣ ಕಳೆದುಕೊಂಡಿರುವ ಘಟನೆಯ ಕುರಿತಾಗಿ ಹೇಳಿದ್ದಾರೆ.
ಕೋಡಿ ರಾಮಕೃಷ್ಣ ಟಾಲಿವುಡ್‌ನ ಖ್ಯಾತ ನಿರ್ದೇಶಕರಲ್ಲಿ ಒಬ್ಬರು. ಇವರು ಇದೀಗ ನಮ್ಮ ಜತೆ ಇಲ್ಲ. ಆದರೆ ಇವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಅನೇಕ ಸಿನಿಮಾಗಳಿವೆ. ಕೋಡಿ ರಾಮಕೃಷ್ಣ ನಿರ್ದೇಶನದ ಸೂಪರ್ ಹಿಟ್ ಚಿತ್ರಗಳಲ್ಲಿ ದೇವಿ ಚಿತ್ರವೂ ಒಂದು.ಈ ಸಿನಿಮಾ ಬಿಡುಗಡೆಯಾಗಿ ಇಂದಿಗೆ 25 ವರ್ಷಗಳಾಗಿವೆ. ನಟಿ ಪ್ರೇಮಾ ಈ ಸಿನಿಮಾ ಕುರಿತಾಗಿ ಮಾತನಾಡಿದ್ದು ಈಗ ವೈರಲ್ ಆಗಿದೆ.
ನಟಿ ಪ್ರೇಮಾ ಮಾತನಾಡಿ, ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಆ ಕಾಲದಲ್ಲಿ ಲೇಡಿ ಓರಿಯೆಂಟೆಡ್ ಸಿನಿಮಾಗಳು ದೊಡ್ಡ ರಿಸ್ಕ್ ಆಗಿದ್ದರೂ ಕೋಡಿ ರಾಮಕೃಷ್ಣ ಅವರು ಈ ಸಿನಿಮಾ ಮಾಡಿ ಸೂಪರ್ ಹಿಟ್ ಮಾಡಿದ್ದಾರೆ. ಒಂದೊಂದು ಸೀನ್ ಗೆ 50 ಟೇಕ್ ತೆಗೆದು ಕೊಂಡಿದ್ದು ಇದೆ. ಈ ಸಿನಿಮಾ ಡೈಲಾಗ್ ಚೆನ್ನಾಗಿ ಅಭ್ಯಾಸ ಮಾಡಿದ್ದೇನು. ದೇವಿ ಹೇಗೆ ಮಾತನಾಡುತ್ತಾಳೆ, ಹಾವಭಾವ ಹೇಗಿರುತ್ತದೆ ಎಂಬುದನ್ನು ಕ್ಲೋಸ್‌ಅಪ್ ಮಾಡಿದ್ದೇವೆ ಎಂದು ಪ್ರೇಮಾ ಹೇಳಿದ್ದಾರೆ.
ಈ ಚಿತ್ರಕ್ಕಾಗಿ ತುಂಬಾ ಕಷ್ಟಪಟ್ಟಿದ್ದೇವೆ.. ಚಿತ್ರೀಕರಣದ ವೇಳೆ ಹಾವೊಂದು ವ್ಯಕ್ತಿಯೊಬ್ಬನಿಗೆ ಕಚ್ಚಿದೆ. ಆಸ್ಪತ್ರೆಗೆ ಕರೆದೊಯ್ದರೂ ಬದುಕಲು ಸಾಧ್ಯವಾಗಲಿಲ್ಲ. ಚಿತ್ರ ಬಿಡುಗಡೆಯಾದ ನಂತರ ನಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಂತಾಯಿತು. ಸಿನಿಮಾ ಸೂಪರ್ ಡೂಪರ್ ಹಿಟ್ ಆಯಿತು. ಇಷ್ಟು ರೇಂಜ್ ಹಿಟ್ ಸಿಗುತ್ತೆ ಅಂತ ನಿರೀಕ್ಷೆ ಮಾಡಿರಲಿಲ್ಲ ಎಂದಿದ್ದಾರೆ ಪ್ರೇಮಾ.
ನಾಗರಹಾವಿನ ಹಿನ್ನೆಲೆಯಲ್ಲಿ ತಯಾರಾದ ದೇವಿ ಸಿನಿಮಾ ಸೂಪರ್ ಹಿಟ್ ಆಯಿತು. ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದು ಇದೇ ಚಿತ್ರದ ಮೂಲಕ. ದೇವಿ ಸಿನಿಮಾದಲ್ಲಿ ಇವರು ನೀಡಿರುವ ಸಂಗೀತ ಸಿನಿಮಾದ ಹೈಲೈಟ್ ಆಗಿತ್ತು. ನಟಿ ಪ್ರೇಮಾ ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಅದು ಆ ಕಾಲಕ್ಕೆ ಲೇಡಿ ಓರಿಯೆಂಟೆಡ್ ಸಿನಿಮಾ.