More

  ಮಗಳಿಂದಲೇ ಬಯಲಾಯ್ತು ನಟಿ ಲಕ್ಷ್ಮೀಗಿದ್ದ ಅಫೇರ್! ದಾಂಪತ್ಯ ದ್ರೋಹದ ಗುಟ್ಟು ಬಿಚ್ಚಿಟ್ಟ ಮಾಜಿ ಗಂಡ

  ಚೆನ್ನೈ: ಹಿರಿಯ ನಟಿ ಲಕ್ಷ್ಮೀ ಅವರ ವೈಯಕ್ತಿಕ ಬದುಕಿನ ರಹಸ್ಯಗಳು ಇತ್ತೀಚೆಗೆ ಹೆಚ್ಚು ಚರ್ಚೆಯಲ್ಲಿದೆ. ಲಕ್ಷ್ಮೀ ಅವರು ಮೂರು ಮದುವೆ ಆಗಿರುವ ಸಂಗತಿ ಎಲ್ಲರಿಗೂ ತಿಳಿದೇ ಇದೆ. ಭಾಸ್ಕರನ್​ ಎಂಬುವರು ಮೊದಲ ಗಂಡ. ಇವರಿಗೆ ಐಶ್ವರ್ಯಾ ಭಾಸ್ಕರನ್​ ಹುಟ್ಟಿದರು. ಈಕೆಯೂ ಕೂಡ ನಟಿ. ಮೊದಲ ಮದುವೆ ಮುರಿದುಬಿದ್ದ ಬಳಿಕ ನಟಿ ಲಕ್ಷ್ಮೀ ಮೋಹನ್​ ಶರ್ಮಾ ಎಂಬುವರನ್ನು ಎರಡನೇ ವಿವಾಹವಾದರು. ಆದರೆ, ಕೆಲವೇ ವರ್ಷಗಳಲ್ಲಿ ಇಬ್ಬರ ಸಂಬಂಧ ಮುರಿದುಬಿದ್ದಿತು. ಇದಾದ ಬಳಿ ನಟ ಹಾಗೂ ನಿರ್ದೇಶಕ ಎಂ. ಶಿವಚಂದ್ರನ್​ ಎಂಬುವರನ್ನು ವಿವಾಹವಾಗಿದ್ದಾರೆ. ಇಬ್ಬರು ಮಗಳೊಬ್ಬಳನ್ನು ದತ್ತು ತೆಗೆದುಕೊಂಡಿದ್ದಾರೆ. ಐಶ್ವರ್ಯಾ ಭಾಸ್ಕರನ್​ ಬಾಲ್ಯದಲ್ಲಿದ್ದಾಗ ಮೋಹನ್​ ಶರ್ಮಾ ಅವರು ಮಲತಂದೆಯಾಗಿದ್ದರು.

  ಇತ್ತೀಚೆಗೆ ಇಂಡಿಯಾ ಗ್ಲಿಟ್ಚ್​ ಮಾಧ್ಯಮಕ್ಕೆ ಸಂದರ್ಶನ ನೀಡಿದ ಮೋಹನ್​ ಶರ್ಮಾ, ನಟಿ ಲಕ್ಷ್ಮೀ ಅವರೊಂದಿಗಿನ ವೈವಾಹಿಕ ಜೀವನದ ಕೆಲವೊಂದು ರಹಸ್ಯ ಮಾಹಿತಿಗಳನ್ನು ಬಿಚ್ಚಿಟ್ಟಿದ್ದು, ಸಿನಿ ಲೋಕದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಲಕ್ಷ್ಮೀಯೊಂದಿಗಿನ ಬ್ರೇಕಪ್​ ಮತ್ತು ಐಶ್ವರ್ಯಾ ಜತೆ ಲಕ್ಷ್ಮೀ ಅವರಿಗಿದ್ದ ಸಮಸ್ಯೆಗಳ ಬಗ್ಗೆ ಮಾತನಾಡಿದ್ದಾರೆ. ಮದುವೆಯ ನಂತರವೂ ಲಕ್ಷ್ಮೀ ಅವರಿಗೆ ಮತ್ತೊಬ್ಬನೊಂದಿಗೆ ವಿವಾಹೇತರ ಸಂಬಂಧ ಇತ್ತು ಎಂದು ಆರೋಪ ಮಾಡಿದ್ದಾರೆ. ಮೋಹನ್​ ಶರ್ಮಾ ಏನು ಹೇಳಿದರು ಎಂಬುದನ್ನು ವಿವರವಾಗಿ ನೋಡೋಣ.

  ಐಶ್ವರ್ಯಾ ಭಾಸ್ಕರನ್​ಗೆ 12 ರಿಂದ 13 ವರ್ಷ ವಯಸ್ಸಿನವರೆಗೂ ನಾನು ಆಕೆಗೆ ಮಲತಂದೆಯಾಗಿದ್ದೆ. ನಾನು ಹೆಚ್ಚಿಗೆ ಆಕೆಯೊಂದಿಗೆ ಮಾತನಾಡುತ್ತಿರಲಿಲ್ಲ. ಸಂದರ್ಭಾನುಸಾರ ಮಾತನಾಡುತ್ತಿದ್ದೆ. ನನ್ನ ಸಲಹೆಯ ಹೊರತಾಗಿಯೂ ಆಕೆಯು ಸಹ ಕೆಲವೊಂದು ಮಿಸ್ಟೇಕ್​ಗಳನ್ನು ಮಾಡಿದ್ದಾಳೆ. ಒಂದು ಸಂದರ್ಭದಲ್ಲಿ ನಾನು ಆಕೆಯ ಶಾಲೆಗೆ ಭೇಟಿ ನೀಡಿ, ನೀನು ನನ್ನೊಂದಿಗೆ ಉಳಿದುಕೊಳ್ಳುತ್ತೀಯಾ ಎಂದು ಕೇಳಿದ್ದೆ. ಆಗ ಐಶ್ವರ್ಯಾ ಕಣ್ಣೀರಾಕಿದ್ದಳು. ಅದು ಹೇಗೆ ಸಾಧ್ಯ, ನೀವು ನನ್ನ ಹೆತ್ತ ತಂದೆಯಲ್ಲ ಎಂದಿದ್ದಳು.

  ಲಕ್ಷ್ಮೀಗೆ ಮಗಳು ಐಶ್ವರ್ಯಾ ಮೇಲೆ ತುಂಬಾ ಕೋಪವಿತ್ತು. ಮಗಳ ವರ್ತನೆಯಿಂದ ಬೇಸತ್ತು ಅವಳ ಮೇಲೆ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದರು. ಮುಂದುವರಿದ ಭಾಗವಾಗಿ ಹೆಣ್ಣು ಮಗುವೊಂದನ್ನು ದತ್ತು ಸಹ ಪಡೆದರು. ತಾಯಿಯ ಮಮತೆಯಿಂದ ಆಕೆ ದತ್ತು ಪಡಿಯಲಿಲ್ಲ, ಬದಲಾಗಿ ಮಗಳಿಗೆ ಪಾಠ ಕಲಿಸಬೇಕೆಂಬ ಉದ್ದೇಶದಿಂದ ದತ್ತು ಪಡೆದರು. ಮಗು ಮತ್ತು ಆಕೆಯ ತಾಯಿಯನ್ನು ಲಕ್ಷ್ಮೀ ಜತೆಯಲ್ಲೇ ಇರಿಸಿಕೊಂಡರು. ಈ ನಡೆಯಿಂದ ಐಶ್ವರ್ಯಾ ಮತ್ತು ಆಕೆಯ ಅಜ್ಜಿ ಬೇಸರಗೊಂಡರು. ಒಮ್ಮೆ ಐಶ್ವರ್ಯಾ ನನಗೆ ಕರೆ ಮಾಡಿ ನನ್ನನ್ನು ನೋಡುವ ಆಸೆಯನ್ನು ವ್ಯಕ್ತಪಡಿಸಿದಳು ಎಂದು ಮೋಹನ್​ ಶರ್ಮಾ ಹೇಳಿದ್ದಾರೆ.

  ಡಿವೋರ್ಸ್​ ಬೇಕೆಂದು ಮೊದಲು ಬಯಸಿದ್ದೇ ಲಕ್ಷ್ಮೀ. ಇಬ್ಬರ ನಡುವೆ ವೈಮನಸ್ಸು ಮೂಡಿದಾಗ ಬೇರೆ ಬೇರೆ ಬೆಡ್​ರೂಮ್​ನಲ್ಲಿ ವಾಸವಿದ್ದೆವು. 1985ರಲ್ಲಿ ವಿಂಬಲ್ಡನ್​ ಫೈನಲ್​ ಪಂದ್ಯ ನಡೆಯುತ್ತಿತ್ತು. ಈ ವೇಳೆ ಐಶ್ವರ್ಯಾ ನನ್ನ ಬಳಿ ಬಂದು ಪಂದ್ಯ ವೀಕ್ಷಿಸುತ್ತಿದ್ದಳು. ಇದ್ದಕ್ಕಿದ್ದಂತೆ ಆಕೆ ಅಳಲು ಶುರು ಮಾಡಿದಳು. ಏಕೆ? ಏನಾಯಿತು? ಎಂದು ಪ್ರಶ್ನೆ ಮಾಡಿದಾಗ ನೀವು ಮನೆಯಲ್ಲಿ ಇಲ್ಲದ ಸಮಯದಲ್ಲಿ ತಾಯಿ ಮತ್ತೊಬ್ಬ ವ್ಯಕ್ತಿಯ ಜತೆ ಆಗಾಗ ಮಾತನಾಡುತ್ತಿರುತ್ತಾರೆ ಎಂದು ಹೇಳಿದಳು. ಈ ಮಾತು ಕೇಳಿದ ಬಳಿಕ ಅದೇ ದಿನ ನಾನು ನನ್ನ ಬಟ್ಟೆಗಳನೆಲ್ಲ ಒಂದು ಸೂಟ್​ಕೇಸ್​ಗೆ ತುಂಬಿಕೊಂಡು ಮನೆಯನ್ನು ಬಿಟ್ಟು ಹೋದೆ ಎಂದು ಮೋಹನ್​ ಶರ್ಮಾ ತಿಳಿಸಿದರು.

  ನಾನು ಮನೆಯನ್ನು ಬಿಟ್ಟಾಗ ಐಶ್ವರ್ಯಾಗೆ 12 ವರ್ಷ. ಮನೆ ಬಿಟ್ಟು ನಮ್ಮ ಮನೆಗೆ ಬಂದೆ. ನನ್ನ ಕುಟುಂಬದ ಒತ್ತಾಯದ ಮೇರೆಗೆ ನಾನು ಎರಡನೇ ಮದುವೆಯಾದೆ. ಓರ್ವ ಗಂಡು ಮಗನಿದ್ದಾನೆ. ಆತ ಜರ್ಮನಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ ಎಂದು ಮೋಹನ್​ ಶರ್ಮಾ ಇದೇ ಸಂದರ್ಭದಲ್ಲಿ ಹೇಳಿದರು. (ಏಜೆನ್ಸೀಸ್​)

  ನಾಯಿ ರೀತಿ ಇರುತ್ತೇನೆಂದರು, ರೂಮಿಗೆ ಕರೆದರು… ಹಲವು ವರ್ಷಗಳ ಬಳಿಕ ನಟಿ ಲಕ್ಷ್ಮೀ ರಹಸ್ಯ ಬಯಲು

  ಕುಡಿಯೋ ನೀರಿಗಾಗಿ 20 ಲೀಟರ್ ಪ್ಲಾಸ್ಟಿಕ್​ ಕ್ಯಾನ್‌ ಬಳಸುತ್ತೀರಾ? ಆರೋಗ್ಯಕ್ಕೆ ತುಂಬಾ ಡೇಂಜರ್​!

  ಮಂಚಕ್ಕೆ ಕರೆಯುವ ಮೈದುನ, ಅಡ್ಜಸ್ಟ್​ ಮಾಡ್ಕೋ ಎಂದ ಗಂಡ! ಕೋರ್ಟ್​ ಮೆಟ್ಟಿಲೇರಿ ಕಣ್ಣೀರಿಟ್ಟ ನಟಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts