ನಿಮ್ಮ ಮಕ್ಕಳು ಕಾಟನ್​ ಕ್ಯಾಂಡಿ (ಬಾಂಬೆ ಮಿಠಾಯಿ) ತಿಂದರೆ ಕ್ಯಾನ್ಸರ್​ ಖಚಿತ: ಪುಟಾಣಿಗಳ ಪ್ರೀತಿಯ ಮಿಠಾಯಿ ತಮಿಳುನಾಡಿನಲ್ಲಿ ಸಂಪೂರ್ಣ ಬ್ಯಾನ್​

ಚೆನ್ನೈ: ತಮಿಳುನಾಡು ರಾಜ್ಯದಲ್ಲಿ ಕಾಟನ್​ ಕ್ಯಾಂಡಿ (ಬಾಂಬೆ ಮಿಠಾಯಿ) ಮಿಠಾಯಿ ಮಾರಾಟವನ್ನು ನಿಷೇಧಿಸಲಾಗಿದೆ. ಈ ಮಿಠಾಯಿ ತಯಾರಿಕೆಗೆ ಆರೋಗ್ಯಕ್ಕೆ ಹಾನಿಕಾರಕವಾದ ರೋಡಮೈನ್-ಬಿ ರಾಸಾಯನಿಕ ಬಳಸುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರ ಶನಿವಾರ ರಾಜ್ಯದಲ್ಲಿ ಇದರ ಮಾರಾಟ ಮತ್ತು ತಯಾರಿಕೆಯನ್ನು ನಿಷೇಧಿಸಿದೆ. ಆಹಾರ ಸುರಕ್ಷತಾ ಇಲಾಖೆಯು ಕಾಟನ್​ ಕ್ಯಾಂಡಿಯ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಿದ್ದು, ಅದರಲ್ಲಿ ‘ಕ್ಯಾನ್ಸರ್ ಉಂಟು ಮಾಡುವ’ ರೋಡಮೈನ್-ಬಿ ಇರುವಿಕೆಯನ್ನು ಪತ್ತೆ ಹಚ್ಚಲಾಗಿದೆ ಎಂದು ತಮಿಳುನಾಡು ಆರೋಗ್ಯ ಸಚಿವ ಮಾ ಸುಬ್ರಮಣಿಯನ್ ಹೇಳಿದ್ದಾರೆ. ಆಹಾರ ಸುರಕ್ಷತಾ ಗುಣಮಟ್ಟ … Continue reading ನಿಮ್ಮ ಮಕ್ಕಳು ಕಾಟನ್​ ಕ್ಯಾಂಡಿ (ಬಾಂಬೆ ಮಿಠಾಯಿ) ತಿಂದರೆ ಕ್ಯಾನ್ಸರ್​ ಖಚಿತ: ಪುಟಾಣಿಗಳ ಪ್ರೀತಿಯ ಮಿಠಾಯಿ ತಮಿಳುನಾಡಿನಲ್ಲಿ ಸಂಪೂರ್ಣ ಬ್ಯಾನ್​